Prakash Rai is a good actor, but a bad fighter: Chetan sparks criticism against Modi
Bengaluru: ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ಪ್ರಕಾಶ್ ರೈ (Prakash Rai) ಅವರಂತಹವರೂ ಅಜ್ಞಾನಿಗಳಾಗಿದ್ದಾರೆ ಎಂದು ನಟ ಪ್ರಕಾಶ್ ರೈ ಅವರ ವಿರುದ್ದ ಕನ್ನಡದ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ (Chethan Ahimsa) ಅವರು ತೀವ್ರ ಕಿಡಿಕಾರಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ವಿನೇಶ್ ಫೋಗಟ್ (Vinesh Phogat) ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರೈ ಪೋಸ್ಟ್ ಸಜೆಸ್ಟ್ (Prakash Rai Post Suggest) ಮಾಡುತ್ತೆ, ಇದು ಸಣ್ಣತನ.
Chethan Ahimsa Controversy with Prakash Rai
ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರಾಯ್ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ. ಪ್ರಕಾಶ್ ರೈ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರ ಎಂದು ಲೇವಡಿ ಮಾಡಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ, ವಿನೇಶ್ ಫೋಗಟ್ ಅವರು ಜಂಟಿ ಬೆಳ್ಳಿ ಪದಕವನ್ನು ನೀಡುವಂತೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಇದು ನ್ಯಾಯಸಮ್ಮತವಾದ ಬೇಡಿಕೆಯಾಗಿದೆ, ಏಕೆಂದರೆ ಫೋಗಟ್ ಅವರು ಫೈನಲ್ ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಫೈನಲ್ (Final) ಪಂದ್ಯದ ಎಲ್ಲಾ ಗೆಲುವುಗಳನ್ನು ರದ್ದುಗೊಳಿಸಬಾರದು. ಪದಕ ಇರಲಿ ಅಥವಾ ಇಲ್ಲದಿರಲಿ, ಫೋಗಟ್ ಅವರನ್ನು ನಾವೆಲ್ಲರೂ ಗೌರವಿಸುವ ನಿಜವಾದ ಹೋರಾಟಗಾರ್ತಿ ಎಂದು ಹೇಳಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ 100 ಗ್ರಾಂ ಹೆಚ್ಚುವರಿ ತೂಕ ಹೊಂದಿದ್ದರಿಂದಾಗಿ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅಂತರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ಟೂರ್ನಿಯಿಂದಲೇ ಅನರ್ಹಗೊಳಿಸಿತ್ತು. ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ, ವಿನೇಶ್ ಫೋಗಟ್ ಅವರ ಅನರ್ಹತೆ ಭಾರತದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವೇಳೆ ನಟ ಪ್ರಕಾಶ್ ರೈ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಕಾರಣ ಎಂದು ಬಿಂಬಿಸುವ ವ್ಯಂಗ್ಯಚಿತ್ರಯೊಂದನ್ನು ಹಂಚಿಕೊಂಡಿದ್ದರು.
Bengaluru: Kannada actor and social activist Chethan Ahimsa has lashed out at actor Prakash Rai saying that people like Prakash Rai who blame all India’s problems on Modi are ignorant.
He has written about this on his social network, Prakash Rai Post Suggests that Prime Minister Modi is the reason for Vinesh Phogat’s disqualification, this is petty.
Just as those who blindly praise Modi for all India’s gains are ignorant, so are people like Roy who blame all India’s problems on Modi. Prakash Rai was teased as a good actor but a bad fighter.
In another post, Vinesh Phogat has appealed to the Court of Arbitration for Sport to award the joint silver medal, which is a legitimate demand, as Phogat should not have canceled all the wins in the final because he could not qualify for the final. Medal or not, Phogat said she is a true fighter whom we all respect.
Wrestler Vinesh Phogat was disqualified from the tournament by the International Olympic Committee for carrying 100 grams of excess weight before the finals. The disqualification of Vinesh Phogat, who had hoped to win the gold, was the cause of a huge debate across India. At this time, actor Prakash Rai shared a caricature depicting Prime Minister Narendra Modi as the reason for this.