Bengaluru : ರಾಜಾ ರಾಮಮೋಹನ್ ರಾಯ್(Raja Ram Mohan Roy) ಬಂಗಾಳಿ ಮೂಲದ ಬ್ರಹ್ಮ ಸಮಾಜದ ಸಂಸ್ಥಾಪಕ 1816-17 ರಲ್ಲಿ ‘ಹಿಂದೂ ಧರ್ಮ’ ಎಂಬ ಪದವನ್ನು ಮೊದಲು ಬಳಸಿದರು ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ(Chethan Statement Pricked) ಹೇಳಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ‘ಹಿಂದೂ ಧರ್ಮ’ ಪದದ ಮೂಲ : ರಾಜಾ ರಾಮಮೋಹನ್ ರಾಯ್,
ಬಂಗಾಳಿ ಮೂಲದ ಬ್ರಹ್ಮ ಸಮಾಜದ ಸಂಸ್ಥಾಪಕ 1816-17 ರಲ್ಲಿ ‘ಹಿಂದೂ ಧರ್ಮ’ ಎಂಬ ಪದವನ್ನು ಮೊದಲು ಬಳಸಿದರು.
ರಾಯ್ ಅವರೇ ಹೇಳುವಂತೆ ‘ಹಿಂದೂ ಧರ್ಮ’ ಎಂಬುದು ಮೊದಲು ವರ್ಣಾಶ್ರಮ ಧರ್ಮ, ಸನಾತನ ಧರ್ಮ ಅಥವಾ ಸರಳವಾಗಿ ಬ್ರಾಹ್ಮಣ್ಯವಾದ ಎಂದು ಕರೆಯಲಾದ ಧರ್ಮದ ಪದವಾಗಿದೆ.
(ಕಿಲ್ಲಿಂಗ್ಲೆ, 1993: 62) ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ “ಹಿಂದೂ” ಮತ್ತು “ಹಿಂದುತ್ವ”ದ ಕುರಿತು ತಮ್ಮ ಟೀಕಾ ಸರಣಿಯನ್ನು ನಟ ಚೇತನ್ ಮುಂದುವರೆಸಿದ್ದಾರೆ.
ಇದನ್ನೂ ಓದಿ : https://vijayatimes.com/suvendu-adhikari-allegation/
ಇದಕ್ಕೂ ಮುನ್ನ, ಹಿಂದುತ್ವ ಕೋಮುವಾದಿಗಳನ್ನು (ಬಿಜೆಪಿ) ವಿರೋಧಿಸುವುದು ಸುಲಭ : ಅವರು ಹೇಳುವುದನ್ನು ನಂಬುತ್ತಾರೆ, ನಂಬುವುದನ್ನು ಹೇಳುತ್ತಾರೆ…ಅದು ಸಹ ವಿಷಾದನೀಯವಾಗಿದೆ.
ಹಿಂದೂ ಉದಾರವಾದಿಗಳನ್ನು (ಕಾಂಗ್ರೆಸ್/ಜೆಡಿಎಸ್/ಎಎಪಿ) ವಿರೋಧಿಸುವುದು ಕಷ್ಟ. ಅವರ ಮಾತಿಗೂ ನಡೆದುಕೊಳ್ಳುವ ರೀತಿಯೂ ವಿರುದ್ಧವಾಗಿದ್ದು, ನಮ್ಮ ಬಹುಜನ ಐಕಾನ್ಗಳನ್ನು ಹೈಜಾಕ್ ಮಾಡುತ್ತಾರೆ.

ನಾವು ಸಮಾನತಾವಾದಿಗಳು (Chethan Statement Pricked) ಇಡೀ ಅಸಮಾನತೆಯ ವ್ಯವಸ್ಥೆಯ ವಿರುದ್ಧ ಹೋರಾಡಬೇಕು. ಸಮಾನತಾವಾದಿಗಳಾದ ನಾವು ಕೇವಲ ವಿಷಪೂರಿತ ಬಿಜೆಪಿಯ ’ಹಿಂದುತ್ವ ಹೇರಿಕೆ’ಯನ್ನಷ್ಟೇ ವಿರೋಧಿಸಬಾರದು,
ಬದಲಿಗೆ..ನವ-ಉದಾರವಾದಿ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಎಎಪಿ, ಇತ್ಯಾದಿಗಳಿಂದ ನಿರಂತರವಾದ ‘ಹಿಂದೂ ಹೇರಿಕೆ’ಗಳನ್ನೂ ಕೂಡ ನಾವು ವಿರೋಧಿಸಬೇಕು.
ಧರ್ಮವನ್ನು ರಾಜ್ಯ ಸರ್ಕಾರ ಮತ್ತು ರಾಷ್ಟ್ರ ಸರ್ಕಾರದಿಂದ ಪ್ರತ್ಯೇಕಿಸುವುದರಿಂದ ನಾವು ಸಮಾನತಾವಾದಿಗಳು ಮಾತ್ರ ನಿಜವಾದ ಜಾತ್ಯತೀತ ಶಕ್ತಿಗಳು.
ಇಸ್ರೋ ಮತ್ತು ಪರಿಸರ/ವಿದ್ಯುತ್ ಸಚಿವಾಲಯಗಳು, ‘ಪಂಚ ಭೂತ’ವನ್ನು (ಭೂಮಿ/ನೀರು/ಬೆಂಕಿ/ಗಾಳಿ/ಆಕಾಶ) ಆಚರಿಸಲು, ‘ವಿಜ್ಞಾನ ಭಾರತಿ’ಯ ಎನ್.ಜೀ.ಓ. ಜೊತೆ ಪಾಲುದಾರಿಕೆಯನ್ನು ಹೊಂದಿವೆ.
https://youtu.be/tZceeUQPx-w ಕಳಪೆ ಕಾಮಗಾರಿ
ಋಗ್ವೇದದ ಐತರೇಯ ಉಪನಿಷತ್ತಿನಲ್ಲಿ ನಮೂದಿಸಲಾದ ‘ಪಂಚ ಭೂತ’ವು ವೈದಿಕ ಹಿಂದೂ ಧರ್ಮದ ಪ್ರಮುಖ ಅಂಶವಾಗಿದ್ದು, ಇದನ್ನು ವಿಜ್ಞಾನದಿಂದ ದೂರವಿಡಬೇಕು ಎಂದು ಹೇಳಿಕೆ ನೀಡಿದ್ದರು.
- ಮಹೇಶ್.ಪಿ.ಎಚ್