RCB ಅಭಿಮಾನಿಗಳೇ ಗಮನಿಸಿ – ಸ್ಟೇಡಿಯಂನಲ್ಲಿ (Chinnaswamy Stadium set up for IPL ) ಹೊಸ ನಿಯಮಗಳು
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಸುರಕ್ಷತೆಗಾಗಿ ಕಟ್ಟುನಿಟ್ಟಿನ ತಪಾಸಣೆ, ಹಲವು ವಸ್ತುಗಳಿಗೆ ನಿಷೇಧ
Bengaluru: ಐಪಿಎಲ್ 2026ರ ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ (Chinnaswamy Stadium set up for IPL) ಚಿನ್ನಸ್ವಾಮಿ ಸ್ಟೇಡಿಯಂ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಮಾರ್ಚ್ 28ರಂದು ನಡೆಯಲಿರುವ ಉದ್ಘಾಟನಾ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಪೊಲೀಸರು ಮತ್ತು ಕ್ರೀಡಾಂಗಣ ಅಧಿಕಾರಿಗಳು ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.

ಕಳೆದ ವರ್ಷ ನಡೆದ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ್ದ ಅವಘಡದ ಹಿನ್ನೆಲೆ ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪಂದ್ಯಕ್ಕೆ ಇನ್ನೂ ಎರಡು ದಿನ ಮಾತ್ರ ಬಾಕಿ ಇರುವ ಕಾರಣ ಎಲ್ಲಾ ವಿಭಾಗಗಳು (Chinnaswamy Stadium set up for IPL) ತುರ್ತು ಸಿದ್ಧತೆಯಲ್ಲಿ ತೊಡಗಿವೆ. ಅಭಿಮಾನಿಗಳು ಸುರಕ್ಷಿತವಾಗಿ ಪಂದ್ಯ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಐಪಿಎಲ್ ಪಂದ್ಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಮಾಕ್ ಡ್ರಿಲ್ ನಡೆಯಲಿದೆ.
ಬೆಂಗಳೂರು ನಗರ ಪೊಲೀಸರು ಮತ್ತು ಎನ್‌ಎಸ್‌ಜಿ (NSG) ಪಡೆ ಸೇರಿ ಭದ್ರತಾ ತಾಲೀಮು ನಡೆಸಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಈ ಅಣಕು ಪ್ರದರ್ಶನದಲ್ಲಿ ಸ್ಟೇಡಿಯಂ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಭದ್ರತೆ, ಪ್ರೇಕ್ಷಕರ ತಪಾಸಣೆ, ಶಂಕಾಸ್ಪದ ವಸ್ತುಗಳ ಪರಿಶೀಲನೆ ಹಾಗೂ ಜನಸಂದಣಿ ನಿಯಂತ್ರಣ ಕ್ರಮಗಳ ಬಗ್ಗೆ ಅಭ್ಯಾಸ ನಡೆಯಲಿದೆ.
ಸುಮಾರು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಈ ಮಾಕ್ ಡ್ರಿಲ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟೇಡಿಯಂ ಸುತ್ತಮುತ್ತಲಿನ ಸಂಚಾರ ವ್ಯವಸ್ಥೆಯನ್ನೂ ಪೊಲೀಸರು ವಿಶೇಷವಾಗಿ ಪರಿಶೀಲಿಸುತ್ತಿದ್ದಾರೆ. ಪಂದ್ಯ ದಿನ ಭಾರೀ ಜನಸಂದಣಿ ನಿರೀಕ್ಷೆಯಿರುವುದರಿಂದ ಟ್ರಾಫಿಕ್ ನಿಯಂತ್ರಣಕ್ಕೆ ವಿಶೇಷ ಯೋಜನೆ ರೂಪಿಸಲಾಗಿದೆ.
ಮೆಟ್ರೋ, ಬಸ್ ಮತ್ತು ಖಾಸಗಿ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಟ್ರಾಫಿಕ್ (Traffic) ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಿದ್ದಾರೆ.
ಸ್ಟೇಡಿಯಂ ಬಳಿ ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಅಭಿಮಾನಿಗಳು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ ಮಾಡಲಾಗಿದೆ.
ಇನ್ನೂ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗಾಗಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಸ್ಟೇಡಿಯಂ ಒಳಗೆ ಅಪಾಯಕಾರಿ ಅಥವಾ ನಿರ್ಬಂಧಿತ ವಸ್ತುಗಳನ್ನು ತರುವುದಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.
ಪಿಸ್ತೂಲ್, ಚಾಕು, ಕತ್ತರಿ, ಪಟಾಕಿ, ಪೆಟ್ರೋಲ್, ಡೀಸೆಲ್, ಲೈಟರ್ (Lighter) , ಮದ್ಯಪಾನ ವಸ್ತುಗಳು, ಸಿಗರೇಟ್, ಬ್ಯಾಗ್, ಹೆಲ್ಮೆಟ್, ಕ್ಯಾಮೆರಾ ಸೇರಿದಂತೆ ಹಲವು ವಸ್ತುಗಳನ್ನು
ತರಲು ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರೇಕ್ಷಕರು ಸ್ಟೇಡಿಯಂಗೆ ಪ್ರವೇಶಿಸುವ ಮೊದಲು ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತದೆ.
ಒಟ್ಟಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ನಡೆಸಲು ಬೆಂಗಳೂರು ನಗರ ಪೊಲೀಸರು, ಕೆಎಸ್‌ಸಿಎ ಮತ್ತು ಇತರ ಇಲಾಖೆಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ.
ಅಭಿಮಾನಿಗಳು ಸಹ ಪೊಲೀಸ್ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸಿ, ಸಮಯಕ್ಕಿಂತ ಮುಂಚಿತವಾಗಿ ಸ್ಟೇಡಿಯಂಗೆ ಆಗಮಿಸಿ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಎಲ್ಲರ ಸಹಕಾರದಿಂದ ಪಂದ್ಯವನ್ನು ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ನಡೆಸುವ ವಿಶ್ವಾಸ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : https://vijayatimes.com/terrible-bus-accident-in-andhra/