Karnataka : ಕಾಂಗ್ರೆಸ್ ಮತ್ತು ಬಿಜೆಪಿಯ ದಲಿತರು ಸೈದ್ಧಾಂತಿಕವಾಗಿ ಅಂಬೇಡ್ಕರ್ (B. R. Ambedkar) ಮತ್ತು ಪೆರಿಯಾರ್‌ರಂತೆ (Chetan Statement) ಸಮಾನತಾವಾದಿಗಳಲ್ಲ. ಎರಡೂ ಪಕ್ಷದ ದಲಿತರು ಸಾಮಾಜಿಕ ನ್ಯಾಯವನ್ನು ನಿರಾಕರಿಸುವ ರಾಜಕೀಯ ಚೌಕಟ್ಟನ್ನು ಬೆಂಬಲಿಸುತ್ತಾರೆ. ಬಿಜೆಪಿ ದಲಿತರು ಹಿಂದುತ್ವದ ಸುಳ್ಳಿನ ‘ಹಿಂದೂ ಏಕತೆಗೆ’ ಬಲಿಯಾಗುವುದು ಅರ್ಥವಾಗುತ್ತದೆ.
ಕಾಂಗ್ರೆಸ್‌ನ ದಲಿತರು ದಲಿತ-ವಿರೋಧಿ ಬ್ರಾಹ್ಮಣ್ಯವನ್ನು ಭದ್ರಪಡಿಸುತ್ತಾರೆ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್(Chetan Kumar Ahimsa) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್ (Chetan Statement) ಪುಟದಲ್ಲಿ ಬರೆದುಕೊಂಡಿರುವ ಅವರು, ಬಿಜೆಪಿ ದಲಿತರು ಹಿಂದುತ್ವದ ಸುಳ್ಳಿನ ‘ಹಿಂದೂ ಏಕತೆಗೆ’ ಬಲಿಯಾಗುವುದು ಅರ್ಥವಾಗುತ್ತದೆ.
ಕಾಂಗ್ರೆಸ್‌ನ ದಲಿತರು ದಲಿತ-ವಿರೋಧಿ ಬ್ರಾಹ್ಮಣ್ಯವನ್ನು ಭದ್ರಪಡಿಸುತ್ತಿದ್ದಾರೆ.
ನಾನು ಬಿಜೆಪಿಯನ್ನು ‘ಹಿಂದೂ ಅಜೆಂಡಾ’ ಪಕ್ಷ ಎಂದು ಕರೆದಿದ್ದೇನೆ ಮತ್ತು ಅದರ ಪರವಾಗಿರುವವರು ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ಹೇಳಿದ್ದೇನೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಆದ್ರೆ ನಾವು ಯಾವತ್ತೂ ಆ ರೀತಿ ಹೇಳಲಿಲ್ಲ. ದ್ವೇಷ ಮತ್ತು ಸುಳ್ಳಿನ ಆಧಾರದ ಮೇಲೆ ಕಟ್ಟಲಾದ ‘ರಾಜಕೀಯ ಹಿಂದುತ್ವವೇ’ ಬಿಜೆಪಿಯ (BJP) ಅಜೆಂಡಾ. ಭಯೋತ್ಪಾದನೆ ಎಂಬುವುದನ್ನು ನಾನು,
ಧಾರ್ಮಿಕ ಅಥವಾ ರಾಜಕೀಯ ಸಿದ್ಧಾಂತದ ಹೆಸರಿನಲ್ಲಿ (ಆಕ್ರಮಣಕಾರಿ) ಮಾಡುವ ಹಿಂಸೆ ಎಂದು ವ್ಯಾಖ್ಯಾನಿಸುತ್ತೇನೆ.
ಕಾಂಗ್ರೆಸ್ (Congress) /ಜೆಡಿಎಸ್ (JDS) /ಎಎಪಿ (AAP) = ರಾಜಕೀಯ ಹಿಂದೂಇಸಂ = ಬ್ರಾಹ್ಮಣ್ಯ , ಬಿಜೆಪಿ = ರಾಜಕೀಯ ಹಿಂದುತ್ವ = ಅತೀ ಬ್ರಾಹ್ಮಣ್ಯ ಎಂದು ರಾಜಕೀಯ ಸೂತ್ರವನ್ನು ವಿವರಿಸಿದ್ದಾರೆ.
ಇದನ್ನೂ ಓದಿ : https://vijayatimes.com/kantara-oscar-qualifying-round/
ಇನ್ನೊಂದು ಬರಹದಲ್ಲಿ, ಹಿಂದುತ್ವವನ್ನು ಹಿಂದೂ ಧರ್ಮಕ್ಕೆ ಸ್ಟೀರಾಯ್ಡ್‌ನಂತೆ (Steroid) ಚುಚ್ಚಲಾಗಿದೆ .
ಇದರ ಮೂಲ ಉದ್ದೇಶ ಧಾರ್ಮಿಕ ಆಚರಣೆಗಳು/ದೇವಾಲಯ-ನಿರ್ಮಾಣ/ಗೋವಿನ ಜಾಗರೂಕತೆ/ಸಂಸ್ಕೃತಕ್ಕೆ ಹೆಚ್ಚಿನ ಒತ್ತು ಕೊಡುವುದೇ ಆಗಿದೆ.
ಅದಕ್ಕಾಗಿಯೇ ಹಿಂದುತ್ವವನ್ನು ಅತೀ (Hyper) ಬ್ರಾಹ್ಮಣ್ಯ ಎಂದು ವ್ಯಾಖ್ಯಾನಿಸಬಹುದು. ಆದರೆ ಹಿಂದೂ ಧರ್ಮವು ಶ್ರೇಣೀಕೃತ ಜಾತಿ ಅಸಮಾನತೆ (ಬ್ರಾಹ್ಮಣ್ಯ) ಹಿಂದುತ್ವ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ : https://vijayatimes.com/kerala-high-court-order/
ಮುಂಬರುವ ರಾಜ್ಯ ಚುನಾವಣೆ (Election) ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಸಿದ್ಧ ‘ಪ್ರಗತಿಪರರು’ ಕಾಂಗ್ರೆಸ್‌ನ ಬುದ್ದಿಜೀವಿಗಳು ಎಚ್ಚರಗೊಂಡಿರುವ ಹಾಗಿದೆ.
ನೆನಪಿಡಿ: ಕೇವಲ ಬಿಜೆಪಿ/ಆರ್ಎಸ್ಎಸ್ (RSS) ಅನ್ನು ವಿರೋಧಿಸುವವರು ಕೂಡ ಆ ಸಮಸ್ಯೆಯ ಭಾಗವೇ ಆಗಿರುತ್ತಾರೆ.
ಈ ಸ್ಟಾರ್ ಲಿಬರಲ್‌ಗಳು (Libber) /ಉದಾರವಾದಿಗಳು ಇಂತಹ ಪರೋಕ್ಷ ರಾಜಕೀಯದ ಬದಲಿಗೆ ನೇರವಾಗಿ ಕಾಂಗ್ರೆಸ್ಸಿಗೆ ಸೇರಿದರೆ ಅದು ಪ್ರಾಮಾಣಿಕ ನಡೆಯಾಗಿರುತ್ತದೆ ಎಂದು ಇತ್ತೀಚೆಗೆ ನಟ ಚೇತನ್ ಹೇಳಿದ್ದರು. ಅವರ ಈ ಹೇಳಿಕೆ ಕೂಡಾ ವಿವಾದಕ್ಕೆ ಕಾರಣವಾಗಿತ್ತು.