Bengaluru ;( ಜು.27) : ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿದೆ, ಅಲ್ಲದೆ ಹವಾಮಾನವು ಕೂಡ ಆಹ್ಲಾದಕರವಾಗಿದೆ ಆದರೆ ಇದೇ ಸಮಯದಲ್ಲಿ, ಆರೋಗ್ಯದ (Childrens Madras Eye Infection)
ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ ಏಕೆಂದರೆ ಈ ನಡುವೆ ಆರೋಗ್ಯ ಸಮಸ್ಯೆಗಳು ಹೆಚ್ಚು ಕಾಡಲಾರಂಭಿಸಿವೆ. ಅದರಲ್ಲೂ ನಗರದ ಜನರಲ್ಲಿ ಮದ್ರಾಸ್ ಐ(Mdras Eye) ಸಮಸ್ಯೆ ಹೆಚ್ಚುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.

ಮದ್ರಾಸ್ ಐ ಸಮಸ್ಯೆ ಸದ್ದಿಲ್ಲದೆ ರಾಜ್ಯವನ್ನು ಪ್ರವೇಶಿಸಿದೆ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವೆಡೆ ಈ ಸಮಸ್ಯೆ ಕಾಡುತ್ತಿದೆ. ಆಗಾಗ್ಗೆ ಮಳೆ ಮತ್ತು ಬಿಸಿಲಿನ ವಾತಾವರಣದಿಂದಾಗಿ
ಈ ಸೋಂಕು ಕಂಡುಬರುತ್ತಿದೆ. ವೈದ್ಯರು ಹೇಳುವ ಪ್ರಕಾರ ಮದ್ರಾಸ್ ಐ ಕಾಯಿಲೆಗೆ ಕಾರಣವಾಗುವ ವೈರಸ್ (Virus) ಈ ಪರಿಸರದಲ್ಲಿ ಅತಿಯಾಗಿ ಹರಡುತ್ತದೆ. ಅದರಲ್ಲೂ ಮುಖ್ಯವಾಗಿ ನಗರಗಳಲ್ಲಿ ವಾಸಿಸುವ
ಮಕ್ಕಳಿಗೆ ಈ ಮದ್ರಾಸ್ ಐ ಕಾಟ ಹೆಚ್ಚಾಗಿದೆ. ಆಸ್ಪತ್ರೆಯಲ್ಲಿ ಪ್ರಸ್ತುತ ದಿನಕ್ಕೆ ಈ ಸೊಂಕಿನ 35 ರಿಂದ 40 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮದ್ರಾಸ್ ಐ ಸೋಂಕಿತ ಮಕ್ಕಳೊಂದಿಗೆ ಇತರ ಮಕ್ಕಳು
ಕೂಡ ಬೆರೆಯುವುದರಿಂದ, ಹಾಗೂ ಒಂದೇ ವಾಹನದಲ್ಲಿ ಓಡಾಡುವುದರಿಂದ ಹಾಗೂ ಇನ್ನೂ ಹಲವಾರು ಕಾರಣಗಳಿಂದ ಈ ಮದ್ರಾಸ್ ಕಣ್ಣಿನ ಕಾಯಿಲೆ ವೇಗವಾಗಿ ಹರಡುತ್ತಿದೆ.
ಇದನ್ನೂ ಓದಿ : ಎಇಆರ್‌ಬಿ ಅನುಮತಿ ಪಡೆಯದೆ ಖಾಸಗಿ ಆಸ್ಪತ್ರೆಗಳಿಂದ ಡಯಾಗ್ನಸಿಸ್ ಸೆಂಟರ್ ಆರಂಭ: ಕ್ರಮಕ್ಕೆ ಆಗ್ರಹ
ಮದ್ರಾಸ್ ಐ ಕಾಯಿಲೆಯು ವೈರಾಣುವಿನ ಸೋಂಕಾಗಿದ್ದು, ಇದು ಕೈ, ಬಟ್ಟೆ ಅಥವಾ ಬಳಸಿದ ವಸ್ತುಗಳ ಸಂಪರ್ಕದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕು ತಗುಲಿದ ನಂತರದ ಲಕ್ಷಣಗಳೆಂದರೆ
ಕಣ್ಣುಗಳು ಕೆಂಪಾಗುವುದು, ಕಣ್ಣುಗಳಲ್ಲಿ ನೀರು ಬರುವುದು, ಕಣ್ಣಿನಲ್ಲಿ ಪಿಚ್ಚುಗಟ್ಟುವುದು ಮತ್ತು ಕಣ್ಣಿಗೆ ಏನೋ ಬಿದ್ದಿರುವ ಅನುಭವ ಆಗುವುದು ಇದರ ಲಕ್ಷಣವಾಗಿದೆ.

ಕಣ್ಣಿನ ಸೋಂಕಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ರಜೆ ನೀಡಬೇಕು ಮತ್ತು ಇತರ ಮಕ್ಕಳೊಂದಿಗೆ ಬೇರೆಯಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.ಕಣ್ಣಿನ ಸೋಂಕು ಇರುವ ವಿದ್ಯಾರ್ಥಿಗಳು
ಅಥವಾ ಅವರ ಪಾಲಕರಿಗೆ ಕಡ್ಡಾಯವಾಗಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆಯಲು ಶಾಲಾ ಆಡಳಿತವು ಸೂಚಿಸಬೇಕು. ಯಾವುದೇ ಕಾರಣಕ್ಕೂ ಔಷಧಿ ಅಂಗಡಿಗಳಿಂದ ನೇರವಾಗಿ
ಅಂದರೆ ವೈದ್ಯರ ಚೀಟಿಯನ್ನು ಪಡೆಯದೇ ಕಣ್ಣಿನ ಔಷಧಿಗಳನ್ನು (Childrens Madras Eye Infection) ಪಡೆದು ಬಳಸಬಾರದು.
ಇದನ್ನೂ ಓದಿ : ಶಾಲಾ- ಕಾಲೇಜು ವಾಹನಗಳ ಟ್ಯಾಕ್ಸ್ ಏರಿಕೆ: ಕ್ಯಾಬ್‌ಗಳಿಗೆ ಜೀವಿತಾವಧಿ ಮೋಟಾರು ವಾಹನ ತೆರಿಗೆ
ಆಗಾಗ್ಗೆ ಸೋಪ್‌ನಿಂದ (Soap) ಕೈತೊಳೆಯಲು ಅಥವಾ ಸ್ಯಾನಿಟೈಜರ್ (Sanitizer) ಬಳಸಲು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಈ ಸೋಂಕಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಮುಖ್ಯವಾಗಿ ಕನ್ನಡಕಗಳನ್ನು
ಧರಿಸಿ, ಕಣ್ಣುಗಳ ರಕ್ಷಣೆ ಮಾಡಿಕೊಳ್ಳುವ ಮೂಲಕ ಮತ್ತು ಇತರರಿಂದ ದೂರವಿರುವ ಮೂಲಕ ಸೋಂಕು ಹರಡದಂತೆ ತಡೆಗಟ್ಟಬಹುದಾಗಿದೆ.
ಮದ್ರಾಸ್ ಐ ಸಮಸ್ಯೆ ಇರುವವರು ಆದಷ್ಟು ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು, ದ್ವಿಚಕ್ರ ವಾಹನ (Two wheeler) ಓಡಿಸಬಾರದು, ಇತರರಿಂದ ದೂರ ಇರಬೇಕು, ಟಿ.ವಿ (Television),
ಮೊಬೈಲ್ (Mobile), ಕಂಪ್ಯೂಟರ್ (Computer) ನೋಡುವುದು ಸ್ವಲ್ಪ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿ ಕೊಡಬೇಕು. ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರ
ಹತ್ತಿರ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅತೀ ಮುಖ್ಯ. ಇದು ವೈರಾಣುವಿನ ಸಮಸ್ಯೆ ಆಗಿರುವ ಕಾರಣ ಇದಕ್ಕೆ ನಿರ್ದಿಷ್ಟವಾಗಿರುವ ಚಿಕಿತ್ಸೆ ಇಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ.
ರಶ್ಮಿತಾ ಅನೀಶ್