• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಚಿತ್ರದುರ್ಗದ ಬಳಿ ಖಾಸಗಿ ಬಸ್ ಅಗ್ನಿ ದುರಂತ: ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಚಿತ್ರದುರ್ಗದ ಬಳಿ ಖಾಸಗಿ ಬಸ್ ಅಗ್ನಿ ದುರಂತ: ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
0
SHARES
17
VIEWS
Share on FacebookShare on Twitter
  • ರಾಜ್ಯವನ್ನೇ ಶೋಕದಲ್ಲಿ ಮುಳುಗಿಸಿದ ದುರಂತಕ್ಕೆ (chitradurga bus tragedy) ಸಿಎಂ ಸಿದ್ದರಾಮಯ್ಯ ಸಂತಾಪ
  • ಗಾಯಾಳುಗಳಿಗೆ ಉಚಿತ ಚಿಕಿತ್ಸೆ, ಉನ್ನತ ತನಿಖೆಗೆ ಆದೇಶ
  • ಮೃತರ ಗುರುತಿನ ದೃಢೀಕರಣಕ್ಕಾಗಿ ಡಿಎನ್‌ಎ ಪರೀಕ್ಷೆಯ ಮೊರೆ ಹೋದ ಪೊಲೀಸ್ ಅಧಿಕಾರಿಗಳು

Bengaluru: ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಪ್ರವಾಸಕ್ಕೆ ಹೊರಟಿದ್ದ ಹಲವರ ಬದುಕು ಚಿತ್ರದುರ್ಗ (chitradurga bus tragedy) ಜಿಲ್ಲೆಯ ಹಿರಿಯೂರು ಸಮೀಪದ ಗೊರ್ಲತ್ತು ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ ಕ್ಷಣಾರ್ಧದಲ್ಲಿ ಅಂತ್ಯಗೊಂಡಿದೆ.

ಲಾರಿ ಮತ್ತು ಬಸ್ ನಡುವೆ ನಡೆದ ಗಂಭೀರ ಅಪಘಾತದ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹಲವು ಪ್ರಯಾಣಿಕರು ಸಜೀವ ದಹನವಾಗಿರುವುದು ರಾಜ್ಯದ ಜನತೆಯನ್ನು ಆಘಾತಕ್ಕೆ ಒಳಪಡಿಸಿದೆ.

chitradurga bus tragedy

ಹಬ್ಬದ ದಿನವೇ ಸಂಭವಿಸಿದ ಈ ದುರ್ಘಟನೆ ಕರ್ನಾಟಕದ ಜನಮನದಲ್ಲಿ (chitradurga bus tragedy) ಆಳವಾದ ನೋವು ಮತ್ತು ಶೋಕವನ್ನುಂಟುಮಾಡಿದೆ.

ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕಾಗಿ ತೆರಳುತ್ತಿದ್ದ ಬಸ್‌ನ ಪ್ರಯಾಣಿಕರು ಸಂತೋಷದ ನೆನಪುಗಳೊಂದಿಗೆ ಮನೆಗೆ ಮರಳುವ ಕನಸಿನಲ್ಲಿ ಇದ್ದಾಗಲೇ ಈ ದುರಂತವು ಅವರ ಪಯಣವನ್ನು ಶಾಶ್ವತವಾಗಿ ನಿಲ್ಲಿಸಿದೆ.

ಇನ್ನು ರಾತ್ರಿ ಹೊರಟಿದ್ದ ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ‘ಸೀ ಬರ್ಡ್’ (Seabird) ಬಸ್ ನಂಬರ್ KA-01 AE-5217 ಬೆಂಕಿಗೆ ಆಹುತಿಯಾಗಿದೆ.

ಡಿಸೆಂಬರ್ 24, 2025 ರಂದು ರಾತ್ರಿ ಹೊರಟಿದ್ದ ಈ ಬಸ್‌ನಲ್ಲಿ ಒಟ್ಟು 29 ಜನ ಪ್ಯಾಸೆಂಜರ್ಸ್ (Passengers) .

ಸೀ ಬರ್ಡ್ ಟ್ರಾವೆಲ್ಸ್‌ನ ಚಾರ್ಟ್ (Chart) ಪ್ರಕಾರ ಆ ಬಸ್‌ನಲ್ಲಿ ಪ್ರಯಾಣ ಮಾಡ್ತಿದ್ದವರ ಹೆಸರುಗಳು ಹೀಗಿವೆ.

ಗಾಂಧಿನಗರದಿಂದ ಬಸ್ ಹತ್ತಿದವರು ಬೆಂಗಳೂರಿನ ಗಾಂಧಿನಗರದಲ್ಲಿರುವ ಸೀ ಬರ್ಡ್ ಲಾಂಜ್‌ನಿಂದ ರಾತ್ರಿ 8:25ಕ್ಕೆ ಬಸ್ ಹೊರಟಿದೆ.

ಇಲ್ಲಿ ಒಟ್ಟು 7 ಜನ ಬಸ್ ಹತ್ತಿದ್ದಾರೆ. ಅವರ ಹೆಸರುಗಳು: ಮಂಜುನಾಥ್ (Manjunath) , ಸಂಧ್ಯಾ ಎಚ್ (Sandhya H) , ಶಶಾಂಕ್ ಎಚ್ ವಿ (Shashank H V) , ದಿಲೀಪ್ (Dilip) , ಪ್ರತೀಶ್ವರನ್ (Prethiswaran) , ಬಿಂದು ವಿ (Bindhu V) ಮತ್ತು ಕವಿತಾ ಕೆ (Kavitha K).ಆನಂದರಾವ್ ಸರ್ಕಲ್ ಪ್ಯಾಸೆಂಜರ್ಸ್ ಬಸ್ ಮುಂದೆ ಆನಂದರಾವ್ ಸರ್ಕಲ್ ಕಡೆ ಬಂದಾಗ ಅಲ್ಲಿ ಮೂರು ಜನ ಬಸ್ ಹತ್ತಿದ್ದಾರೆ.

ಅನಿರುದ್ಧ್ ಬ್ಯಾನರ್ಜಿ (Anirudh banerjee) , ಅಮೃತಾ (Amruta) ಮತ್ತು ಇಶಾ (Isha) ಇಲ್ಲಿಂದ ಜರ್ನಿ ಶುರು ಮಾಡಿದ್ರು. ಇವರೆಲ್ಲರೂ ಸ್ಲೀಪರ್ ಬಸ್‌ನ ಅಪ್ಪರ್ ಬರ್ತ್ ಬುಕ್ ಮಾಡಿದ್ರು.

ಅಲ್ಲದೆ ಮೆಜೆಸ್ಟಿಕ್ ಪಿಕಪ್ ಪಾಯಿಂಟ್‌ನಲ್ಲಿ ಅತಿ ಹೆಚ್ಚು ಅಂದ್ರೆ 13 ಜನ ಬಸ್ ಏರಿದ್ದಾರೆ. ಸೂರಜ್ (Suraj) , ಮಾನಸ (Manasa) , ಮಿಲನ (Milana) , ಹೇಮರಾಜ್ ಕುಮಾರ್ (Hemraj kumhar) , ಕಲ್ಪನಾ ಪ್ರಜಾಪತಿ (Kalpana prajapati) , ಶಶಿಕಾಂತ್ ಎಂ (Shashikant M) , ವಿಜಯ್ ಭಂಡಾರಿ (Vijay Bhandari) , ನವ್ಯ (Navya) , ಅಭಿಷೇಕ್ (Abhishek) , ಕಿರಣ್ ಪಾಲ್ ಎಚ್ (Kiran pal h) , ಕೀರ್ತನ್ ಎಂ (Kirthan M) , ನಂದಿತಾ ಜಿ ಬಿ (Nanditha G B) ಮತ್ತು ದೇವಿಕಾ ಎಚ್ (Devika H).

ಯಶವಂತಪುರದ ಗೋವರ್ಧನ್ ಥಿಯೇಟರ್ ಹತ್ರ ಮೇಘರಾಜ್ (Megharaj) , ಮಸ್ರತುನ್ನಿಸಾ ಎಸ್ ಎನ್ (Masratunnisa S N) ಮತ್ತು ಸೈಯದ್ ಜಮೀರ್ ಗೌಸ್ (Syed Zameer Ghouse) ಬಸ್ ಹತ್ತಿದ್ದಾರೆ.

ಕೊನೆಯದಾಗಿ ಗೊರಗುಂಟೆಪಾಳ್ಯದಲ್ಲಿ ಗಗನಶ್ರೀ ಎಸ್ (Gaganashree S) , ರಶ್ಮಿ ಮಹಲೆ (Rashmi Mahale) ಮತ್ತು ರಕ್ಷಿತಾ ಆರ್ (Rakshitha R) ಬಸ್ ಹತ್ತಿದ್ದಾರೆ.

ಈ ಬಸ್‌ನಲ್ಲಿ ಕುಳಿತಿದ್ದ 25 ಜನರು ಗೋಕರ್ಣಕ್ಕೆ ಟಿಕೆಟ್ ಬುಕ್ (Ticket Book) ಮಾಡಿದ್ದರು. ಇನ್ನುಳಿದವರಲ್ಲಿ ಇಬ್ಬರು ಶಿವಮೊಗ್ಗಕ್ಕೆ ಮತ್ತು ಇಬ್ಬರು ಕುಮಟಾಗೆ ಹೋಗುತ್ತಿದ್ದರು.

ಈ ದುರ್ಘಟನೆಯ ಸುದ್ದಿ ತಿಳಿದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಘಾತ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಚಿತ್ರದುರ್ಗದ ಬಳಿ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಮಂದಿ ಸಜೀವ ದಹನವಾದುದು ಎದೆ ನಡುಗಿಸುವ ಸಂಗತಿ.

ಮೃತರ ಕುಟುಂಬಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಭಾವುಕವಾಗಿ ತಿಳಿಸಿದ್ದಾರೆ. ಜೊತೆಗೆ ಗಾಯಗೊಂಡವರಿಗೆ ತಲಾ ₹50,000 ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದು, ಗಾಯಾಳುಗಳಿಗೆ ಯಾವುದೇ ವೆಚ್ಚವಿಲ್ಲದೆ ಅತ್ಯುತ್ತಮ ಚಿಕಿತ್ಸೆ ಒದಗಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸರ್ಕಾರ ಈ ದುಃಖದ ಹೊತ್ತಿನಲ್ಲಿ ಪೀಡಿತ ಕುಟುಂಬಗಳ ಜೊತೆ ನಿಲ್ಲಲಿದೆ ಎಂಬ ಭರವಸೆಯನ್ನು ಅವರು ನೀಡಿದ್ದಾರೆ.

ದುರ್ಘಟನೆಯ ಹಿನ್ನೆಲೆ ಮತ್ತು ಪರಿಣಾಮಗಳು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದ ಕಾರಣ, ಬಸ್‌ನಲ್ಲಿ ಸಾಕಷ್ಟು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಅಪಘಾತದ ನಂತರ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಕೆಲವರ ಗುರುತು ಪತ್ತೆಹಚ್ಚುವುದು ಕೂಡ ಕಷ್ಟಸಾಧ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಮೃತರ ಗುರುತಿನ ದೃಢೀಕರಣಕ್ಕಾಗಿ ಡಿಎನ್‌ಎ ಪರೀಕ್ಷೆಯ ಮೊರೆ ಹೋಗಲಾಗಿದೆ. ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗೆ ಇಳಿದರೂ, ಬೆಂಕಿಯ ತೀವ್ರತೆ ಅನೇಕ ಜೀವಗಳನ್ನು ಉಳಿಸಲು ಅಡ್ಡಿಯಾಯಿತು. ಈ ಘಟನೆ ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲಿನ ಗಂಭೀರ ಪ್ರಶ್ನೆಗಳನ್ನು ಮತ್ತೆ ಎತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸೂಚನೆ ನೀಡಿದ್ದಾರೆ. “ಈ ದುರ್ಘಟನೆಯ ಹಿಂದೆ ಇರುವ ಕಾರಣಗಳನ್ನು ಸಂಪೂರ್ಣವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಹೆದ್ದಾರಿ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸಲಾಗುವುದು” ಎಂದು ಅವರು ಭರವಸೆ ನೀಡಿದ್ದಾರೆ.

ರಾಜ್ಯದ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ವೇಗಗೊಳಿಸುತ್ತಿವೆ.

ರಸ್ತೆ ಅಪಘಾತಗಳ ತಡೆಗೆ ಕಠಿಣ ನಿಯಮಗಳು ಹಾಗೂ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಈ ದುರ್ಘಟನೆ ಕೇವಲ ಒಂದು ಅಪಘಾತವಲ್ಲ, ಅನೇಕ ಕುಟುಂಬಗಳ ಕನಸುಗಳನ್ನು, ಸಂತೋಷವನ್ನು ಕಿತ್ತುಕೊಂಡ ಭೀಕರ ಆಘಾತವಾಗಿದೆ.

ಹಬ್ಬದ ಸಂಭ್ರಮದಲ್ಲಿ ಪ್ರವಾಸಕ್ಕೆ ಹೊರಟವರು ಮರಳಿ ಬರದ ನೋವು ಅವರ ಕುಟುಂಬಸ್ಥರನ್ನು ಜೀವಪೂರ್ತಿ ಕಾಡಲಿದೆ. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ ಎಂಬ ಪ್ರಾರ್ಥನೆಯೊಂದಿಗೆ, ರಾಜ್ಯ ಸರ್ಕಾರ ಮತ್ತು ಸಮಾಜ ಒಟ್ಟಾಗಿ ಪೀಡಿತರಿಗೆ ಮಾನಸಿಕ ಮತ್ತು ಆರ್ಥಿಕ ಬೆಂಬಲ ನೀಡಬೇಕಾಗಿದೆ.

ರಸ್ತೆ ಸುರಕ್ಷತೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸುವ ಈ ಘಟನೆ, ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ನಡೆಯದಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇದನ್ನು ಓದಿ : https://vijayatimes.com/chitradurga-fire-accident/

Related News

ಉಬರ್ ಆ್ಯಪ್‌ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಸೇವೆ ಆರಂಭ: ಒಂದೇ ಆ್ಯಪ್‌ನಲ್ಲಿ ಪ್ರಯಾಣದ ಸಂಪೂರ್ಣ ಪ್ಲ್ಯಾನ್
ದೇಶ-ವಿದೇಶ

ಉಬರ್ ಆ್ಯಪ್‌ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಸೇವೆ ಆರಂಭ: ಒಂದೇ ಆ್ಯಪ್‌ನಲ್ಲಿ ಪ್ರಯಾಣದ ಸಂಪೂರ್ಣ ಪ್ಲ್ಯಾನ್

August 19, 2026
ಸಾರ್ವಜನಿಕರ ವಿಶ್ವಾಸಕ್ಕೆ ದ್ರೋಹ:PM CARES ನಿಧಿ ಬಳಕೆ ಕುರಿತು ಪ್ರಿಯಾಂಕ್ ಖರ್ಗೆ ಆರೋಪ
ದೇಶ-ವಿದೇಶ

ಸಾರ್ವಜನಿಕರ ವಿಶ್ವಾಸಕ್ಕೆ ದ್ರೋಹ:PM CARES ನಿಧಿ ಬಳಕೆ ಕುರಿತು ಪ್ರಿಯಾಂಕ್ ಖರ್ಗೆ ಆರೋಪ

August 19, 2026
ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ
ಪ್ರಮುಖ ಸುದ್ದಿ

ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ

August 19, 2026
ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ
ಪ್ರಮುಖ ಸುದ್ದಿ

ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ

August 19, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.