ರಾಜ್ಯದಲ್ಲಿ ನಡೆದಿರುವ ಪಿಎಸ್‍ಐ ನೇಮಕಾತಿ ಪರೀಕ್ಷೆ(PSI Recruitment Scam) ಅಕ್ರಮ(Illegal) ಕುರಿತು ಸಿಐಡಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

ಮಾಜಿ ಬಿಜೆಪಿ ಮಹಿಳಾ ಅಧ್ಯಕ್ಷೆ, ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‍ಪಿನ್ ದಿವ್ಯ ಹಾಗರಗಿ(Divya Hagaragi) ಮತ್ತು ಆಕೆಯ ತಂಡವನ್ನು ಸಿಐಡಿ(CID) ಬಂಧಿಸುವಲ್ಲಿ ಯಶಸ್ವಿಯಾಗಿದೆ! ಈ ಮೂಲಕ ಅಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳನ್ನು ಕೂಡ ಸಿಐಡಿ ವಿಚಾರಣೆಗೆ ಒಳಪಡಿಸಿ ಅಕ್ರಮದಲ್ಲಿ ಭಾಗಿಯಾಗಿದ್ದರೆ ನಂತರ ಆರೋಪಿಗಳೆಂದು ಪರಿಗಣಿಸಿ, ಬಂಧಿಸಲಾಗುತ್ತಿದೆ. ಇತ್ತ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದು ಜೊತೆಗೆ ಪಿಎಸ್‍ಐ ನೇಮಕಾತಿ ಅಕ್ರಮದ ಕಿಂಗ್‍ಪಿನ್ ದಿವ್ಯಾ ಹಾಗರಗಿ ಬಿಜೆಪಿಯವಳು, ಆಕೆಗೆ ಪ್ರಭಾವಿ ರಾಜಕಾರಣಿಗಳ ಬೆಂಬಲವಿದೆ.
ಇದೆಲ್ಲಾ ಬಿಜೆಪಿ ಸರ್ಕಾರದ ಹಗರಣ! ಇದು ಹೊರಬರಬೇಕು, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರನ್ನು ಬಂಧಿಸಬೇಕು ಬಿಜೆಪಿ(BJP) ಸರ್ಕಾರ 40% ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್(Congress) ಆರೋಪಿಸುತ್ತಿದೆ. ಇದೇ ಸಾಲಿನಲ್ಲಿ ಮುಂದುವರೆದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ(Priyank Kharghe) ಅವರನ್ನು ಸಿಐಡಿ ತನಿಖೆಗೆ ಹಾಜರಾಗುವಂತೆ ಮೊದಲ ನೋಟಿಸ್ ನೀಡಿತು.

ಈ ಬಗ್ಗೆ ಪ್ರತಿಕ್ರಿಯೇ ನೀಡಿದ ಖರ್ಗೆ, ನಾನು ಯಾಕೆ ಹಾಜರಾಗಬೇಕು? ಅಕ್ರಮದಲ್ಲಿ ಭಾಗಿಯಾಗಿರುವುದು ಬಿಜೆಪಿಯವರು! ನನಗೂ ಇದಕ್ಕೂ ಯಾವ ರೀತಿ ಸಂಬಂಧ ಎಂದು ತನಿಖೆ ಹಾಜರನ್ನು ತಳ್ಳಿಹಾಕಿದರು. ಸಿಐಡಿ ಅಧಿಕಾರಿಗಳು ಎರಡನೇ ಬಾರಿಗೆ ಪ್ರಿಯಾಂಕ್ ಖರ್ಗೆಗೆ ತನಿಖೆಗೆ ಹಾಜರಾಗದ ಹಿನ್ನಲೆ ನೋಟಿಸ್ ನೀಡಿತು. ಆದ್ರೆ, ಇದಕ್ಕೂ ಕ್ಯಾರೇ ಅನ್ನದ ಪ್ರಿಯಾಂಕ್ ಖರ್ಗೆ ಅವರ ನಡೆಗೆ ಈಗ ಮತ್ತೊಮ್ಮೆ ಮೂರನೇ ಬಾರಿಗೆ ಸಿಐಡಿ ಬುಧವಾರ ನೋಟಿಸ್ ಜಾರಿ ಮಾಡಿದೆ.
ಈ ಬಾರಿ ನೋಟಿಸ್ ನಲ್ಲಿ “ಈ ನೋಟಿಸ್ ಸ್ವೀಕರಿಸಿದ ಎರಡು ದಿನಗಳೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗಿ ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಹೇಳಿಕೆ ದಾಖಲಿಸುವಂತೆ” ಪ್ರಿಯಾಂಕ್ ಖರ್ಗೆ ಅವರಿಗೆ ಡಿವೈಎಸ್ಪಿ ನರಸಿಂಹಮೂರ್ತಿಯವರು ಸೂಚಿಸಿದ್ದಾರೆ.