ಕೋಕಾದಿಂದ(Coco) ಮಾಡಲ್ಪಡುವ ಚಾಕೊಲೇಟ್(Chocolate) ಕೇವಲ ತಿನ್ನಲು ಮಾತ್ರವಲ್ಲದೆ, ಸೌಂದರ್ಯವನ್ನು ಕಾಪಾಡಿಕೊಳ್ಳಲೂ ನೆರವಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.
ಕೆಲವರಿಗೆ ತಿಳಿದಿದ್ದರೂ, ಚಾಕೊಲೇಟ್ ಅನ್ನು ಸೌಂದರ್ಯ ವರ್ಧಕವಾಗಿ(Beauty Product) ಬಳಸುವುದಕ್ಕಿಂತ ತಿನ್ನುವುದೇ ಒಳಿತು ಎಂದು ಊಹಿಸುತ್ತಾರೆ.

ಈ ಕಾರಣಗಳಿಂದ, ಚಾಕೊಲೇಟ್ ಅನ್ನು ಸೌಂದರ್ಯ ವರ್ಧಕವಾಗಿ ಬಳಸುವವರ ಸಂಖ್ಯೆ ಕಡಿಮೆ. ಕೋಕಾ ಕೂಡ ದುಬಾರಿಯಾಗಿರುವುದು ಇದಕ್ಕೆ ಮತ್ತೊಂದು ಕಾರಣವಾಗಿದೆ.
ಆದರೆ ತುಂಬಾ ದುಬಾರಿಯಾದರೂ ಚಾಕಲೇಟ್‌ನಲ್ಲಿ ಹಲವಾರು ರೀತಿಯ ಸೌಂದರ್ಯವರ್ಧಕ ಗುಣಗಳು ಇವೆ.
ಇದನ್ನೂ ಓದಿ : https://vijayatimes.com/anupam-kher-speaks-about-bollywood/
ಚಾಕೊಲೇಟ್-ಗ್ರೀನ್ ಟೀ-ಜೇನು ತುಪ್ಪ ಫೇಸ್ ಪ್ಯಾಕ್ : ಚಾಕೊಲೇಟ್ ನಲ್ಲಿರುವ ಪ್ರಮುಖ ಲಾಭವೆಂದರೆ ಇದರಲ್ಲಿ ಹೇರಳವಾಗಿರುವ ಆ್ಯಂಟಿಆಕ್ಸಿಡೆಂಟ್ಗಳು. ಆ್ಯಂಟಿ ಆಕ್ಸಿಡೆಂಟ್ಗಳು(Anti-Oxidents) ವಯಸ್ಸಾಗುವ ಲಕ್ಷಣಗಳನ್ನು ದೂರ ಮಾಡುವುದು.

ಗ್ರೀನ್ ಟೀ(Green Tea) ಕೂಡ ಆ್ಯಂಟಿ-ಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಕಾರಣದಿಂದಾಗಿ ಕೋಕಾವನ್ನು ಇದಕ್ಕೆ ಮಿಶ್ರಣ ಮಾಡಿಕೊಂಡಾಗ ಒಳ್ಳೆಯ ಲಾಭ ಪಡೆಯಬಹುದು.
ಕಡು ಕೋಕಾ ಪೌಡರನ್ನು ಜತೆ ಸೇರಿಸಿ ಜೇನುತುಪ್ಪ ಮತ್ತು ಹಾಲಿನ ಕೆನೆಯನ್ನು ಇದಕ್ಕೆ ಬೆರೆಸಿಕೊಳ್ಳಿ. ಹತ್ತು ನಿಮಿಷ ಕಾಲ ಈ ಫೇಸ್ ಪ್ಯಾಕ್ ನ್ನು ಮುಖದಲ್ಲಿ ಇರಲು ಬಿಟ್ಟು, ಬಳಿಕ ಬಿಸಿ ನೀರಿನಿಂದ ತೊಳೆಯಿರಿ.
15 ದಿನಕ್ಕೊಮ್ಮೆ ಇದನ್ನು ಬಳಸಿದರೆ ನೀವು ಚಿರ ಯೌವ್ವನ ಪಡೆಯುವುದರಲ್ಲಿ ಸಂಶಯವಿಲ್ಲ.
ಚಾಕೊಲೇಟ್ ಮತ್ತು ಮೊಸರಿನ ಫೇಸ್ ಪ್ಯಾಕ್ : ಮೊಡವೆ ಹಾಗೂ ಚರ್ಮದ ತುಂಬಿರುವ ರಂಧ್ರಗಳಿಂದ ಮುಕ್ತಿ ಪಡೆಯಬೇಕೆಂದರೆ ಚಾಕಲೇಟ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಸಿಹಿ ಇಲ್ಲದೆ ಇರುವ ಕೋಕಾ ಪುಡಿಯನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ.

ಇದಕ್ಕೆ ಜೇನುತುಪ್ಪ ಮತ್ತು ಓಟ್ ಮೀಲ್ ಪುಡಿ ಅಥವಾ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ.
ವಾರದಲ್ಲಿ ಒಂದು ಸಲ ಇದನ್ನು ಬಳಸಿಕೊಂಡರೆ ತುಂಬಿದ ರಂಧ್ರಗಳು ತೆರೆದುಕೊಂಡು ಮೊಡವೆ ಹಾಗೂ ಬೊಕ್ಕೆಗಳಿಂದ ಮುಕ್ತಿ ಸಿಗುವುದು. ನೈಸರ್ಗಿಕವಾಗಿ ಚರ್ಮಕ್ಕೆ ಕಾಂತಿ ನೀಡಲು ಚಾಕೊಲೇಟ್ ತುಂಬಾ ಲಾಭಕಾರಿ.
ಚಾಕೊಲೇಟ್ ತೆಂಗಿನಕಾಯಿ ಸ್ಕ್ರಬ್ : ಚರ್ಮದ ಸತ್ತ ಕೋಶಗಳನ್ನು ತೆಗೆಯಲು ನಿಮಗೆ ಒಳ್ಳೆಯ ಚಿಕಿತ್ಸೆ ಬೇಕೆಂದರೆ, ನೀವು ಕಂದು ಸಕ್ಕರೆಯನ್ನು ತೆಂಗಿನೆಣ್ಣೆಯಲ್ಲಿ ಬಿಸಿ ಮಾಡಿಕೊಳ್ಳಿ.
ಇದು ಬಿಸಿಯಾಗಿರುವಾಗಲೇ ಇದಕ್ಕೆ ಕೋಕಾ ಪುಡಿ ಹಾಕಿಕೊಳ್ಳಿ. ಓಟ್ ಮೀಲ್ ಪೌಡರನ್ನು ಈ ಮಿಶ್ರಣಕ್ಕೆ ಹಾಕಿಕೊಂಡರೆ ಒಳ್ಳೆಯ ಸ್ಕ್ರಬ್ ಆಗುವುದು. ಸ್ಕ್ರಬ್ ಅನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: https://vijayatimes.com/hd-kumarswamy-statement-over-devanalli-land/
ಕೋಕಾ ಬೆಣ್ಣೆ ಫೇಶಿಯಲ್ : ಮಗುವಿನಂತಹ ಮೃದುವಾದ ಚರ್ಮವು ನಿಮಗೆ ಬೇಕಾದರೆ ಬೆಣ್ಣೆ ಮತ್ತು ಚಾಕೊಲೇಟ್‌ನ ಫೇಶಿಯಲ್ ಮಾಡಿಕೊಂಡು ಬಳಸಿ.
ಈ ಫೇಶಿಯಲ್‌ನಲ್ಲಿ ಕೋಕಾ ಬೆಣ್ಣೆ, ಜೇನುತುಪ್ಪ, ಗಿಣ್ಣು, ಬಾದಾಮಿ ಎಣ್ಣೆ ಮತ್ತು ಕಡು ಕೋಕಾ ಪುಡಿ ಎಲ್ಲವನ್ನು ಜತೆ ಸೇರಿಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ.
ಬಳಿಕ ಚರ್ಮಕ್ಕೆ ಮಸಾಜ್ ಮಾಡಿ. ಇದನ್ನು ಚರ್ಮವು ಸರಿಯಾಗಿ ಹೀರಿಕೊಂಡ ಬಳಿಕ ಮೃದು ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುವುದು.
- ಪವಿತ್ರ