Visit Channel

ಇದು ಪಾದಯಾತ್ರೆ ಅಲ್ಲ ಕಾರು ಯಾತ್ರೆ : ನಟ ಚೇತನ್‌ ವ್ಯಂಗ್ಯ

chetan
  • ಸೌಜನ್ಯ ಎಂ. ಎಸ್

ಮೇಕೆದಾಟು ಯೋಜನೆಯ ಸುತ್ತ ವಿವಾದಗಳ ಸುತ್ತೋಲೆ ಸುತ್ತಿಕೊಂಡಿದೆ. ಈ ಯೋಜನೆಯನ್ನು ಕೈಗೊಂಡಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ವಿವಾದಕ್ಕೆ ಒಳಗಾಗಿದೆ.  ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುವ ಪಾದಯಾತ್ರೆಯು ಸಾಕಷ್ಟು  ಚರ್ಚೆಗೆ ಒಳಗಾಗಿದೆ.

 ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆಯನ್ನು ನಡೆಸಿಯೇ ಸಿದ್ಧ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಹೇಳುತ್ತಿದ್ದಾರೆ.  ಜನಸಾಮಾನ್ಯರಿಗೆ ಕಾನೂನು ಪಾಲನೆ ಮಾಡಿ,  ನಿಯಮಗಳನ್ನು ಪಾಲಿಸಿ ಎಂದು ಹೇಳಬೇಕಾದ ರಾಜಕೀಯ ಮುಖಂಡರೇ ಈ ರೀತಿ ಮಾಡುತ್ತಿರುವುದು ತಪ್ಪು ಎಂದು ಜನಸಾಮಾನ್ಯರ ಅಭಿಪ್ರಾಯವಾಗಿದೆ.  ಜನಸಾಮಾನ್ಯರ ಅಭಿಪ್ರಾಯ ಹೀಗಾದರೆ ಇನ್ನು ನಟ ಮತ್ತು ಸಾಮಾಜಿಕ ಹೋರಾಟಗಾರನಾದ ಅಹಿಂಸಾ ಚೇತನ್ ರವರು  ಕಾಂಗ್ರೆಸ್ ಕೈಗೊಂಡಿರುವ ಮೇಕೆದಾಟು ಯೋಜನೆಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಯೋಜನೆಯಲ್ಲಿ ಯಾವುದೇ ರೀತಿಯ ಅಣೆಕಟ್ಟುಗಳ ನಿರ್ಮಾಣ ಮಾಡಬಾರದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಚೇತನ್‌ ಮಾತನಾಡಿ ನಮ್ಮ ರಾಜ್ಯದಲ್ಲಿರುವ ಮೂರು ಪ್ರಮುಖ ವಾಹಿನಿ ಪಕ್ಷವು ಮೇಕೆದಾಟುವಿನ ಯೋಜನೆಯು ಅಪಾಯಕಾರಿ  ಅಣೆಕಟ್ಟನ್ನು ನಿರ್ಮಿಸಲು ಒತ್ತಾಯ ಮಾಡುತ್ತಿದೆ.   ಇದರಿಂದ ಆ ಪರಿಸರವೂ ಸಂಪೂರ್ಣ ನಾಶವೇ ಆಗುತ್ತದೆಯೆ ಹೊರತು ಯಾವುದೇ ರೀತಿಯ ಅನುಕೂಲ ಇಲ್ಲ.   ಇನ್ನು ನಾವೆಲ್ಲ ಅಣೆಕಟ್ಟಿನ ಬಗ್ಗೆ ವಿರೋಧ ಮಾಡುತ್ತಾ ಮೇಕೆದಾಟು ರಕ್ಷಿಸಲು ಯೋಚನೆ ಮಾಡುತ್ತಿದ್ದೇವೆ . ನನ್ನ ಪ್ರಕಾರ ಹೇಳುವುದಾದರೆ ಪರಿಸರಕ್ಕೆ ಒಳಿತಾಗುವಂತಹ ನೀರಿನ ವಿಧಾನಗಳನ್ನು ಬಯಸುತ್ತೇನೆ ಎಂದಿದ್ದಾರೆ.

ಇನ್ನು ಜನವರಿ 14 2022 ರಂದು ಪರಿಸರ ಹೋರಾಟಗಾರ್ತಿ ಎಂದು ಹೆಸರುವಾಸಿಯಾದ ಮೇಧಾ ಪಾಟ್ಕರ್ ಅವರ ಸಮ್ಮುಖದಲ್ಲಿ ಮೇಕೆದಾಟು ಯೋಜನೆಯ ವಿರುದ್ಧ ಪ್ರತಿಭಟನೆ ಮಾಡುತ್ತೇವೆ.   ಈ ಸಂದರ್ಭದಲ್ಲಿ ನಾವು ಈ ಯೋಜನೆಯನ್ನು ನಿಲ್ಲಿಸಬೇಕು ಎಂದು ರಾಜ್ಯಸರ್ಕಾರಕ್ಕೆ ಒತ್ತಡವನ್ನು ಹೇರುತ್ತವೆ ಎಂದು ತಿಳಿಸಿದ್ದಾರೆ.  ಇಷ್ಟೆಲ್ಲ ಮಾತುಗಳನ್ನಾಡಿದಂತಹ ನಟ ಚೇತನ್ ರವರು ಕಾಂಗ್ರೆಸ್ ಪಕ್ಷದವರ ಪಾದಯಾತ್ರೆಯ ಒಂದು ನಕರಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಕಾರಿನಲ್ಲಿ ಓಡಾಡಿದ ಮಾತ್ರಕ್ಕೆ ಅದು ಪಾದಯಾತ್ರೆ ಆಗುವುದಿಲ್ಲ ಅದು ಕಾರು ಯಾತ್ರೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

 ಇನ್ನು ಇವರು ತಿಳಿಸಿದ ಈ ಮಾತಿನ ಅರ್ಥವೆಂದರೆ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯ ಮಾಡಿ ನಡೆಸುತ್ತಿರುವ ಈ ಪಾದಯಾತ್ರೆಯಲ್ಲಿ ರಾಜಕೀಯ ಮುಖಂಡರೆಲ್ಲಾ ಕಾರಿನಲ್ಲಿ  ಸಂಚಾರ ಮಾಡುತ್ತಿದ್ದಾರೆ.  ಆದರೆ ಈ ಬೆಂಬಲಿಗರು ಮತ್ತುಕಾರ್ಯಕರ್ತರೆಲ್ಲಾ ಬಿಸಿಲಿನಲ್ಲಿ ತಮಗೆ ಎಷ್ಟೇ ನೋವಾದರೂ ಬಿಸಿಲು ಎನ್ನದೇ ಮೈ, ಕೈ, ಕಾಲು ನೋಯಿಸಿಕೊಂಡು ಹೆಜ್ಜೆ  ಹಾಕುತ್ತಿದ್ದಾರೆ.  ಆದರೆ ನಾಯಕರೆಲ್ಲ ಕಾರಿನಲ್ಲಿ ಯಾತ್ರೆ ಮಾಡಿಕೊಂಡು ಪಾದಯಾತ್ರೆ ಎಂಬ ಹೆಸರಿನಲ್ಲಿ ಕಾರು ಯಾತ್ರೆ ನಡೆಸುತ್ತಿದ್ದಾರೆ ಎಂದು ನಟ ಚೇತನ್ ಅವರು ಆರೋಪಿಸಿದ್ದಾರೆ

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.