- ವನತಾರಾಗೆ ನಿರ್ದೋಷ ಪ್ರಮಾಣಪತ್ರ
- ಆನೆಗಳ ವಿವಾದಕ್ಕೆ ಅಂತ್ಯ ಹಾಡಿದ ಸುಪ್ರೀಂ ಕೋರ್ಟ್
- ಪ್ರಾಣಿ ಸಂರಕ್ಷಣೆಯಲ್ಲಿ ವನತಾರಾ ಮಾದರಿ ಎಂದ ಎಸ್ಐಟಿ (Clean chit to Vanatara from Supreme Court)
New delhi: ರಿಲಯನ್ಸ್ ಫೌಂಡೇಶನ್ ನಡೆಸುತ್ತಿರುವ ವಿಶ್ವದ ಅತಿದೊಡ್ಡ ಖಾಸಗಿ ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವೆಂದೇ(Animal Protection and Rehabilitation Center)
ಪ್ರಸಿದ್ಧಿ ಪಡೆದಿರುವ ವನತಾರಾಗೆ(Vanatara) ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಶೇಷ ತನಿಖಾ ತಂಡ (SIT) ಸಲ್ಲಿಸಿದ ವರದಿಯನ್ನು ಅಂಗೀಕರಿಸಿ,
ಯಾವುದೇ ಅಕ್ರಮ ನಡೆದಿದೆ ಎಂಬ ಆರೋಪಗಳನ್ನು ಕೋರ್ಟ್ ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್(Supreme Court) ಆದೇಶದಂತೆ ಮಾಜಿ ನ್ಯಾಯಮೂರ್ತಿ ಚೆಲಮೇಶ್ವರ್(Chelameswar) ಅವರ ನೇತೃತ್ವದಲ್ಲಿ
ರಚಿಸಲಾದ ಎಸ್‌ಐಟಿ, ವನತಾರಾ ಕೇಂದ್ರದಲ್ಲಿ ಕಾನೂನುಬಾಹಿರವಾಗಿ ಪ್ರಾಣಿಗಳನ್ನು ಸಾಗಿಸಲಾಗಿದೆಯೇ ಎಂಬ ಕುರಿತು ತನಿಖೆ ನಡೆಸಿತ್ತು. ಸೆಪ್ಟೆಂಬರ್ 12ರೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು.
ತನಿಖೆಯ ನಂತರ, ಪ್ರಾಣಿಗಳನ್ನು ತರಿಸುವ ಪ್ರಕ್ರಿಯೆ ವನ್ಯಜೀವಿ ಸಂರಕ್ಷಣಾ ಕಾಯ್ದೆ(Wildlife Protection Act) ಹಾಗೂ ಸಂಬಂಧಿತ ಕಾನೂನುಗಳ ಪ್ರಕಾರವೇ ನಡೆದಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಇನ್ನು ಈ ವರದಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಯಾವುದೇ ಅಕ್ರಮ ಸಾಬೀತಾಗದ ಕಾರಣ ವನತಾರಾಗೆ ಕ್ಲೀನ್ ಚಿಟ್ ನೀಡಿತು.
ಅಲ್ಲದೇ, ಆನೆಗಳನ್ನು ದೇವಾಲಯಗಳಿಗೆ ಹಿಂತಿರುಗಿಸಬೇಕೆಂದು ಕೇಳಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಹ ತಿರಸ್ಕರಿಸಿತು.
ಎಸ್‌ಐಟಿ ತಮ್ಮ ವರದಿಯನ್ನು ಸಮಯಕ್ಕೆ ಸಲ್ಲಿಸಿದ್ದಕ್ಕಾಗಿ ಪೀಠ ಸಂತೋಷ ವ್ಯಕ್ತಪಡಿಸಿದೆ. ತನಿಖಾ ಪ್ರಕ್ರಿಯೆಯಲ್ಲಿ ವನ್ಯಜೀವಿ ತಜ್ಞರು(Wildlife experts) ಮತ್ತು
ಪಶುವೈದ್ಯರಿಂದ(veterinarian) ಅಭಿಪ್ರಾಯ ಪಡೆಯಲಾಗಿದೆ. ಈ ಮೂಲಕ ತನಿಖೆಯ ನಿಖರತೆ ಮತ್ತು ಪಾರದರ್ಶಕತೆಗೆ ಒತ್ತು ನೀಡಲಾಗಿದೆ ಎಂದು ನ್ಯಾಯಾಲಯವು ಗುರುತಿಸಿದೆ.
ಇನ್ನು ಜಾಮ್‌ನಗರದಲ್ಲಿರುವ(Jamnagar) ವನತಾರಾ ಕೇವಲ ಸಂರಕ್ಷಣೆ ಕೇಂದ್ರವಲ್ಲ, ಅದು ವಿಶ್ವದಾದ್ಯಂತ ಗಮನ ಸೆಳೆಯುತ್ತಿರುವ ಒಂದು ಮಾದರಿ ಯೋಜನೆ.
ಇಲ್ಲಿ ರಕ್ಷಿಸಲ್ಪಟ್ಟ ಆನೆಗಳು ಹಾಗೂ ಇತರ ಕಾಡುಪ್ರಾಣಿಗಳಿಗೆ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಗಾಯಗೊಂಡ ಅಥವಾ ಹಿಂಸೆಗೆ ಒಳಗಾದ ಪ್ರಾಣಿಗಳಿಗೆ ಪುನರ್ವಸತಿ ನೀಡಲಾಗುತ್ತದೆ.
ವನತಾರಾ ಕೇಂದ್ರದಲ್ಲಿ ಪರಿಸರ ಸ್ನೇಹಿ ಮೂಲಸೌಕರ್ಯ, ಪ್ರಾಣಿ ಸ್ನೇಹಿ ವಾತಾವರಣ ಮತ್ತು ತಜ್ಞರ ನಿರಂತರ ಆರೈಕೆಯನ್ನು ಒದಗಿಸಲಾಗುತ್ತಿದೆ.
ಇದರ ಪರಿಣಾಮವಾಗಿ, ಈ ಕೇಂದ್ರವನ್ನು ಪ್ರಾಣಿ ಸಂರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಎಸ್‌ಐಟಿ ರಚನೆಯಾಗುವ ವೇಳೆಯಲ್ಲೇ ರಿಲಯನ್ಸ್ ಫೌಂಡೇಶನ್(Reliance Foundation) ತನಿಖೆಯನ್ನು ಸ್ವಾಗತಿಸಿತ್ತು. ಈಗ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ,
“ವನತಾರಾ ಪ್ರಾಣಿಗಳ ಕಲ್ಯಾಣಕ್ಕಾಗಿ ಮಾತ್ರ ಸ್ಥಾಪಿಸಲ್ಪಟ್ಟಿದೆ”. ಎಲ್ಲಾ ಕಾನೂನು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂಬುದು ಎಸ್‌ಐಟಿ ವರದಿ ದೃಢಪಡಿಸಿದೆ ಎಂದು ಪ್ರತಿಕ್ರಿಯೆ ನೀಡಿದೆ.
ಇದನ್ನು ಓದಿ : ಬೆಂಗಳೂರು 3 ದಿನ ನೀರು ಬಂದ್: ಇಂದಿನಿಂದ ಕಾವೇರಿ ನೀರು ಪೂರೈಕೆ ಸ್ಥಗಿತ
ರಿಲಯನ್ಸ್ ಪ್ರಕಾರ, ಈ ತೀರ್ಪು ಪ್ರಾಣಿ ಸಂರಕ್ಷಣೆಗೆ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ವನತಾರಾ ಕೇಂದ್ರವನ್ನು ಜಾಗತಿಕ ಮಟ್ಟದಲ್ಲಿಯೂ ಮಾದರಿಯನ್ನಾಗಿಸಲು ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದು ಹೇಳಿದೆ. (Clean chit to Vanatara from Supreme Court)