For Effortless Weight Loss, Drink Cinnamon Water!
Health Tips: ಸಾಮಾನ್ಯವಾಗಿ ಹುಷಾರಿಲ್ಲ ಎಂದರೆ ನಮ್ಮ ಹಿರಿಯರು ಯಾವಾಗಲೂ ಮನೆಮದ್ದಿಗೆ (Home Remedy) ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ನಮ್ಮ ಹಿರಿಯರ ಬಳಿ ಯಾವಾಗಲೂ ಆರೋಗ್ಯ ಸಮಸ್ಯೆಗಳಿಗೆ (Health Disease) ಒಂದಲ್ಲ ಒಂದು ಪರಿಹಾರವಿರುತ್ತಿತ್ತು. ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಮನೆಮದ್ದುಗಳನ್ನು ಅವರು ಹೇಳುತ್ತಿದ್ದರು. ಅಡುಗೆ ಮನೆಯಲ್ಲಿರುವ ಹಲವಾರು ವಸ್ತುಗಳನ್ನೇ ಅವರು ಔಷಧವಾಗಿ ಬಳಸುತ್ತಿದ್ದರು.
ಅಂಥ ಪರಿಣಾಮಕಾರಿ ಔಷಧೀಯ ಗುಣಗಳನ್ನು ಹೊಂದಿರುವ ಆಹಾರ ಪದಾರ್ಥಗಳಲ್ಲಿ ದಾಲ್ಚಿನ್ನಿಯೂ (Cinnamon) ಒಂದು. ಹೌದು, ದಾಲ್ಚಿನ್ನಿ ಒಂದು ಮ್ಯಾಜಿಕಲ್ ಮನೆಮದ್ದಾಗಿದೆ. ಇದು ಸಾಮಾನ್ಯವಾಗಿ ನಮ್ಮೆಲ್ಲರ ಅಡುಗೆಮನೆಯಲ್ಲಿ ಕಂಡು ಬರುವ ಮಸಾಲೆಯಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ.
ಇದು ಮುಖ್ಯವಾಗಿ ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ (Antiviral) ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಭಾರತ, ಶ್ರೀಲಂಕಾ, ಇಂಡೋನೇಷ್ಯಾ, ಬ್ರೆಜಿಲ್, ವಿಯೆಟ್ನಾಂ ಮತ್ತು ಈಜಿಪ್ಟ್ ನಂತಹ ದೇಶಗಳಲ್ಲಿ ದಾಲ್ಚಿನ್ನಿ ಹಲವಾರು ವಿಧಗಳಿದ್ದರೂ ಸಿಲೋನ್ ದಾಲ್ಚಿನ್ನಿ ಮತ್ತು ಕ್ಯಾಸಿಯಾ ದಾಲ್ಚಿನ್ನಿ ಅತ್ಯಂತ ಜನಪ್ರಿಯವಾಗಿದೆ. ಸಿಲೋನ್ ದಾಲ್ಚಿನ್ನಿ, ಸಾಮಾನ್ಯವಾಗಿ ನಿಜವಾದ ದಾಲ್ಚಿನ್ನಿ ಎಂದು ಕರೆಯಲ್ಪಡುತ್ತದೆ.
ದಾಲ್ಚಿನ್ನಿ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ (Antibacterial) ಗುಣಗಳನ್ನು ಹೊಂದಿದ್ದು ಅದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಾಲ್ಚಿನ್ನಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ದೇಹವು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ದಾಲ್ಚಿನ್ನಿ ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿನ ನಾರಿನ ಅಂಶದ ಕಾರಣ ದಿಂದ ಬೆಳಗಿನ ಸಮಯದಲ್ಲಿ ಹೊಟ್ಟೆಯಲ್ಲಿ ಸೇವನೆ ಮಾಡುವು ದರಿಂದ ಹೊಟ್ಟೆ (Stomach) ತುಂಬಿದ ಅನುಭವ ಉಂಟಾಗುತ್ತದೆ ಮತ್ತು ಹೊಟ್ಟೆ ಹಸಿವು ದೂರವಾಗುತ್ತದೆ.ಪ್ರಮುಖವಾಗಿ ಇದು ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸಿ ದೇಹದ ತೂಕ ನಿಯಂತ್ರಣ ಕಾರ್ಯವನ್ನು ಅತ್ಯುತ್ತಮವಾಗಿ ಮಾಡುತ್ತದೆ.
ಅಷ್ಟೇ ಅಲ್ಲದೆ ದಾಲ್ಚಿನ್ನಿ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದರಿಂದ ಇದರ ನಿರಂತರವಾದ ಔಷಧೀಯ ಪ್ರಯೋಜನ ಗಳನ್ನು ಮತ್ತು ಆಂಟಿ ಆಕ್ಸಿಡೆಂಟ್ (Anti Occident)ಗುಣಲಕ್ಷಣಗಳನ್ನು ಪಡೆದುಕೊಳ್ಳ ಬಹುದು.ಇದರಲ್ಲಿ ಶಕ್ತಿಯುತವಾದ ಮತ್ತು ಆರೋಗ್ಯಕರವಾದ ನೈಸರ್ಗಿಕ ಸ್ವರೂಪದ ರಾಸಾಯನಿಕ ಇರಲಿದ್ದು, ಪ್ರಾಜೆಸ್ಟಿರೋನ್ ಮತ್ತು ಟೆಸ್ಟೋಸ್ಟಿರೋನ್ ಹಾರ್ಮೋನುಗಳ ಸಮತೋಲನವನ್ನು ಕಾಪಾಡುತ್ತದೆ.
Cinnamon Water for Weight Loss Health Tips
Health Tips: Generally not feeling well means that our elders always gave more importance to Home Remedy. Our elders always had one or the other solution for health problems. He used to tell effective home remedies for major health problems. He used many things in the kitchen as medicine.
Cinnamon is one of the foods that have such effective medicinal properties. Yes, cinnamon is a magical home remedy. It is a common spice found in all our kitchens and is known for its numerous health benefits.
It mainly has antiviral, antibacterial and antifungal properties. Although there are many varieties of cinnamon in countries like India, Sri Lanka, Indonesia, Brazil, Vietnam and Egypt, Ceylon cinnamon and cassia cinnamon are the most popular. Ceylon cinnamon, commonly known as true cinnamon.
Cinnamon has anti-inflammatory and antibacterial properties that help boost the immune system in the body. Drinking cinnamon water regularly helps your body fight infections and diseases.
Cinnamon plays an important role in controlling your body weight. Due to its fiber content, consuming it in the morning in the stomach gives a feeling of fullness in the stomach and eliminates hunger pangs. Importantly, it stimulates the metabolism process and makes the body’s weight control function optimal.
Apart from this, drinking cinnamon water on an empty stomach in the morning can reap its continuous medicinal benefits and anti-oxidant properties. It contains a powerful and healthy natural chemical that maintains the balance of progesterone and testosterone hormones.