Visit Channel

ಹೆತ್ತಮ್ಮನನ್ನೇ ಕೊಚ್ಚಿ ಕೊಂದ ಪಾಪಿ ಮಗ

31049d71-5d20-44bd-9425-5d4f53cf8d72

ಚಿಕ್ಕಮಗಳೂರು ಸೆ 24 : ಹೆತ್ತ ಮಗನೇ ಮಚ್ಚಿನಿಂದ ತಾಯಿಯನ್ನು ಕೊಚ್ಚಿ ಹಾಕಿ ಹೆಣದ ಪಕ್ಕ ಕುಳಿತಿದ್ದ ಧಾರುಣ ಘಟನೆ ನಗರದ ಗೌರಿ ಕಾಲುವೆಯಲ್ಲಿ ನಡೆದಿದ್ದು, ಈ ಘಟನೆಯಿಂದಾಗಿ ಇಡೀ ಮಲೆನಾಡು ತಲ್ಲಣಗೊಂಡಿದೆ.  

ಹೆತ್ತ ಮಗನೇ ಮಚ್ಚಿನಿಂದ ತಾಯಿಯನ್ನು ಕೊಚ್ಚಿ ಹಾಕಿ ಹೆಣದ ಪಕ್ಕ ಕುಳಿತಿದ್ದ ಘಟನೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆಯಲ್ಲಿ ಗುರುವಾರ ನಡೆದಿದೆ. ಕೊಲೆಗೈದ ಪುತ್ರನನ್ನು ದುಷ್ಯಂತ್ ಎಂದು ಗುರುತಿಸಲಾಗಿದೆ.  ಮಧ್ಯಾಹ್ನದ ವೇಳೆಗೆ ಕೊಲೆ ಮಾಡಿರುವ ಶಂಕೆ  ವ್ಯಕ್ತವಾಗಿದೆ. ಸಂಜೆಯ ವೇಳೆ ಇನ್ನೊಬ್ಬ ಪುತ್ರ ಮನೆಗೆ ಬಂದಾಗ ಈ ಕೊಲೆಯ ಕೃತ್ಯ ಬೆಳಕಿಗೆ ಬಂದಿದೆ.

ಮೂಲತಃ ಚಿಕ್ಕಮಗಳೂರು ಸಮೀಪದ ಇಂದಾವರ ನಿವಾಸಿಯಾಗಿದ್ದ ಸುಧಾ, ಇತ್ತೀಚಿಗೆ ಅಪಘಾತದಲ್ಲಿ ಪತಿಯನ್ನ ಕಳೆದುಕೊಂಡಿದ್ರು. ಹೀಗಾಗಿ ಎರಡು ವರ್ಷಗಳಿಂದ ನಗರದ ಗೌರಿಕಾಲುವೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪ್ರಾವಿಷನ್ ಸ್ಟೋರ್ ಒಂದರಲ್ಲಿ ಕೆಲಸ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದರು. ಎಂಜಿನಿಯರಿಂಗ್ ಓದಿದ್ದ ಕಿರಿ ಮಗ, ಸದ್ಯ ವರ್ಕ್ ಫ್ರಮ್ ಹೋಂ ಕೆಲಸ ಮಾಡಿಕೊಂಡು ತಾಯಿಗೆ ನೆರವಾಗಿದ್ದ. ಇನ್ನೂ ಹಿರಿಮಗ ಸ್ವಲ್ಪ ಅಬ್ನಾರ್ಮಲ್ ಆಗಿ ವರ್ತನೆ ಮಾಡ್ತಿದ್ದರಿಂದ ಅವನನ್ನ ಸಂಬಾಳಿಸೋದು ಸುಧಾರಿಗೆ ದೊಡ್ಡ ಸವಾಲಾಗಿತ್ತು. ಕೆಲವೊಮ್ಮೆ ಮಾನಸಿಕ ಅಸ್ವಸ್ಥ ನಂತೆ ವರ್ತಿಸುತ್ತಿದ್ದ ದುಷ್ಯಂತ್, ಯಾವ ಕಾರಣದಿಂದಾಗಿ ತಾಯಿ ಸುಧಾ ಅವರನ್ನು ಹತ್ಯೆಗೈದಿದ್ದಾನೆ ಎಂಬುದು ತನಿಖೆ ನಂತರದಲ್ಲಿ ತಿಳಿಯಬೇಕಿದೆ.ಬಸವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.