
ತಮ್ಮ ಮಕ್ಕಳಿಗೆ ಹೆಸರಿಡುವಾಗ ತಂದೆ ತಾಯಿ ಅದೆಷ್ಟೋ ಬಾರಿ ಯೋಚನೆ ಮಾಡುತ್ತಾರೆ. ಹೀಗೇ ಯೋಚನೆ ಮಾಡಿ, ಹಾಲಿವುಡ್ ಖ್ಯಾತ ನಟ ‘ಕ್ರಿಸ್ ಹೆಮ್ಸ್‌ವರ್ಥ್’ (Chris Hemsworth),
ತಮ್ಮ ಮಗಳಿಗೆ ಇಂಡಿಯಾ(India) ಎಂದು ಹೆಸರಿಡುವ ಮೂಲಕ ಭಾರತೀಯರ ಮನಸೂರೆಗೊಂಡಿದ್ದಾರೆ.
ಕ್ರಿಸ್ ಹೆಮ್ಸ್‌ವರ್ಥ್ ಅವರು ಹಾಲಿವುಡ್‍ನ ಖ್ಯಾತ ಎವೆಂಜರ್ಸ್ (Avengers) ಚಿತ್ರಗಳಲ್ಲಿ ಥಾರ್ (Thor)ಪಾತ್ರದಲ್ಲಿ ಮಿಂಚಿ ಎಲ್ಲೆಡೆ ಹೆಸರು ಮಾಡಿದ ಸಿನಿರಸಿಕರ ಗಮನ ಸೆಳೆದಿದ್ದ ನಟ.
https://vijayatimes.com/modi-shown-humanity/
ಹಾಲಿವುಡ್ ಸ್ಟಾರ್ ಆಗಿದ್ದರೂ ಕೂಡ ಭಾರತದ ಮೇಲೆ ಇವರು ಪ್ರೀತಿ ವಿಶೇಷವಾಗಿದೆ. ಇದೇ ಕಾರಣದಿಂದ, ತಮ್ಮ ಮುದ್ದಿನ ಮಗಳಿಗೆ ‘ಇಂಡಿಯಾ ರೋಸ್’ (India Rose) ಎಂದು ನಾಮಕರಣ ಮಾಡಿದ್ದಾರೆ.
ಈ ವಿಷಯದ ಬಗ್ಗೆ ಸ್ವತಃ ಕ್ರಿಸ್ ಅವರೇ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಹೌದು, “ನನಗೆ ಭಾರತದ ಮೇಲೆ ವಿಶೇಷ ಪ್ರೀತಿಯಿದೆ.
ಹೀಗಾಗಿ ನನ್ನ ಮುದ್ದಿನ ಮಗಳಿಗೆ ಇಂಡಿಯಾ ರೋಸ್ ಎಂದು ನಾಮಕರಣ ಮಾಡಿದ್ದೇನೆ” ಎಂದು ಸ್ವತಃ ಕ್ರಿಸ್ ಅವರೇ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ತಮ್ಮ ನೆಟ್‍ಫ್ಲಿಕ್ಸ್ ಪ್ರಾಜೆಕ್ಟ್ ‘ಧಾಕಾ’ (DHAKA) ದ ಶೂಟಿಂಗ್‍ಗಾಗಿ ಭಾರತಕ್ಕೆ ಬಂದಿದ್ದ ಕ್ರಿಸ್ ಅವರು,
ಇಲ್ಲಿನ ಅಹಮದಾಬಾದ್(Ahmedabad) ಮತ್ತು ಮುಂಬೈನಲ್ಲಿ (Mumbai) ಚಿತ್ರೀಕರಣ ನಡೆಸಿದ್ದರು. ಈ ಕುರಿತು ಮಾತನಾಡಿದ್ದ ಕ್ರಿಸ್ “ಮೊದಲಿಗೆ ಭಾರತದಲ್ಲಿ ಶೂಟಿಂಗ್ ಮಾಡುವುದಕ್ಕೆ ಆತಂಕವಿತ್ತು,
ಆದರೆ ನಂತರ ಇಲ್ಲಿನ ಜನರ ಜೊತೆ ಬೆರೆಯುತ್ತ ಬಹಳ ಸಂತೋಷವಾಯ್ತು.
ಇಲ್ಲಿನ ಜನರು ಶೂಟಿಂಗ್ ವೇಳೆ ನಮಗೆ ತೋರಿದ ಪ್ರೀತಿ, ಗೌರವ ನಿಜಕ್ಕೂ ನನಗೆ ಬಹಳ ಖುಷಿ ಕೊಟ್ಟಿದೆ” ಎಂದು ಹೊಗಳಿದರು.
ಮುಂದುವರಿಸಿದ ಅವರು “ನನ್ನ ಪತ್ನಿ ಎಲ್ಸಾ ಗರ್ಭಿಣಿಯಾಗಿದ್ದಾಗ ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದ್ದಾಳೆ,

ಅವಳಿಗೆ ಕೂಡ ಭಾರತ ಅಚ್ಚುಮೆಚ್ಚು ಹೀಗಾಗಿ ನಾವಿಬ್ಬರು ನಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡಲು ನಿರ್ಧರಿಸಿದೆವು” ಎಂದು ತಿಳಿಸಿದರು. ಹಾಗೆಯೇ ಇದೇ ವೇಳೆ ತಮ್ಮ ಅವಳಿ ಮಕ್ಕಳಾದ ಸಾಶಾ ಹಾಗೂ ಡ್ರಿಸ್ಟನ್ ಬಗ್ಗೆ ಕೂಡ ಕ್ರಿಸ್ ಮಾತನಾಡಿದ್ದಾರೆ. https://vijayatimes.com/modi-shown-humanity/
“ನನಗೆ ಭಾರತ, ಅಲ್ಲಿನ ಜನರು ಮತ್ತು ಅಲ್ಲಿ ಮಾಡಿದ ಶೂಟಿಂಗ್ ಕ್ಷಣಗಳು ತುಂಬಾ ಇಷ್ಟ. ಇಲ್ಲಿ ಪ್ರತಿನಿತ್ಯವು ಶೂಟಿಂಗ್ ಮಾಡುವಾಗ ಸಾವಿರಾರು ಜನ ನಿಂತು ನೋಡುತ್ತಿದ್ದರು,
ಆ ರೀತಿ ಶೂಟಿಂಗ್ ಸೆಟ್‍ನಲ್ಲಿ ಜನ ಇರುವುದನ್ನ ನಾನು ಹಿಂದೆಂದೂ ನನ್ನ ಅನುಭವದಲ್ಲಿ ನೋಡಿರಲಿಲ್ಲ. ಮೊದಲಿಗೆ ಆಶ್ಚರ್ಯ ಹಾಗೂ ಕೊಂಚ ಭಯವಾಯ್ತು, ನಂತರ ಜನರ ಪ್ರತಿಕ್ರಿಯೆಯನ್ನು ನೋಡಿ ಖುಷಿಯಾಯ್ತು” ಎಂದರು.
ಪವಿತ್ರ