Health tips : ಆಧುನಿಕ ಕಾಲದಲ್ಲಿ, ಮೂತ್ರಪಿಂಡದ ಕಲ್ಲುಗಳು ( ಕಿಡ್ನಿ ಸ್ಟೋನ್) (children kidney stone increased) ಒಂದು ತೀರ ಸಾಮಾನ್ಯ ಸಮಸ್ಯೆಯಾಗಿ ಕಂಡುಬರುತ್ತಿದೆ,.
ಇತ್ತೀಚಿಗಂತೂ ಹಿರಿಯರು, ಕಿರಿಯರೆಂಬ ವಿನಾಯಿತಿಯಿಲ್ಲದೆ ಎಲ್ಲಾ ವಯಸ್ಸಿನವರಲ್ಲೂ ಈ ಸಮಸ್ಯೆ ಕಂಡು ಬರುತ್ತಿವೆ. ಆತಂಕ ಮೂಡಿಸೋ ವಿಚಾರ ಅಂದ್ರೆ ಇತ್ತೀಚೆಗೆ ಈ ಸಮಸ್ಯೆ ಮಕ್ಕಳಲ್ಲಿ
ಹೆಚ್ಚಾಗಿ ಕಂಡುಬರುತ್ತಿದೆ. ಅಧ್ಯಯನದಿಂದ ತಿಳಿದು ಬಂದಿರೋ ಅಂಶ ಏನಪ್ಪಾ ಅಂದ್ರೆ ಮಕ್ಕಳಲ್ಲಿ ಮೂತ್ರಪಿಂಡದ ಕಲ್ಲುಗಳ ಆಗೋ ಸಂಭವ ಈಗ ಎರಡು ಪಟ್ಟು ಹೆಚ್ಚಾಗಿದೆ.

ಮೂತ್ರಪಿಂಡಗಳ ಪ್ರಾಥಮಿಕ ಕಾರ್ಯವೆಂದರೆ ರಕ್ತವನ್ನು ಶುದ್ಧೀಕರಿಸಿ ಅದರಲ್ಲಿರುವ ತ್ಯಾಜ್ಯ ವಸ್ತುಗಳನ್ನು ಮೂತ್ರದ ಮೂಲಕ ಹೊರಹಾಕುವುದು. ಒಂದು ವೇಳೆ ಈ ತ್ಯಾಜ್ಯ ವಸ್ತುಗಳು
ಮೂತ್ರದ ರೂಪದಲ್ಲಿ ಹೊರ ಹೋಗಲು ವಿಫಲವಾದ್ರೆ, ಅವು ಗಟ್ಟಿಯಾಗುತ್ತವೆ ಮತ್ತು ಅವು ಮೂತ್ರಪಿಂಡದ ಕಲ್ಲುಗಳಾಗಿ ಪರಿವರ್ತನೆಯಾಗುತ್ತವೆ. 1997 ರಿಂದ 2012 ರವರೆಗೆ, ಮೂತ್ರಪಿಂಡದ
ಕಲ್ಲು ಪ್ರಕರಣಗಳ ವಾರ್ಷಿಕ ಪ್ರಮಾಣವು ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಅಧ್ಯಯನಗಳು ಸೂಚಿಸುತ್ತಿವೆ. ಪ್ರಕರಣಗಳ ವಾರ್ಷಿಕ ದರದಲ್ಲಿ ಶೇಕಡಾ 16 ಹೆಚ್ಚಳವನ್ನು ತೋರಿಸುತ್ತಿವೆ.
ಗಮನಿಸಬೇಕಾದ ಅಂಶ ಅಂದ್ರೆ ಹೆಚ್ಚಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಿನವರು 15 ರಿಂದ 19 ವರ್ಷ (children kidney stone increased) ವಯಸ್ಸಿನವರು.
ಇದನ್ನೂ ಓದಿ : ಬಾಯಿ ಕ್ಯಾನ್ಸರ್ ಬಂದಿದೆ ಎಂದು ತಿಳಿಸುವ ಲಕ್ಷಣಗಳು ಯಾವುವು?? ಈ ಲಕ್ಷಣಗಳಿದ್ದರೆ ಆದಷ್ಟು ಬೇಗನೆ ವೈದ್ಯರ ಬಳಿ ತೋರಿಸಿಕೊಳ್ಳಿ.
ಕ್ಯಾಲ್ಸಿಯಂ (Calcium), ಆಕ್ಸಲೇಟ್ (Oxalate) ಮತ್ತು ರಂಜಕದಂತಹ (Phosphorus) ಖನಿಜಗಳು ಮೂತ್ರದಲ್ಲಿ ಸಂಗ್ರಹವಾಗುತ್ತವೆ ಮತ್ತು ಗಟ್ಟಿಯಾದ ಹಳದಿ ಹರಳುಗಳಾಗಿ ಗಟ್ಟಿಯಾಗುತ್ತವೆ. ಕೆಲವು
ಕಲ್ಲುಗಳು ಯಾವುದೇ ಸಮಸ್ಯೆಯಿಲ್ಲದೆ ಮೂತ್ರನಾಳದ ಮೂಲಕ ದೇಹದಿಂದ ಹೊರಬರಲು ಶಕ್ತವಾಗಿದ್ದರೆ, ಇನ್ನಿತರ ಲವಣಗಳು (Salt) ಮೂತ್ರದ ಹರಿವನ್ನು ನಿರ್ಬಂಧಿಸಬಹುದು ಮತ್ತು ತೀವ್ರವಾದ
ನೋವು ಮತ್ತು ರಕ್ತಸ್ರಾವವನ್ನು ಉಂಟುಮಾಡಬಹುದು.ಮೂತ್ರನಾಳದಲ್ಲಿ ಮೂತ್ರಪಿಂಡದ ಕಲ್ಲುಗಳು ಖನಿಜಗಳು ಸಿಕ್ಕಿಹಾಕಿಕೊಂಡಾಗ ಅತ್ಯಂತ ನೋವಿನಿಂದ ಕೂಡಿರುತ್ತದೆ ಮತ್ತು ಅಪಾಯಕಾರಿಯಾಗಿದೆ.

ರೋಗಲಕ್ಷಣಗಳು:
- ಮೂತ್ರದಲ್ಲಿ ಗುಲಾಬಿ, ಕಂದು ಅಥವಾ ಕೆಂಪು ರಕ್ತ.
- ಬೆನ್ನು, ಕೆಳ ಹೊಟ್ಟೆ ಮತ್ತು ತೊಡೆಸಂದು ಸುತ್ತ ತೀಕ್ಷ್ಣವಾದ ನೋವು
- ದುರ್ವಾಸನೆಯ ಮೂತ್ರ.
- ಆಗಾಗ್ಗೆ ಮೂತ್ರ ವಿಸರ್ಜನೆ.
- ಕಿರಿಕಿರಿ, ವಿಶೇಷವಾಗಿ ಕಿರಿಯ ಮಕ್ಕಳಲ್ಲಿ.
ಆದರೆ ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು, ತಜ್ಞರು ಸಾಕಷ್ಟು ದ್ರವಗಳನ್ನು ಕುಡಿಯಲು ಶಿಫಾರಸು ಮಾಡುತ್ತಾರೆ, ಮೇಯೊ ಕ್ಲಿನಿಕ್ (Mayo Clinic) ಪ್ರಕಾರ. ಅವರು ಉಪ್ಪು ಸೇವನೆಯನ್ನು
ಕಡಿಮೆ ಮಾಡಲು ಮತ್ತು ಸಂಸ್ಕರಿಸಿದ ಸಕ್ಕರೆಯ ಪಾನೀಯ ತಪ್ಪಿಸುವಂತೆ ಎಚ್ಚರಿಸುತ್ತಾರೆ. ಯಾವ ಚಿಕಿತ್ಸೆ ಅಗತ್ಯವೆನ್ನುವುದು ಕಲ್ಲುಗಳ ಗಾತ್ರ,ವಿಧ, ಇವುಗಳು ಇರುವ ಸ್ಥಳ, ಪ್ರಮಾಣ,
ಮೂತ್ರಕೋಶದ ಸೊಂಕು,ಪದೇಪದೆ ನೋವು, ಜ್ವರದ ಮೇಲೆ ಆಧಾರಿತ ಆಗಿರುತ್ತದೆ.

ಮಕ್ಕಳಲ್ಲಿ ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡಲು ಎಂಡೋಸ್ಕೋಪಿಯೊಂದಿಗೆ (Endoscopy) ಹೊಲ್ಮಿಯಮ್ ತಂತ್ರಜ್ಞಾನವನ್ನು (Holmium Technique) ಬಳಸಲಾಗುತ್ತದೆ. 5 ರಿಂದ 7
ಎಮ್.ಎಮ್ ಗಾತ್ರದ ಶೇ.50 ಕಲ್ಲುಗಳು ಮತ್ತು 4 ಮಿಲಿಮೀಟರ್ಗಿಂತ ಸಣ್ಣ ಗಾತ್ರದ ಶೇ.90 ರಷ್ಟು ಶಸ್ತ್ರ ಚಿಕಿತ್ಸೆ ಇಲ್ಲದೆ ಮೂತ್ರದ ಮೂಲಕ ಹೊರ ಬರುತ್ತವೆ.ಆದರೆ 7 ಎಮ್.ಎಮ್ಗಿಂತ ಗಾತ್ರದ
ಹೆಚ್ಚಿನ ಕಲ್ಲುಗಳು ತಾವಾಗಿಯೇ ಹೊರ ಬರುವುದು ಅಪರೂಪ.
ಇದನ್ನೂ ಓದಿ : ನಿಮಗೆ ಕೊಕಾ ಕೋಲಾ ಕುಡಿಯೋ ಅಭ್ಯಾಸ ಇದೆಯಾ…ಕ್ಯಾನ್ಸರ್ ಬರಬಹುದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ !
ಕಲ್ಲುಗಳು ತಾವಾಗಿಯೇ ಹೊರ ಬರಲು ಈ ಅವಧಿಯಲ್ಲಿ ನೀವು ವ್ಯಾಯಾಮ ಮಾಡಬೇಕು, ಸಾಕಷ್ಟು ದ್ರವ ಆಹಾರವನ್ನು ಸೇವಿಸಬೇಕು ಮತ್ತು ದಿನಕ್ಕೆ 3 ಲೀಟರ್ ನೀರನ್ನು ಕುಡಿಯಬೇಕು. ಮೇಲಿನ
ವಿಧಾನಗಳಿಂದ ಕಲ್ಲುಗಳನ್ನು ತೆಗೆಯಲಾಗದಿದ್ದರೆ, ಯುರೇಟೆಸ್ಕೋಪಿ,ಅಲ್ಟಾಸೋನಿಕ್ ಲಿಥೋಟ್ರಿಪ್ಸಿ, ಎಕ್ಟ್ರಾಕಾರ್ಪೊರಿಯಲ್ ಶಾಕ್ ವೇವ್ ಲೀಥೋಟ್ರಿಪ್ಸಿ,ಪರಕುಟೇನಿಯಸ್ ಲಿಥೋಟ್ರಿಪ್ಸಿ ಮತ್ತು
ಇತರ ವಿಧಾನಗಳಿಂದ ಕಲ್ಲುಗಳನ್ನು ತೆಗೆಯಬೇಕು.
ರಶ್ಮಿತಾ ಅನೀಶ್