ಜಮೈಕಾ ಆ 19 : ಕೊರೊನಾ ವಿರುದ್ದ ಸಾಕಷ್ಟು ದೇಶಗಳು ಹೊರಾಡುತ್ತಿದ್ದು, ಅದರಲ್ಲಿ ಭಾರತ ಕೂಡ ಒಂದಾಗಿದೆ ಆದರೆ ಭಾರತ ಕೊರೊನಾ ನಿರ್ವಹಣೆಯ ಜೊತೆ ಕೆಲವು ದೇಶಗಳಿಗೆ ಲಸಿಕೆಗಳನ್ನು ನೀಡುವುದರ ಮೂಲಕವೂ ಬೇರೆ ದೇಶಗಳಿಗೂ ಮಾದರಿಯಾಗಿದೆ.
ಭಾರತ ಸರ್ಕಾರವು ಇತ್ತೀಚೆಗೆ ವ್ಯಾಕ್ಸಿನ್ ಮೈತ್ರಿ ಎಂಬ ಕಾರ್ಯಕ್ರಮದಡಿ 50,000 ಕೊರೊನಾ ಲಸಿಕೆಗಳನ್ನುಜಮೈಕಾಗೆ ನೀಡದೆ. ಇದರಿಂದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಸಂತಸಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಜಮೈಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿದ ಕ್ರಿಸ್ ಗೇಲ್ ವಿಡಿಯೋ ಮೂಲಕ ಭಾರತ ಸರ್ಕಾರಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಇದಕ್ಕೂ ಮೊದಲಿ ವೆಸ್ಟ್ ಇಂಡೀಸ್ನ ಮತ್ತೊಬ್ಬ ಕ್ರಿಕೆಟಿಗ ಆಂಡ್ರೆ ರಸೆಲ್ ಕೂಡ ಮೋದಿ ಮತ್ತು ಜಮೈಕಾದಲ್ಲಿರುವ ರಾಯಭಾರಿ ಕಚೇರಿಗೆ ಬಿಗ್ ತ್ಯಾಂಕ್ಯೂ ಜಗತ್ತು ಸಹಜ ಸ್ಥಿತಿಗೆ ವಾಪಸ್ಸು ಹೋಗುವುದನ್ನು ನೋಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.