ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಸಿಬಿಲ್ ಎಂಬುವುದು ಅತ್ಯವಶ್ಯಕ. ಬ್ಯಾಂಕ್‌ನಿಂದ ಸಾಲ ಪಡೆಯಬೇಕೆಂದಿದ್ದರೆ ಸಿಬಿಲ್ ಸ್ಕೋರ್ ತುಂಬಾ ಮುಖ್ಯ. ಹಲವರಿಗೆ ಸಿಬಿಲ್ ಬಗ್ಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ ನೋಡಿ. ಸಿಬಿಲ್ ಕಂಪನಿ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಸಿಬಿಲ್ ಕಂಪನಿ ಸಾಲವನ್ನು ಅನುಮೋದಿಸಬೇಕಾದರೆ, ಕ್ರೆಡಿಟ್ ಕೇಳುವ ಸಂಸ್ಥೆ ಅದಕ್ಕೆ ತಕ್ಕಂತೆ ಮಾಹಿತಿ ನೀಡಬೇಕು. ಹಣವನ್ನು ಹಿಂದಿರುಗಿಸುವ ಸಾಮರ್ಥ್ಯ ಇದ್ದರೆ ಮಾತ್ರ ಸಾಲ ಸಿಗುತ್ತದೆ. ಸಿಬಿಲ್ ಎಲ್ಲರ ಡೇಟಾ ಸಂಗ್ರಹಿಸಿ ಅದನ್ನು ಎಲ್ಲಾ ಬ್ಯಾಂಕುಗಳಿಗೆ ಕೊಡುತ್ತದೆ. ಇದರ ಆಧಾರದ ಮೇಲೆ ಬ್ಯಾಂಕುಗಳು ಸಾಲ ಕೊಡಬೇಕೆ ಅಥವಾ ಬೇಡವೇ ಎಂಬುದನ್ನು ತೀರ್ಮಾನಿಸುತ್ತವೆ.

ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಜಾಣ್ಮೆಯಿರಲಿ :
ಬ್ಯಾಂಕುಗಳಿಂದ ನೀವು ಕ್ರೆಡಿಟ್ ಕಾರ್ಡ್ ಪಡೆದುಕೊಂಡೂ ಅದನ್ನು ಬಳಸದಿದ್ದರೆ ಪಡೆದ ಸಾಲ ಮರು ಪಾವತಿಸಲು ನೀವು ಶಕ್ತರಿಲ್ಲ. ಹೀಗಾಗಿ, ಕಾರ್ಡ್ ಬಳಸುತ್ತಿಲ್ಲ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಪದೇ ಪದೆ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಡೆಯುತ್ತಿದ್ದರೆ ಅಂತವರನ್ನೂ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುತ್ತಿದ್ದಾರೆಂದು ಪರಿಗಣಿಸಿ ಅಂಕ ಕಡಿತ ಮಾಡಲಾಗುತ್ತದೆ. ಹೀಗಾಗಿ, ಕಾರ್ಡ್ ಅನ್ನು ಅತಿಯಾಗಿ ಬಳಕೆ ಹಾಗೂ ಬಳಕೆ ಮಾಡದಿದ್ದರೂ ಎರಡು ಅಂಶಗಳು ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ.
ಸಾಲ ಪಡೆಯಲು ಬೇಕು ಸಿಬಿಲ್ ಸ್ಕೋರ್ :
ನಾವು ಖಾತೆದಾರರಾಗಿರುವ ಬ್ಯಾಂಕ್ನಲ್ಲಿ ಸಾಲ ಪಡೆಯಲು ಹೋದಾಗ ಆ ಬ್ಯಾಂಕ್ ನೀಡಿದ ಕ್ರೆಡಿಟ್ ಕಾರ್ಡ್ನಲ್ಲಿ ನಮ್ಮ ಹೆಸರಲ್ಲಿ ಕ್ರೆಡಿಟ್ ಆದ ಸಿಬಿಲ್ ಸ್ಕೋರ್ಗಳನ್ನು ಆಧರಿಸಿ ನಿಮಗೆ ಸಾಲ ನೀಡಲು ಮುಂದಾಗುತ್ತಾರೆ. ಒಂದು ವೇಳೆ ಸಿಬಿಲ್ ಸ್ಕೋರ್ ಕಡಿಮೆ ಇದ್ದಲ್ಲಿ ಬ್ಯಾಂಕುಗಳು ನಿಮಗೆ ಸಾಲ ನೀಡದೇ ಇರಬಹುದು.
ಸಿಬಿಲ್ ಕ್ರೆಡಿಟ್ ಅಂಕಗಳು ಎಷ್ಟಿರಬೇಕು ಗೊತ್ತೆ? :
ಗ್ರಾಹಕರು 750- 900 ಅಂಕಗಳನ್ನು ಪಡೆದಿದ್ದರೆ ಬ್ಯಾಂಕುಗಳು ಆತನನ್ನು ‘ಅತ್ಯುತ್ತಮ ಗ್ರಾಹಕ’ನೆಂದು ಪರಿಗಣಿಸುತ್ತವೆ. 700-750 ಅಂಕಗಳಿದ್ದರೆ ತಕ್ಕ ಮಟ್ಟಿಗಿನ ಗ್ರಾಹಕ ಎನಿಸಿಕೊಳ್ಳುತ್ತಾರೆ. 550-750 ಕಡಿಮೆ ಸ್ಕೋರ್ ಎಂದು ಪರಿಣಿಸಲಾಗುತ್ತದೆ. 300-500 ಅಂಕಗಳನ್ನು ಅತಿ ಕಡಿಮೆ ಸ್ಕೋರ್ ಎಂದು ಪರಿಗಣಿಸಿ ಸಾಲ ನೀಡಲು ನಿರಾಕರಿಸಬಹುದು. ಹಾಗಾಗಿ, 750ಕ್ಕೂ ಅಧಿಕ ಅಂಕಗಳನ್ನು ಸಂಪಾದಿಸಿದರೆ ಸಾಲ ಕೇಳಿದಷ್ಟು ಸಿಗಬಹುದು.
ಸಾಲದ ಅವಧಿ ಮತ್ತು ಕ್ರೆಡಿಟ್ ಕಾರ್ಡ್ನ ಬಳಕೆ :
ನೀವು ಬ್ಯಾಂಕ್ನಿಂದ ಪಡೆದ ಕ್ರೆಡಿಟ್ ಕಾರ್ಡ್ ಅನ್ನು ಎಷ್ಟರ ಮಟ್ಟಿಗೆ ಬಳಕೆ ಮಾಡಿದ್ದೀರಿ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಈ ಹಿಂದೆ ಪಡೆದುಕೊಂಡಿರುವ ಸಾಲ, ಅದನ್ನು ತೀರಿಸಿರುವ ಅವಧಿಯನ್ನು ಸಿಬಿಲ್ ಕಂಪನಿ ದಾಖಲೆಗಳನ್ನು ಮಾಡುತ್ತಿರುತ್ತದೆ. ಉತ್ತಮ ಬಳಕೆ ಮತ್ತು ಸಾಲ ಮರುಪಾವತಿ ಅವಧಿ ಸರಿಯಾಗಿರಬೇಕು.
ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಿ
ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿದ್ದರೆ ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಬೇಕು. ಒಂದು ವೇಳೆ ನೀವು ಸಾಲದ ಕಂತನ್ನು ಪ್ರತಿ ತಿಂಗಳ 1ನೇ ದಿನಾಂಕಕ್ಕೆ ಪಾವತಿ ಮಾಡಬೇಕಿರುತ್ತದೆ. ಆದರೆ, ಆಗ ನಿಮ್ಮ ಖಾತೆಯಲ್ಲಿ ಹಣ ಹೊಂದಿಸಲಾಗದೇ 7 ತಾರೀಖಿನಂದು ಸಾಲದ ಕಂತನ್ನು ಖಾತೆಯಿಂದ ಡೆಬಿಟ್ ಮಾಡಿಕೊಳ್ಳುವಂತೆ ಬ್ಯಾಂಕಿನವರಿಗೆ ಸೂಚಿಸಿದರೆ, ಅಂಥವರನ್ನು ಸಿಬಿಲ್ ಕಂಪನಿ ಸುಸ್ಥಿರ ಗ್ರಾಹಕನಲ್ಲ ಎಂದು ಪರಿಗಣಿಸುತ್ತದೆ.

ಇಎಂಐ ಮೂಲಕ ಸಾಲ ತೀರಿಸಿದ್ರೆ ಸಿಗಲ್ಲ ಸ್ಕೋರ್ :
ಕ್ರೆಡಿಟ್ ಕಾರ್ಡ್ನ ಮೂಲಕ ಯಾವುದಾದರೂ ವಸ್ತುವನ್ನು ಖರೀದಿಸಿದ ಬಳಿಕ ಆ ಮೊತ್ತವನ್ನು ನೀವು ನಿಗದಿತ ಸಮಯದಲ್ಲಿ ಪಾವತಿಸಲು ಸಾಧ್ಯವಾಗುವುದಿಲ್ಲ. ಅದನ್ನು ಸಾಲವಾಗಿ ಬದಲಾಯಿಸಿ EMI ರೂಪದಲ್ಲಿ ಸಾಲದ ಮರುಪಾವತಿ ಮಾಡಿದರೆ ಇದು ಸಿಬಿಲ್ ಸ್ಕೋರ್ ಪರಿಗಣನೆಗೆ ಬರುವುದಿಲ್ಲ. ಹೀಗಾಗಿ, ಸಾಲವನ್ನು ನಿಗದಿತ ನಮೂನೆಯಲ್ಲೇ ತೀರಿಸಿ, ಅದನ್ನು ಇಎಂಐಗೆ ಬದಲಿಸಬೇಡಿ.