ಇಂಡಿಯಾದಿಂದ ಭಾರತ್ ಎಂದು ಹೆಸರನ್ನು ಬದಲಾಯಿಸುವುದು ಎಂದರೆ, ನಮ್ಮ ಸಹಜವಾದ ಸಾಂಸ್ಕೃತಿಕ ಬಹುತ್ವದ (Chetan statement about Bharat) ಮೇಲೆ ಏಕವಚನ ಪುರಾಣದ

ಸಂಪ್ರದಾಯವನ್ನು ಹೆಚ್ಚಾಗಿ ವೈಭವೀಕರಿಸುವ ಪ್ರಯತ್ನವಾಗಿದೆ ಎಂದು (Chetan statement about Bharat) ನಟ ಚೇತನ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, ನಮ್ಮ ರಾಷ್ಟ್ರದ ಹೆಸರನ್ನು ‘ಇಂಡಿಯಾ’ದಿಂದ ‘ಭಾರತ್’ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಇಂಡಿಯಾ ಎಂಬ ಪದವು ಇಂಡಸ್/ಸಿಂಧೂ ನದಿಯಿಂದ ಹುಟ್ಟಿಕೊಂಡಿದೆ ಭೌಗೋಳಿಕ ಪದ. ಭಾರತ ಎಂಬ ಪದವು ಪೌರಾಣಿಕ ಭರತವರ್ಷದಿಂದ ಬಂದಿದೆ (ಮಹಾಭಾರತ) ಸಾಂಸ್ಕೃತಿಕ ಪದ.
CSI ಮಾಡರೇಟರ್ ಬಿಷಪ್ ಎ ಧರ್ಮರಾಜ್ ರಸಾಲಂ ಅವರ ಆಯ್ಕೆಯನ್ನು ರದ್ದು ಮಾಡಿದ ಮದ್ರಾಸ್ ಹೈಕೋರ್ಟ್
ಇಂಡಿಯಾದಿಂದ ಭಾರತ್ ಎಂದು ಹೆಸರನ್ನು ಬದಲಾಯಿಸುವುದು ಎಂದರೆ, ನಮ್ಮ ಸಹಜವಾದ ಸಾಂಸ್ಕೃತಿಕ ಬಹುತ್ವದ ಮೇಲೆ ಏಕವಚನ ಪುರಾಣದ ಸಂಪ್ರದಾಯವನ್ನು ಹೆಚ್ಚಾಗಿ ವೈಭವೀಕರಿಸುವ
ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.

ಸದ್ಯ ದೇಶದಲ್ಲಿ ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸಲಾಗುತ್ತದೆ ಎಂಬ ಚರ್ಚೆ ಜೋರಾಗಿದೆ. ವಿಪಕ್ಷಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್,
ಡಿಎಂಕೆ, ಎನ್ಸಿಪಿ, ಎಎಪಿ, ಆರ್ಎಲ್ಡಿ, ಎಸ್ಪಿ ಸೇರಿದಂತೆ ಅನೇಕ ಪಕ್ಷಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈಗಾಗಲೇ ನಮ್ಮ ಸಂವಿಧಾನದಲ್ಲೇ ಭಾರತ್ ಎಂದು ಉಲ್ಲೇಖಿಸಲಾಗಿದ್ದರೂ,
ಮೋದಿ ಸರ್ಕಾರ ಇದನ್ನೇ ಮತ್ತೊಮ್ಮೆ ಬದಲಾವಣೆ ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿವೆ. ಆದರೆ ಇದುವರೆಗೂ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ
ಪ್ರಕಟಣೆಯನ್ನು ಹೊರಡಿಸಿಲ್ಲ. ಹೀಗಾಗಿ ಸಪ್ಟೆಂಬರ್ 18 ರಿಂದ 22ರ ವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನ ಕೇಂದ್ರ ಸರ್ಕಾರ ಕರೆದಿದ್ದು, ಅಧಿವೇಶನದಲ್ಲಿಯೇ ಇದಕ್ಕೆ ಸ್ಪಷ್ಟ ಉತ್ತರ
ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.