ಕ್ಯಾಲಿಫೋರ್ನಿಯಾ : ಭಾರತದ ನ್ಯಾಯಾಂಗ ವ್ಯವಸ್ಥೆ ನಮ್ಮ ಸಂವಿಧಾನಕ್ಕೆ(Constitution) ಮಾತ್ರ ಉತ್ತರದಾಯಿಯಾಗಿ ಕಾರ್ಯನಿರ್ವಹಿಸುತ್ತದೆ ಹೊರತು, ರಾಜಕೀಯ ಪಕ್ಷಗಳಿಗೆ ಅಲ್ಲ.
ಸಾಂವಿಧಾನಿಕ ಮತ್ತು ಪ್ರಜಾತಾಂತ್ರಿಕ ಸಂಸ್ಥೆಗಳ ಕಾರ್ಯನಿರ್ವಹಣೆ ಕುರಿತು ಜನಸಾಮಾನ್ಯರಿಗೆ ಸೂಕ್ತ ತಿಳುವಳಿಕೆಯ ಅಗತ್ಯವಿದೆ.
ಆಗ ಮಾತ್ರ ಜನರಿಗೆ ನ್ಯಾಯಾಂಗದ ಮೌಲ್ಯ ಅರ್ಥವಾಗುತ್ತದೆ ಎಂದು ಸುಪ್ರೀಂಕೋರ್ಟ್(Supremecourt) ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ(CJI NV Ramana statement) ಅಭಿಪ್ರಾಯಪಟ್ಟಿದ್ದಾರೆ.

ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ(San Francisco) ಭಾರತೀಯ ಮೂಲದ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಸಾಂವಿಧಾನಿಕ ಸಂಸ್ಥೆಗಳ ಕಾರ್ಯ ನಿರ್ವಹಣೆಯ ಬಗ್ಗೆ ಸಾಮಾನ್ಯ ಜನರಿಗೆ ಸೂಕ್ತ ತಿಳುವಳಿಕೆ ಕೊರತೆಗಳು ದುರ್ಬಲ ಆಲೋಚನೆಗಳಿಗೆ ಕಾರಣವಾಗುತ್ತಿವೆ.
ಆಗ ಜನರಿಗೆ ನ್ಯಾಯಾಂಗದ ಮೇಲಿರುವ ನಂಬಿಕೆ ಕಡಿಮೆಯಾಗುತ್ತದೆ. ಜನರ ನಡುವೆ ತುಂಬಿರುವ ತಿಳುವಳಿಕೆಯ ಕೊರತೆಯು ನ್ಯಾಯಾಂಗದ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತಿವೆ (CJI NV Ramana statement).
ಅದೇ ರೀತಿ ರಾಜಕೀಯ ಪಕ್ಷಗಳು(Political Parties) ನ್ಯಾಯಾಂಗ ವ್ಯವಸ್ಥೆ ಕುರಿತಾಗಿ ನೀಡುತ್ತಿರುವ ಪರ-ವಿರೋಧದ ಹೇಳಿಕೆಗಳು ಜನರ ದಾರಿ ತಪ್ಪಿಸುತ್ತಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ತಮ್ಮ ಅನುಕೂಲತೆಗಳಿಗೆ ಪೂರಕವಾಗಿ ನ್ಯಾಯಾಂಗ ಇರಬೇಕೆಂದು ವಿರೋಧ ಪಕ್ಷಗಳು ನಿರೀಕ್ಷಿಸುತ್ತವೆ.
ಅದೇ ರೀತಿ ಆಳುವ ಸರ್ಕಾರಗಳು ತಮ್ಮ ಎಲ್ಲ ಕಾರ್ಯಚಟುವಟಿಕೆಗಳು ನ್ಯಾಯಾಂಗದ ಅನುಮೋದನೆಗೆ ಅರ್ಹ ಎಂದು ಭಾವಿಸುತ್ತವೆ. ರಾಜಕೀಯ ಪಕ್ಷಗಳ ಈ ಮನಸ್ಥಿತಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿವೆ. ಜೊತೆಗೆ ತಪ್ಪು ತಿಳಿವಳಿಕೆಯನ್ನೂ ಮೂಡಿಸುತ್ತಿವೆ.
