Visit Channel

ಕ್ರಿಸ್ಮಸ್ ಗೆ `ಶಕೀಲಾ’ ಬರ್ತಾಳೆ!

IMG-20201221-WA0003

ಇಂದ್ರಜಿತ್ ಲಂಕೇಶ್ ನಿರ್ದೇಶನದ `ಶಕೀಲಾ’ ಚಿತ್ರದ ಟ್ರೇಲರ್ ಈಗಾಗಲೇ ಸುದ್ದಿಯಲ್ಲಿದೆ. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಚಿತ್ರದ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಎಷ್ಟು ಹೇಳಿದರೂ ಕಡಿಮೆ ಎನ್ನುವಂತಾಗಿದೆ. ಅದಕ್ಕೆಂದೇ ಅವರು ಇತ್ತೀಚೆಗಷ್ಟೇ ಮತ್ತೊಂದು ಬಾರಿ ಮಾಧ್ಯಮಗೋಷ್ಠಿ ಏರ್ಪಡಿಸಿ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವುಗಳ ಒಂದಷ್ಟು ವಿವರ ಇಲ್ಲಿದೆ.

“ಇದೊಂದು ನಿಜವಾದ ಪ್ಯಾನ್ ಇಂಡಿಯಾ ಸಿನಿಮಾ ಅಂತ ಹೇಳಬಹುದು. ಐದು ಭಾಷೆಯ ಸಿನಿಮಾ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸುದ್ದಿ ಮಾಡ್ತಾ ಇದೆ. ನಾಯಕಿ ರಿಚಾ ಚಡ್ಡಾ ಬಾಲಿವುಡ್ ನಟಿ. ಮತ್ತೋರ್ವ ಪ್ರಧಾನ ಪಾತ್ರಧಾರಿ ಪಂಕಜ್ ತ್ರಿಪಾಠಿ ಬೀದಿ ನಾಟಕಗಳನ್ನು ಮಾಡಿ ಬೆಳೆದವರು. ಈಗ ಓಟಿಟಿ ಯಲ್ಲಿ ದೊಡ್ಡ ಅಭಿಮಾನಿ ಬಳಗ ವನ್ನು ಹೊಂದಿದ್ದಾರೆ. ಪ್ಯಾನ್ ಇಂಡಿಯಾ ಯಾಕೆ ಹೇಳ್ತಾ ಇದ್ದೀನೆಂದರೆ ಇಲ್ಲಿ ಬಾಲಿವುಡ್ ನಟ ನಟಿಯರು ತಂತ್ರಜ್ಞರು ಮಾತ್ರ ಅಲ್ಲ, ಕೇರಳದಲ್ಲಿ ರಾಜೀವ್ ಪಿಳ್ಳೆ ಕರ್ನಾಟಕದಿಂದ ಎಸ್ತರ್, ಸುಚೇಂದ್ರ ಪ್ರಸಾದ್ ಮತ್ತು ಹಲವಾರು ಯುವ ನಟರಿದ್ದಾರೆ. ಮರಾಠಿಯ ನಟರೂ ಇದ್ದಾರೆ. ಒಟ್ಟಿನಲ್ಲಿ ಬೇರೆ ಬೇರೆ ಭಾಷೆಯ ರಾಜ್ಯದ ಸಂಸ್ಕೃತಿಯ ಒಂದು ಮಿಲನ ಅಂತ ಹೇಳಬಹುದು. ವೀರ ಸಮರ್ಥ್, ಸಂತೋಷ್ , ಬಲು ಸರೋಜ, ಪಾತಾಜೆಯಂಥ ತಂತ್ರಜ್ಞರು ಇದ್ದಾರೆ. ಚಿತ್ರವು ರಾಷ್ಟ್ರೀಯ ಮತ್ತುಅಂತಾರಾಷ್ಟ್ರೀಯ ಮಟ್ಟದಲ್ಲಿ 2000 ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತೆ. ದುಬೈ, ಅಮೆರಿಕಾ ಯುರೋಪ್ ನಲ್ಲಿ ಆಸ್ಟ್ರೇಲಿಯ ನಲ್ಲಿ ಕೂಡಾ ಪ್ರೀಮಿಯರ್ ಆಗುತ್ತೆ. ಇದು ನಮಗೆ ಒಂದು ಹೆಮ್ಮೆಯ ವಿಷಯ” ಎನ್ನುತ್ತಾರೆ ಇಂದ್ರಜಿತ್

ಚಿತ್ರದ ಟ್ರೇಲರ್ ನೋಡಿದ ಮೇಲೆ ಪ್ರತಿಕ್ರಿಯೆ ಹೇಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಇಂದ್ರಜಿತ್, “ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯ ಬಂದಿಲ್ಲ. ಕೆಲವೊಂದು ಆಪಾದನೆಗಳಿರಬಹುದು. ಅದು ಸಹಜ. ಒಳ್ಳೆಯ ಅಭಿಪ್ರಾಯ ಇದ್ದಲ್ಲಿ ಕೆಟ್ಟ ಅಭಿಪ್ರಾಯ ಖಂಡಿತವಾಗಿ ಇರುತ್ತೆ. ಕುತೂಹಲ ಮೂಡಿಸಿದೆ ಅಂತ ಹೇಳ್ತಾರೆ. ಇಂತಹ ಕೋವಿಡ್ ಟೈಮಲ್ಲಿ ನಾವು ಐದು ಭಾಷೆಗಳಲ್ಲಿ ಈ ರೀತಿ ಚಿತ್ರ ಪ್ರಚಾರ ಮಾಡ್ತಿರೋದು ಇದೇ ಮೊದಲು. ಇದು ದಕ್ಷಿಣ ಭಾರತದ ಒಂದು ನಟಿಯ ಕಥೆ. ಹಾಗಾಗಿ ಕರ್ನಾಟಕ, ಕೇರಳದಲ್ಲಿ , ತಮಿಳುನಾಡಿನಲ್ಲಿ,ಹೈದರಾಬಾದ್ ನಲ್ಲಿ ಅತೀ ಹೆಚ್ಚು ಥಿಯೇಟರ್ ನಲ್ಲಿ ರಿಲೀಸ್ ಆಗ್ತಿದೆ. ಇವತ್ತು ನಾವು ಪ್ಯಾನ್ ಇಂಡಿಯಾ ಪ್ಯಾನ್ ಗ್ಲೋಬಲ್ ಸಿನಿಮಾಗಳನ್ನು ಮಾಡಬೇಕಾಗುತ್ತದೆ. ಆ ತರಹ ಆಲೋಚನೆ ಇಟ್ಕುಕ್ಕೊಂಡೇ ಕಥೆ ಮಾಡಬೇಕಾಗುತ್ತದೆ. ಸಿನಿಮಾ ಮಾಡಬೇಕಾಗುತ್ತದೆ. ಹಾಗಾಗಿ ಶಕೀಲಾ ಕೂಡಾ ಆ ಒಂದು ಆಲೋಚನೆಯಿಂದ ನೇ ಸಿನಿಮಾ ಮಾಡಿದ್ದೇನೆ. ಇದು ಶಕೀಲಾ ಸಿನಿಮಾಗಳ ಬಗ್ಗೆ ಹೇಳುವ ಕತೆ ಅಲ್ಲ; ಶಕೀಲಾ ಜೀವನ ಆಧಾರಿತ ಸಿನಿಮಾ ಮಾಡ್ತಾ ಇದ್ದೀನಿ. ಶಕೀಲಾ ಬಯೋಪಿಕ್ ಮಾಡಿದಾಗ ಬರೀ ಇಲ್ಲಿರುಷ್ಟು ಕುತೂಹಲ ನಾರ್ತ್ ಇಂಡಿಯಾದಲ್ಲಿ ಇಲ್ಲ. ಹಾಗಾಗಿ ಬಾಲಿವುಡ್ ನಟಿಯನ್ನು ನಾಯಕಿಯನ್ನಾಗಿ ಮಾಡಿದೆ. ಈಗ ಬಾಲಿವುಡ್ ಮಾತ್ರ ಅಲ್ಲ ಒಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ರಿಲೀಸ್ ಗಮನ ಸೆಳೆದಿದೆ” ಎಂದರು.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.