Bengaluru : ನವ-ಉದಾರವಾದಿ ಪಕ್ಷಗಳಾದ ಕಾಂಗ್ರೆಸ್ (Chethan Slams Political Parties), ಜೆಡಿಎಸ್, ಎಎಪಿ, ಇತ್ಯಾದಿಗಳಿಂದ ನಿರಂತರವಾದ ‘ಹಿಂದೂ ಹೇರಿಕೆ’ಗಳನ್ನೂ ಕೂಡ ನಾವು ವಿರೋಧಿಸಬೇಕು ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ (Social Activist) ಚೇತನ್(Chethan Ahimsa) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಸಮಾನತಾವಾದಿಗಳಾದ ನಾವು ಕೇವಲ ವಿಷಪೂರಿತ ಬಿಜೆಪಿಯ(Chethan Slams Political Parties) ’ಹಿಂದುತ್ವ ಹೇರಿಕೆ’ಯನ್ನಷ್ಟೇ ವಿರೋಧಿಸಬಾರದು,
ಬದಲಿಗೆ.. ನವ-ಉದಾರವಾದಿ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಎಎಪಿ, ಇತ್ಯಾದಿಗಳಿಂದ ನಿರಂತರವಾದ ‘ಹಿಂದೂ ಹೇರಿಕೆ’ಗಳನ್ನೂ ಕೂಡ ನಾವು ವಿರೋಧಿಸಬೇಕು.
ಧರ್ಮವನ್ನು ರಾಜ್ಯ ಸರ್ಕಾರ ಮತ್ತು ರಾಷ್ಟ್ರ ಸರ್ಕಾರದಿಂದ ಪ್ರತ್ಯೇಕಿಸುವುದರಿಂದ ನಾವು ಸಮಾನತಾವಾದಿಗಳು ಮಾತ್ರ ನಿಜವಾದ ಜಾತ್ಯತೀತ ಶಕ್ತಿಗಳು ಎಂದಿದ್ದಾರೆ.
ತಮ್ಮ ಇನ್ನೊಂದು ಪೋಸ್ಟ್ ನಲ್ಲಿ “ಹೆಡ್‌ಬುಷ್”(Head Bush) ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, “ನಾನು ‘ಹೆಡ್ ಬುಷ್’ ಅನ್ನು ವೀಕ್ಷಿಸಿದೆ.
ಇದನ್ನೂ ಓದಿ : https://vijayatimes.com/review-of-appu-gandadagudi/
ಕೆಲವು ವಿಭಾಗಗಳಿಗೆ ‘ಆಕ್ಷೇಪಾರ್ಹ’ ಎಂದು ಕರೆಯಬಹುದಾದ ಚಲನಚಿತ್ರದ ದೃಶ್ಯಗಳನ್ನು ಕತ್ತರಿಸುವಂತೆ ಒತ್ತಾಯಿಸಲಾಗಿದೆ. ಪ್ರಸ್ತುತ ಬೇಡಿಕೆಗಳು ಸೃಜನಶೀಲ ಸ್ವಾತಂತ್ರ್ಯಗಳಿಗೆ ವಿರುದ್ಧವಾಗಿದೆ.
ಸೆನ್ಸಾರ್ ಮಂಡಳಿಯ ಅನುಮತಿ ಪಡೆದ ನಂತರ ಚಿತ್ರ ಮತ್ತು ಚಿತ್ರಣಕ್ಕೆ ಸ್ವಾತಂತ್ರ್ಯ ನೀಡಬೇಕು. ಭಿನ್ನಾಭಿಪ್ರಾಯವು ಪ್ರಜಾಸತ್ತಾತ್ಮಕವಾಗಿದೆ ಹೊರತು ಬೆದರಿಕೆಗಳಲ್ಲ ಎಂದಿದ್ದಾರೆ.

ಇದೇ ವೇಳೆ ಬೈಬಲ್ನ ಪ್ರಕಾರ ಸೂರ್ಯ ಭೂಮಿಯನ್ನು ಸುತ್ತುತ್ತದೆ. ಇಟಾಲಿಯನ್ ಚಿಂತಕನಾದ ಗಿಯಾರ್ಡಾನೊ ಬ್ರೂನೋ,
ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದು ಹೇಳಿ ಟ್ರಿನಿಟಿ / ವರ್ಜಿನ್ ಮೇರಿ / ಕ್ರಿಸ್ತನ ದೈವತ್ವಕ್ಕೆ ಸವಾಲು ಹಾಕಿದ. ಬ್ರೂನೋನನ್ನು 1600ರಲ್ಲಿ ಕ್ಯಾಥೋಲಿಕ್ ಚರ್ಚ್ ಜೀವಂತವಾಗಿ ಸುಟ್ಟುಹಾಕಿತು.
ಇದನ್ನೂ ಓದಿ : https://vijayatimes.com/deadly-maida/
ಆದರೆ ಸತ್ಯವು ಇಂದಿಗೂ ಜೀವಂತವಾಗಿದೆ. ವೈಜ್ಞಾನಿಕ ಲಾಜಿಕ್ ಯಾವಾಗಲೂ ಮೂಢನಂಬಿಕೆಯ ಮ್ಯಾಜಿಕ್ಗೆ ಸವಾಲು ಹಾಕಿ ಅದನ್ನು ಕಿತ್ತೆಸೆದಿದೆ ಎಂದು ಟೀಕಿಸಿದ್ದಾರೆ.
- ಮಹೇಶ್.ಪಿ.ಎಚ್