Bengaluru : ದೆಹಲಿಯ ಐತಿಹಾಸಿಕ ಜಮಾ ಮಸೀದಿಯು(Chetan Ahimsa Sparks) ತನ್ನ ತಾರತಮ್ಯದ ‘ಪುರುಷರಿಗೆ ಪ್ರವೇಶವಿಲ್ಲ’ ಎಂಬ ನಿಯಮವನ್ನು ಹಿಂಪಡೆದಿರುವುದು ಒಳ್ಳೆಯದು ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ(Chetan Ahimsa Sparks) ಬರೆದುಕೊಂಡಿರುವ ಅವರು,
ದೆಹಲಿಯ ಐತಿಹಾಸಿಕ ಜಮಾ ಮಸೀದಿಯು ತನ್ನ ತಾರತಮ್ಯದ ‘ಪುರುಷರಿಗೆ ಪ್ರವೇಶವಿಲ್ಲ’ ಎಂಬ ನಿಯಮವನ್ನು ಹಿಂಪಡೆದಿರುವುದು ಒಳ್ಳೆಯದು. ಎಲ್ಲಾ ಪೂಜಾ ಸ್ಥಳಗಳು ಎಲ್ಲಾ ಜನರಿಗೆ ತಮ್ಮ ಬಾಗಿಲುಗಳನ್ನು ತೆರೆಯಬೇಕು.
ಸಮಾನತಾವಾದಿಗಳಾಗಿ, ನಾವು ಬಹುಜನರು ಮತ್ತು ಮಹಿಳೆಯರಿಗೆ ಅವಕಾಶ ನೀಡದ ದೇವಸ್ಥಾನಗಳನ್ನು ಕೂಡ ಬಹಿಷ್ಕರಿಸಬೇಕು, ಮತ್ತು ಮಹಿಳೆಯರಿಗೆ ಅವಕಾಶ ನೀಡದ ಮಸೀದಿಗಳನ್ನೂ ಕೂಡ ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : https://vijayatimes.com/temple-denies-permission/
ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದೀಪಿಕಾ ತಿಮ್ಮಯ್ಯ ಎಂಬ ಫೇಸ್ಬುಕ್ ಬಳಕೆದಾರರು, “ಶತಮಾನಗಳಿಂದಲೂ ಇದೆ ಸಮಸ್ಯೆ ಇಂದಿಗೂ ಕೂಡ ಹೆಣ್ಣು ಸ್ವತಂತ್ರ್ಯಳಾಗಿಲ್ಲಾ.
ಈಗಲೂ ಸಂಸ್ಕೃತಿಯ ಕಟ್ಟುಪಾಡುಗಳ ಜೊತೆ ಬದುಕುತಿದ್ದಾಳೆ ಎಂಬುದು ನೋವಿನ ಸಂಗತಿಯಾಗಿದೆ, ಸಮಾಜ ಹೆಣ್ಣನ್ನು ಸಂಸ್ಕೃತಿಯ ಹೆಸರಿನಲ್ಲಿ ಸಮಾನತೆಯನ್ನು ನಿರಾಕರಿಸಿದೆ.
ಬಾಬಾಸಾಹೇಬರಿಂದ ಅವರು ಕೊಟ್ಟ ಸಂವಿಧಾನದಿಂದ(Constitution) ಎಲ್ಲ ಕ್ಷೇತ್ರಗಳಲ್ಲೂ ಆಕೆ ಸಾಧನೆಯ ಶಿಖರ ಮುಟ್ಟಿದ್ದರೂ ಕೂಡ ಸಂಸ್ಕೃತಿಯಿಂದ ಆಕೆ ಅಸಮಾನತೆಯನ್ನು ಅನುಭವಿಸುತ್ತಿದ್ದಾಳೆ.
ಇದು ಬದಲಾಗಬೇಕು ಎನ್ನುವ ಬದಲು ಬದಲಾಯಿಸಬೇಕು ಎಂದಿದ್ದಾರೆ.

ಇದೇ ವೇಳೆ ಕವಿತಾ ಬಸವರಾಜ್ ಎಂಬುವವರು, “ಸಮಾನತೆಯ ಬಗ್ಗೆ ಮಾತನಾಡಿದರೆ ಅವರಿಗೆಲ್ಲ ಕೋಪ. ಹೆಣ್ಣುಮಕ್ಕಳಿಗೆ ಯಾವ ಧರ್ಮದಲ್ಲಿಯೂ ಸಮಾನತೆಯಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ದೆಹಲಿಯ ಐತಿಹಾಸಿಕ ಜಮಾ ಮಸೀದಿಯು ನೂರಾರು ವರ್ಷಗಳಿಂದ ಮಸೀದಿಗೆ ಮಹಿಳೆಯರಿಗೆ ಪ್ರವೇಶ ನೀಡಿರಲಿಲ್ಲ. ಇದೀಗ ಜಮಾ ಮಸೀದಿಯು ಮಹಿಳೆಯರಿಗೆ ಮಸೀದಿ ಪ್ರವೇಶಿಸಲು ಅವಕಾಶ ನೀಡಿದೆ.
- ಮಹೇಶ್.ಪಿ.ಎಚ್