ಚಾಕಲೇಟ್ನಿಂದ(Chocolate) ದೂರ ಇರಿ : ಮಕ್ಕಳಿಗೆ ಚಾಕ್ಲೇಟ್ ಅಂದ್ರೆ ತುಂಬಾ ಇಷ್ಟ. ಹೌದು ಒಳ್ಳೆ ಗುಣಮಟ್ಟದ ಡಾರ್ಕ್ ಚಾಕ್ಲೇಟ್(Dark Chocolate) ಮತ್ತು ಕೋಕೋದಿಂದ ಹಲವಾರು ರೀತಿಯ ಆರೋಗ್ಯಕರ ಲಾಭಗಳಿವೆ. ಆದರೆ ಅತಿಯಾದರೆ ಅಮೃತ ಕೂಡ ವಿಷ ಆಗುತ್ತೆ ಅಲ್ವಾ.

ಹಾಗೆ ಅತಿಹೆಚ್ಚು ಚಾಕ್ಲೇಟ್ ಸೇವನೆ ಮಕ್ಕಳಿಗೆ ಭಾರೀ ಡೇಂಜರ್. ಅದ್ರಲ್ಲೂ ಕಳಪೆ ಗುಣಮಟ್ಟದ ಚಾಕಲೇಟ್ ಮಾರಣಾಂತಿಕ ಕಾಯಿಲೆಗಳನ್ನೇ ತರಬಹುದು ಗೊತ್ತಾ?
ಹೊರಬಿತ್ತು ಕಟು ಸತ್ಯ : ಹೌದು, ಅಧ್ಯಯನವೊಂದರಲ್ಲಿ ಶಾಕಿಂಗ್ ಅಂಶವೊಂದು ಹೊರಬಿದ್ದಿದೆ. ಹೆಚ್ಚು ಚಾಕ್ಲೇಟ್ ಸೇವನೆ ಮಕ್ಕಳಲ್ಲಿ ಟೈಪ್ 2 ಡಯಾಬಿಟಿಸ್(Type 2 Diabities) ತರಲಿದೆ. ಅದ್ರಲ್ಲೂ ಮಕ್ಕಳು ಸೇವಿಸುವ ಸಂಸ್ಕರಿತ ಆಹಾರ ,ಫಾಸ್ಟ್ ಫುಡ್ ಮತ್ತು ಚಾಕ್ಲೇಟ್ ಟೈಪ್ 2 ಡಯಾಬಿಟಿಸ್ಗೆ ಮುಖ್ಯ ಕಾರಣವಾಗ್ತಿದೆ.
ಇದನ್ನೂ ಓದಿ : https://vijayatimes.com/state-bjp-reminds-siddaramaiah/
ಅತಿ ಹೆಚ್ಚು ಚಾಕ್ಲೆಟ್ ಸೇವನೆಯಿಂದ ಇನ್ಸುಲಿನ್ ನ(Insulin) ಸಂವೇದನೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಟೈಪ್ 2 ಡಯಾಬಿಟಿಸ್ ಉಂಟಾಗಬಹುದು.
ಹೈಪರ್ ಆಕ್ಟೀವ್ನೆಸ್ ಬರುತ್ತೆ : ಚಾಕ್ಲೆಟ್ನಲ್ಲಿರುವ ರಿಫೈಂಡ್ ಸಕ್ಕರೆ ರಕ್ತ ನಾಳಗಳಿಗೆ ಸುಲಭವಾಗಿ ತಲುಪುತ್ತದೆ. ಇದರಿಂದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದು ಅಡ್ರಿನಾಲಿನ್(Adranaline) ಉತ್ಪಾದನೆ ಹೆಚ್ಚು ಮಾಡುತ್ತೆ. ಇದರಿಂದ ಮಗು ಹೆಚ್ಚು ಕ್ರಿಯಾ ಶೀಲತೆಯಿಂದ ಇರುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಇನ್ನೂ 1ಔನ್ಸ್ ಹಾಲಿನ ಚಾಕ್ಲೇಟ್ ನಲ್ಲಿ 5 ಮಿಲಿಗ್ರಾಮಿನಷ್ಟು ಕೆಫಿನ್ ಹೊಂದಿರುತ್ತದೆ.

ಈ ಕೆಫಿನ್(Caffine) ಲಘುವಾದ ಮೂತ್ರ ವರ್ಧಕ ಗುಣ ಹೊಂದಿದೆ. ಇದರಿಂದಾಗಿ ನಿಮ್ಮ ಮಗುವು ಆಗಾಗ ಮೂತ್ರ ವಿಸರ್ಜನೆ ಮಾಡಬಹುದು. ಇದು ಮಕ್ಕಳಿಗೆ ಚಾಕ್ಲೇಟ್ ನೀಡುವ ಮತ್ತೊಂದು ಅಡ್ಡಪರಿಣಾಮ.
ನಿದ್ರಾಹೀನತೆ ಕಾಡಬಹುದು ಜೋಕೆ : ಚಾಕಲೇಟ್ ನಲ್ಲಿರುವ ಕೆಫಿನ್ ಅಂಶ ನಮ್ಮ ಮಗುವಿಗೆ ನಿದ್ರೆಗೆ ಅಡ್ಡಿಯುಂಟು ಮಾಡಬಹುದು. ಇದರಿಂದ ಹೆಚ್ಚು ಚಾಕಲೇಟ್ ಕೊಡುವ ಮುನ್ನ ಒಮ್ಮೆ ಯೋಚಿಸಿ.
ಇದನ್ನೂ ಓದಿ : https://vijayatimes.com/milana-blockbuster-cinema/
ಬೇಕರಿ ಐಟಮ್ಸ್ : ಇನ್ನೂ ಬೇಕರಿ(Bakery) ಬಗ್ಗೆ ಹೇಳೋದೇ ಬೇಡ ಬಿಡಿ. ಸಾಮಾನ್ಯವಾಗಿ ನಾವು ಬ್ರೆಡ್ಡನ್ನು ನಿತ್ಯ ಸೇವಿಸ್ತೀವಿ. ಆದ್ರೆ ಈ ಬ್ರೆಡ್ ನಲ್ಲಿ ಬಳಕೆಯಾಗುತ್ತಿದೆ 4 ವಿಷಕಾರಿ ಅಂಶಗಳು. ಅವುಗಳೆಂದರೆ ಸಕ್ಕರೆ, ಮೈದಾ ,ಉಪ್ಪು ಮತ್ತು ಹೈಡ್ರೋಜನ್ ತುಪ್ಪ.
ಅದರಲ್ಲೂ ಬ್ರೆಡ್ ತಯಾರಿಕೆಯಲ್ಲಿ ಬಳಸುವ ಪ್ರಮುಖ ಕೆಮಿಕಲ್ ಎಂದರೆ ಪೊಟಾಶಿಯಂ ಬ್ರೋಮೇಟ್. ಈ ಕೆಮಿಕಲ್ ಅನ್ನು ಬ್ರೆಡ್ ಮಾಡಲು ಉಪಯೋಗಿಸುವ ಹಿಟ್ಟಿನಲ್ಲಿ ಮಿಶ್ರಣ ಮಾಡಲಾಗುತ್ತದೆ, ಏಕೆಂದರೆ ಇದರಿಂದ ಬ್ರೆಡ್ ಹೆಚ್ಚುಕಾಲ ಹಾಳಾಗದೆ ಉಳಿಯುತ್ತದೆ ಮತ್ತು ಚೆನ್ನಾಗಿ ಉಬ್ಬಿಕೊಳ್ಳುತ್ತದೆ ಎನ್ನುವ ಕಾರಣಕ್ಕೆ.

ಆದರೆ ಬ್ರೆಡ್ಡನ್ನು ಹೆಚ್ಚು ಉಷ್ಣಾಂಶದಲ್ಲಿ ಬೇಯಿಸದಿದ್ದರೆ, ಈ ಕೆಮಿಕಲ್ ಬ್ರೆಡ್ಡಿನಲ್ಲಿ ಉಳಿದು ನಮಗೆ ಕ್ಯಾನ್ಸರ್, ಆಯಾಸ ಮತ್ತು ಹಿರಿಯ ವಯಸ್ಕರಂತೆ ಕಾಣುವ ರೋಗಗಳು ಅಂಟಿಕೊಳ್ಳುತ್ತವೆ. ಇದರಿಂದ ಬ್ರೆಡ್ ತಿನ್ನುವ ಮುನ್ನ ಒಮ್ಮೆ ಯೋಚಿಸಿ.
ಉಪ್ಪಿನಕಾಯಿಯಲ್ಲಿದೆ ವಿಷ ರಾಸಾಯನಿಕ : ನಮಗೆ ಊಟಕ್ಕೆ ಉಪ್ಪಿನಕಾಯಿ(Pickle) ಬೇಕೇ ಬೇಕು. ಉಪ್ಪಿನಕಾಯಿ ಭಾರತೀಯರ ಊಟದಲ್ಲಿ ಅಷ್ಟು ಪ್ರಾಮುಖ್ಯತೆ ಪಡೆದಿದೆ. ಉಪ್ಪಿನಕಾಯಿಯನ್ನು ನ್ಯಾಚುರಲ್ ಆಗಿ ಮಾಡಿದ್ರೆ ಓ.ಕೆ. ಆದ್ರೆ ಈಗ ಪ್ಯಾಕೆಟ್ನಲ್ಲಿ ಬರುವ ಈ ರೆಡಿಮೇಡ್ ಉಪ್ಪಿನಕಾಯಿ ಆರೋಗ್ಯಕ್ಕಿಂತ ಅನಾರೋಗ್ಯಕ್ಕೆ ಕಾರಣ ಆಗ್ತಿದೆ ಯಾಕಂದ್ರೆ ಉಪ್ಪಿನಕಾಯಿಯಲ್ಲಿ ಬಳಿಕೆ ಆಗುತ್ತಿದೆ ಸೋಡಿಯಂ ಬೆನ್ಸೊಯೇಟ್ ಎಂಬ ವಿಷಕಾರಿ ಕೆಮಿಕಲ್.
https://youtu.be/N-hn7-K3MoU CITIZEN JOURNALISM
ಇನ್ನು ಈ ಕೆಮಿಕಲ್ ಅನ್ನು ಕೇವಲ ಉಪ್ಪಿನಕಾಯಿಯಲ್ಲಿ ಮಾತ್ರವಲ್ಲ ನಾವು ಉಪಯೋಗಿಸುವ ಜಾಮ್, ಬ್ರೆಡ್ ಜಾಮ್ ,ಸಾಸ್ ಎಲ್ಲದರಲ್ಲೂ ಉಪಯೋಗಿಸ್ತಾರೆ. ಈ ವಿಷಕಾರಿ ಕೆಮಿಕಲ್ ನಿರಂತರವಾಗಿ ಸೇವಿಸುವುದರಿಂದ ನಮ್ಮ ಜೀರ್ಣ ಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಅದರಲ್ಲೂ ಯೂನಿವರ್ಸಿಟಿ ಆಫ್ ಅರಾಸೋನಾ ವರದಿ ಮಾಡಿರುವ ಪ್ರಕಾರ ಡಯೇರಿಯಾ ಇರುವ ವ್ಯಕ್ತಿಗಳು ಹೆಚ್ಚು ಉಪ್ಪಿನಕಾಯಿ ಸೇವಿಸಿದಲ್ಲಿ ಕಿಡ್ನಿ ಫೇಲ್ಯೂರ್, ಹೊಟ್ಟೆ ನೋವು, ರಕ್ತದೊತ್ತಡ ಕಾಯಿಲೆಗಳು ಹೆಚ್ಚಾಗುತ್ತದೆ ಮತ್ತು ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಅನ್ನೋ ಆತಂಕಕಾರಿ ಅಂಶನ ಬಹಿರಂಗ ಪಡಿಸಿದ್ದಾರೆ.

ಪ್ಯಾಕ್ಡ್ ಜ್ಯೂಸ್ ಭಾರೀ ಡೇಂಜರಸ್ : ಜಗತ್ತಿನಲ್ಲಿ ಅತಿಹೆಚ್ಚು ಮಾರಾಟವಾಗುವ ವಸ್ತು ಅಂದ್ರೆ ಅದು ಸಾಫ್ಟ್ ಡ್ರಿಂಕ್ಸ್(Soft Drinks) ಮತ್ತು ಸೋಡಾ. ಆದರೆ ಈ ಕೂಲ್ ಡ್ರಿಂಕ್ಸ್ ನಲ್ಲಿ ಫಾಸ್ಪರಿಕ್ ಆಸಿಡ್ ಅನ್ನು ಬಳಸಲಾಗುತ್ತದೆ. ಇದನ್ನು ಹೆಚ್ಚು ಸೇವಿಸಿದಷ್ಟು ತುಟಿ, ನಾಲಿಗೆ ಗಂಟಲು ಮತ್ತು ಹೊಟ್ಟೆಯನ್ನು ಸುಡುತ್ತದೆ. ಅಷ್ಟೇ ಅಲ್ಲದೆ ವಾಂತಿ, ಹೊಟ್ಟೆ ಸೆಳೆತ ಮತ್ತು ಡಾಏರ್ಯ ತೊಂದರೆಗಳಿಗೆ ತುತ್ತಾಗಬೇಕಾಗುತ್ತದೆ.
ನಮಗೆ ಮಾರ್ಕೆಟ್ಟಿನಲ್ಲಿ ಸಿಗುವ ಪ್ಯಾಕ್ಡ್ ಜ್ಯೂಸ್ ಗಳು ಜಾಹೀರಾತಿನಲ್ಲಷ್ಟೇ ಫ್ರೆಶ್ ಆಗಿರುತ್ತೆ. ಆದ್ರೆ ನಿಜವಾಗಿ ಅದು ಅದರ ಸಾರ ಸತ್ವವನ್ನು ಕಳೆದುಕೊಂಡಿರುವ ಡ್ರಿಂಕ್ಸ್ ಆಗಿರುತ್ತೆ. ಇನ್ನು ಜ್ಯೂಸನ್ನು ಅಷ್ಟೂ ದಿನ ಪ್ಯಾಕ್ ಮಾಡಿ ಸಂಗ್ರಹಿಸಿದ್ರೂ ಅದು ಕೆಡುವುದಿಲ್ಲ ಯಾಕೆ ಗೊತ್ತಾ?
ಏಕೆಂದರೆ ಜ್ಯೂಸನ್ನು ಪಲ್ಪ್ ಮತ್ತು ಎಸೆನ್ಸ್ ನಿಂದ ತಯಾರಿಸಲಾಗಿರುತ್ತದೆ. ಇದರಿಂದ ಪ್ಯಾಕರ್ಡ್ ಜ್ಯೂಸನ್ನು ನಾವು 5-6 ಕೆಲವೊಮ್ಮೆ ವರ್ಷಗಳವರೆಗೂ ಕೆಡದೆ ಇಡಬಹುದು. ಸಾಫ್ಟ್ ಡ್ರಿಂಕ್ಸ್ ಅತಿಹೆಚ್ಚು ಫ್ರುಕ್ಟೋಸ್ ಮತ್ತು ಅಸಿಡಿಕ್ ಸ್ವಭಾವವನ್ನು ಹೊಂದಿರುತ್ತದೆ.
ಅತಿಯಾದ ಸೇವನೆ ದೇಹಕ್ಕೆ ಹಾನಿಕಾರಕ. ಹೆಚ್ಚುವರಿ ಫೈಬರ್ ಕಿಬ್ಬೊಟ್ಟೆಯ ಸೆಳೆತ ಮತ್ತು ಅತಿಸಾರವನ್ನು ಉಂಟು ಮಾಡುವ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.ಅಷ್ಟೇ ಅಲ್ಲ ಎದೆ ಉರಿ, ವಾಕರಿಕೆ ,ವಾಂತಿ ತಲೆನೋವು ಮತ್ತು ನಿದ್ರಾಹೀನತೆ ಇತರ ಸಮಸ್ಯೆಗಳು ಕಾಡಬಹುದು.

ನಾವು ಬಳಸುವ ಪ್ಯಾಕ್ಡ್ ನಾನ್ ವೆಜ್ ಫುಡ್, ತರಕಾರಿ ಎಣ್ಣೆ , ಪೊಟಾಟೊ ಸ್ಟಿಕ್ಸ್ , ಬಬಲ್ ಗಮ್ , ರೆಡಿ ಟು ಯೂಸ್ ಸೂಪ್ ಇದರಲ್ಲಿ ಪ್ರೊಪಿಲ್ ಗ್ಯಾಲೆಟ್ ಎಂಬ ಕೃತಕ ಕೆಮಿಕಲ್ ಗಳನ್ನು ಉಪಯೋಗಿಸಲಾಗುತ್ತದೆ.ಇದು ಬಿಳಿ ಹರಳಿನ ಪುಡಿಯ ರೀತಿಯಲ್ಲಿ ಇರುತ್ತದೆ.
ಇದನ್ನು ಮಾಂಸ ಉತ್ಪನ್ನಗಳು ಮೈಕ್ರೋವೇವ್ ಮಾಡಬಹುದಾದ ಪಾಪ್ ಕಾರ್ನ್ ನಲ್ಲಿ ಮಿಶ್ರಣ ಮಾಡಲಾಗುತ್ತದೆ.ಇದನ್ನು ಹೆಚ್ಚು ಸೇವಿಸುವುದರಿಂದ ಹೊಟ್ಟೆ ಕ್ಯಾನ್ಸರ್ ,ಚರ್ಮ ಮತ್ತು ಕಣ್ಣುಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ ಆದುದರಿಂದ ಇದನ್ನು ಯುಕೆ ,ಜಪಾನ್ ಭಾಗದಲ್ಲಿ ನಿಷೇಧಿಸಲಾಗಿದೆ.
ಇದನ್ನೂ ಓದಿ : https://vijayatimes.com/state-bjp-reminds-siddaramaiah/
ಮುಖ್ಯವಾಗಿ ಎಲ್ಲಾ ಪ್ಯಾಕ್ಡ್ ಆಹಾರಕ್ಕೆ ಪ್ರಿಸರ್ವೇಟರ್ ಅಥವಾ ಆಹಾರ ಕೆಡದಂತೆ ಮಾಡೋ ಕೆಮಿಕಲನ್ನು ಬಳಸಿಯೇ ಬಳಸ್ತಾರೆ. ಈ ಕೆಮಿಕಲ್ನ ಅತೀ ಹೆಚ್ಚು ಸೇವನೆ ಕ್ಯಾನ್ಸರ್ಕಾರಕವಾಗಬಲ್ಲದು.
ಹಾಗಾಗಿ ಸ್ನೇಹಿತ್ರೆ ನೀವು ಇನ್ನು ಮುಂದೆ ಕೆಮಿಕಲ್ಸ್ ಬಳಸದ ಆಹಾರಕ್ಕೆ ಆದ್ಯತೆ ಕೊಡಿ. ಬಾಯಿ ಚಪಲ, ರುಚಿಗೆ ಹೆಚ್ಚು ಒತ್ತು ಕೊಡದೆ ಆರೋಗ್ಯಕರವಾಗಿ ಮನೆಯ ಊಟವನ್ನೇ ಸೇವಿಸಿ ಆರೋಗ್ಯಕರ ಜೀವನ ನಡೆಸಿ.
- ಪ್ರೀತು ಮಹೇಂದರ್