Bengaluru : ಲಿಂಗಾಯತ ಕೇಂದ್ರೀಯತೆ ಮತ್ತು ಲಿಂಗಾಯತ ಧರ್ಮ ಎರಡರ ನಡುವೆ ಸೈದ್ಧಾಂತಿಕ ಜಗಳಗಳಾಗುತ್ತಿವೆ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ (Social Activist) ಚೇತನ್ (Chethan Ahimsa Statement) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಪ್ರಸ್ತುತ ಸಂದರ್ಭದಲ್ಲಿ, ಬ್ರಾಹ್ಮಣ್ಯದಿಂದ ಸರ್ವಸಮ್ಮತವೆಂದು ತಪ್ಪಾಗಿ ಪ್ರಕ್ಷೇಪಿಸಲಾಗಿರುವ ಲಿಂಗಾಯತ-ಕೇಂದ್ರೀಯತೆ ಮತ್ತು ಲಿಂಗಾಯತ ಧರ್ಮ – ಎರಡರ ನಡುವೆ ಸೈದ್ಧಾಂತಿಕ ಜಗಳಗಳಾಗುತ್ತಿವೆ.
21 ಶತಮಾನದ ಲಿಂಗಾಯತ ಧರ್ಮವು (ಸಮಾನತೆ ಮತ್ತು ನ್ಯಾಯದ ಮುಖಾಂತರ ಶರಣ ತತ್ವ) ಇಂದಿನ ಅಪ್ಪರ್-ಕಾಸ್ಟ್ ಶೂದ್ರರ (ಅಂದರೆ ಲಿಂಗಾಯತರ) ಭೂ ಮತ್ತು ರಾಜಕೀಯ ಪ್ರಾಬಲ್ಯವನ್ನು ಕಿತ್ತುಹಾಕುವುದನ್ನು ಪ್ರತಿಪಾದಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : https://vijayatimes.com/yogi-gives-deadline-to-officers/
ಇದಕ್ಕೂ ಮುನ್ನ ಕೇಸರಿ ಬಣ್ಣದ ಧ್ವಜ ಹಿಂದುತ್ವವಲ್ಲ (Chethan Ahimsa Statement) ನಾವು ನಡೆಸುತ್ತಿರುವ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ಈ ಬಸವಣ್ಣರವರ ಚಿತ್ರವು ಸಂಕೇತಿಸುತ್ತದೆ.
ನಾವು 260 ಪ್ರತ್ಯೇಕ ಧರ್ಮಗಳನ್ನು ಸಂವಿಧಾನಾತ್ಮಕವಾಗಿ 260 ವಚನಕಾರರಿಗೆ ಅನುಗುಣವಾಗಿ ಗುರುತಿಸಿದ ನಂತರವೇ ಈ ಪರಿವರ್ತನಾ ಚಳುವಳಿ ಕೊನೆಗೊಳ್ಳುತ್ತದೆ ಎಂದು ಭಾವಿಸುತ್ತೇನೆ.

ಇನ್ನು ಲಿಂಗಾಯತರು ಯಾವತ್ತೂ ಹಿಂದೂಗಳು ಅಥವಾ ವೀರಶೈವರು ಆಗಿರಲಿಲ್ಲ. ಸಾಮಾಜಿಕ ಸಿದ್ಧಾಂತವಾದಿಯಾದ ಆಶಿಶ್ ನಂದಿ ಅವರು, ಆರ್‌ಎಸ್‌ಎಸ್ನ ಹಿಂದುತ್ವವನ್ನು ಗಾಂಧಿವಾದದ ‘ಸನಾತನಿ’ ಹಿಂದೂ ಧರ್ಮದಿಂದ ಪ್ರತ್ಯೇಕಿಸುತ್ತಾರೆ.
ಆರ್‌ಎಸ್‌ಎಸ್ನ (RSS) ಸಂಸ್ಥಾಪಕರಾದ ಹೆಡ್ಗೆವಾರ್ (Hedgewar) ಅವರು ‘ಹಿಂದೂ ರಾಷ್ಟ್ರೀಯತೆಯ ಅನೇಕ ಪ್ರವರ್ತಕರಂತೆ, ಹಿಂದೂ ಧರ್ಮದ ಆಕ್ರಮಣಕಾರಿ ವಿಮರ್ಶಕರಾಗಿದ್ದರು’ ಎಂದು ವಾದಿಸಿದರು.
ಇದನ್ನೂ ಓದಿ : https://vijayatimes.com/bjp-will-lead-in-karnataka-if/
ಹಾಗಾಗಿ, ಹಿಂದುತ್ವವನ್ನು ಪ್ರತಿಗಾಮಿ ಮತ್ತು ಎಬ್ರಹಾಮಿಕ್ ‘ಸುಧಾರಣೆ’ಯ ಚಳುವಳಿಯಂತೆ ಕಾಣಬಹುದು ಎಂದಿದ್ದಾರೆ.
- ಮಹೇಶ್.ಪಿ.ಎಚ್