Bengaluru: ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ‘ನಾ ನಾಯಕಿ’(Na nayaki) ಕಾರ್ಯಕ್ರಮವು ಪಕ್ಷದ ಡೈನಾಸ್ಟಿಕ್ ಮಹಿಳಾ ನಾಯಕಿಯರ(chetan statement about congress) ವೈಯಕ್ತಿಕ ವೈಭವೀಕರಣಗೊಳಿಸುತ್ತಿದೆ;
ಅವಶ್ಯಕವಾಗಿ ಇಂಟರ್ಸೆಕ್ಷನಲ್ ಸ್ತ್ರೀವಾದವನ್ನು ಉತ್ತೇಜಿಸುವ ಕಾರ್ಯ ನಡೆಸುತ್ತಿಲ್ಲ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್(Chetan Ahimsa) ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್(Face book) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕಾಂಗ್ರೆಸ್‌ನಲ್ಲಿ(Congress) ನಡೆಯುತ್ತಿರುವ ‘ನಾ ನಾಯಕಿ’ ಕಾರ್ಯಕ್ರಮವು ಪಕ್ಷದ ಇಂದಿರಾರಿಂದ- ಸೋನಿಯಾ-ಪ್ರಿಯಾಂಕವರೆಗೆ ಡೈನಾಸ್ಟಿಕ್ ಮಹಿಳಾ ನಾಯಕಿಯರ ವೈಯಕ್ತಿಕ ವೈಭವೀಕರಣಗೊಳಿಸುತ್ತಿದೆ.
ಕಾಂಗ್ರೆಸ್— ಎಲ್ಲಾ ಮುಖ್ಯವಾಹಿನಿಯ ಪಕ್ಷಗಳಂತೆ ಮಹಿಳೆಯರಿಗೆ ಮೈಕ್ ಮೂಲಕ ತಮ್ಮ ಭಾಷಣಗಳಿಂದ ಪುರುಷ ಪ್ರಧಾನವನ್ನು ಬೇರೂರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಇನ್ನೊಂದು ಬರಹದಲ್ಲಿ, ಯುಎಸ್’ನ(USA) ಚಿಂತಕ ಮಾರ್ಕ್ ಟ್ವೈನ್(Mark twain) ಹೇಳುತ್ತಾರೆ :
‘ನೀವು ಬಹುಮತದ ಪರವಾಗಿ ನಿಮ್ಮನ್ನು ಕಂಡುಕೊಂಡಾಗ, ಆಗ ವಿರಾಮ ನೀಡಿ & ನಿಮ್ಮನ್ನ ಪ್ರತಿಬಿಂಬಿಸುವ ಸಮಯ ಇದಾಗಿರುತ್ತದೆ’ ಭಾರತದಲ್ಲಿ ಮೋದಿ/ಬಿಜೆಪಿ/ಆರೆಸಸ್ಸ್ ವಿರುದ್ಧವಾಗಿ 62%ಕ್ಕಿಂತ ಹೆಚ್ಚು ಮತಗಳಿವೆ – ಇದು ಅತ್ಯಂತ ಬಹುಮತವಾಗಿದೆ.

ನಾವು ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷದ ವಿರುದ್ಧ ಇರಬಾರದು – ಅನ್ಯಾಯ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯನ್ನು ನಾವು ಸವಾಲಾಗಿ ಸ್ವೀಕರಿಸಬೇಕು.
ಇತ್ತೀಚೆಗಿನ ಭಾಷಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ(Sathish jarakiholi),
ತಂದೆ ಪೆರಿಯಾರ್ ಅವರ ಹೋರಾಟದ ಕೊಡುಗೆಯಿಂದ ಬಿಜೆಪಿಯನ್ನು ತಮಿಳುನಾಡಿನಿಂದ ದೂರವಿಡಲಾಗಿದೆ ಎಂದು ಹೇಳಿದ್ದಾರೆ.
ನಿಜ, ಜಾರಕಿಹೊಳಿ ಏನು ಹೇಳಲು ಮರೆತಿದ್ದಾರೆ ಎಂದರೆ ಪೆರಿಯಾರ್ ಅವರ ಪರಿವರ್ತನಶಾಹಿ ಮಾನವತಾವಾದವು ಕಾಂಗ್ರೆಸ್ ಅನ್ನು ಕೂಡ ತಮಿಳುನಾಡಿನಿಂದ(Tamilnadu) ದೂರ ಇಟ್ಟಿದೆ.
ಕರ್ನಾಟಕದಲ್ಲಿ, ನಮಗೆ ಪೆರಿಯಾರ್-ಪರ, ಬಿಜೆಪಿ-ವಿರೋಧಿ ಮತ್ತು ಕಾಂಗ್ರೆಸ್-ವಿರೋಧಿ ಚಳವಳಿಯ ಅಗತ್ಯವಿದೆ ಎಂದಿದ್ದಾರೆ.
ಮತ್ತೊಂದು ಬರಹದಲ್ಲಿ, ಎರಡು ತಿಂಗಳ ಹಿಂದೆ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡ ಪ್ರತಿಮೆ ಸ್ಥಾಪನೆಯ ನಂತರ,
ಮುಖ್ಯಮಂತ್ರಿ ಬೊಮ್ಮಾಯಿ(Basavaraj bommai) ವಿಧಾನಸೌಧದ ಬಳಿ ಕೆಂಪೇಗೌಡ ಮತ್ತು ಬಸವ ಪ್ರತಿಮೆ ಸ್ಥಾಪಿಸುವ ಬಗ್ಗೆ ಯೋಜನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: https://vijayatimes.com/delhi-university-hindu-studies/
ಇದು ಅಸಂಬದ್ಧ, ದುಡ್ಡು ವ್ಯರ್ಥವಾಗುತ್ತಿದೆ. ಇಂತಹ ಪ್ರತಿಮೆಗಳ ರಾಜಕೀಯ ನಮ್ಮ ಕರ್ನಾಟಕದ ಜನರ ಜೀವನಕ್ಕೆ ಅಸಮಂಜಸವಾಗಿದೆ.
ಗೌಡ-ಲಿಂಗಾಯತರನ್ನು ಸಮಾಧಾನಪಡಿಸುವುದನ್ನು/ಓಲಾಯಿಸುವುದನ್ನು ನಿಲ್ಲಿಸಿ ಮುಖ್ಯಮಂತ್ರಿಗಳು ಪರಿವರ್ತಕ ಬದಲಾವಣೆಗಳನ್ನು ಮಾಡುವುದು ಉತ್ತಮ ಎಂದಿದ್ದಾರೆ.