ಬೀಜಿಂಗ್: 132 ಜನರನ್ನು ಹೊತ್ತೊಯ್ಯುತ್ತಿದ್ದ ಚೀನಾ(China) ಈಸ್ಟರ್ನ್ ಪ್ಯಾಸೆಂಜರ್ ಜೆಟ್(Eastern Passenger Jet) ಸೋಮವಾರ(Monday) ದಕ್ಷಿಣ(South) ಚೀನಾದಲ್ಲಿ(China) ಪತನಗೊಂಡಿದೆ ಎಂದು ವಾಯುಯಾನ ಅಧಿಕಾರಿಗಳು ತಿಳಿಸಿದ್ದಾರೆ. ಇದು ಪರ್ವತದ ಮೇಲೆ ಹಾದುಹೋಗುವಾಗ ಬೆಂಕಿ ಹತ್ತಿಕೊಂಡು ಭಸ್ಮವಾಗಿದೆ. ಇಲ್ಲಿಯವರೆಗೂ ಸಾವುಗಳ ಸಂಖ್ಯೆ ತಿಳಿದುಬಂದಿಲ್ಲ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.
ಬೋಯಿಂಗ್ 737 ವಿಮಾನವು ಕುನ್ಮಿಂಗ್ ನಗರದಿಂದ ದಕ್ಷಿಣದ ಕೇಂದ್ರವಾದ ಗುವಾಂಗ್‌ಝೌಗೆ ಗುವಾಂಗ್ಕ್ಸಿ ಪ್ರದೇಶದ “ವುಝೌ” ನಗರದ ಮೇಲೆ ವಾಯುಗಾಮಿ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ಚೀನಾದ ನಾಗರಿಕ ವಿಮಾನಯಾನ ಆಡಳಿತವು (CAAC) ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ, ಈ ವಿಮಾನವು ಅಪಘಾತಕ್ಕೀಡಾಗಿದೆ ಎಂದು ದೃಢವಾಗಿದೆ. ಸಿಎಎಸಿ ತನ್ನ ತುರ್ತು ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಿದೆ ಮತ್ತು ಘಟನಾ ಸ್ಥಳಕ್ಕೆ ಕಾರ್ಯನಿರತ ಗುಂಪನ್ನು ಕಳುಹಿಸಿದೆ ಎಂದು ಹೇಳಿದೆ.
ವಿಮಾನದಲ್ಲಿ 123 ಪ್ರಯಾಣಿಕರು ಮತ್ತು 9 ವಿಮಾನ ಸಿಬ್ಬಂದಿ ಇದ್ದರು ಎಂದು ಸಿಎಎಸಿ ತಿಳಿಸಿದೆ. ಪ್ರಾಂತೀಯ ತುರ್ತು ನಿರ್ವಹಣಾ ಬ್ಯೂರೋವನ್ನು ಉಲ್ಲೇಖಿಸಿ, ವುಝೌ ಬಳಿಯ ಟೆಂಗ್ ಕೌಂಟಿಯಲ್ಲಿ ವಿಮಾನವು ಪತನಗೊಂಡಿದೆ ಮತ್ತು ಬೆಂಕಿಗೆ ಆಹುತಿಯಾಗಿದೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ.