Karnataka : ಕರ್ನಾಟಕ ರಾಜ್ಯದ(State Government) ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ ದಾವಣಗೆರೆ(clean city davangere). ದಾವಣಗೆರೆಯು ಜವಳಿ ಉದ್ಯಮಕ್ಕೆ ಜನಪ್ರಿಯವಾಗಿದ್ದು, ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು.
ಈಗ ಈ ನಗರ ಶರವೇಗವಾಗಿ ಬೆಳೆಯುತ್ತಿದೆ, ದಾವಣಗೆರೆಯ ಮೊದಲಿನ ಹೆಸರು “ದೇವನಗರಿ” ಆಗಿದ್ದು, ಅದು ಕಾಲ ಕ್ರಮೇಣ ದಾವಣಗೆರೆ ಆಗಿದೆ.

ದಾವಣಗೆರೆಯು(clean city davangere ) ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿ ಅಥವಾ ಭತ್ತ, ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ.
ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು,
ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ , ಎಂಜಿನಿಯರಿಂಗ್, ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.
ದಾವಣಗೆರೆ ಎಂದ ತಕ್ಷಣ ನೆನಪಾಗುವುದೇ ಬೆಣ್ಣೆದೋಸೆ, ಏಕೆಂದರೆ ದಾವಣಗೆರೆ ಬೆಣ್ಣೆ ದೋಸೆಗೆ ಫೇಮಸ್.
ಇದನ್ನೂ ಓದಿ : https://vijayatimes.com/controversy-with-kumar-swamy-and-jds/
ಈ ಬೆಣ್ಣೆ ದೋಸೆಯನ್ನು ಹೊರತುಪಡಿಸಿ ದಾವಣಗೆರೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ(Tourist place). ದಾವಣಗೆರೆಯು ಕರ್ನಾಟಕದ ಒಂದು ಪ್ರಮುಖ ಜಿಲ್ಲೆಯಾಗಿದ್ದು, ಪ್ರಮುಖ ಪ್ರವಾಸಿ ಕೇಂದ್ರಗಳಿವೆ.
ದಾವಣಗೆರೆಯ ನಾಗರಿಕರಿಗೆ ಅಲ್ಲಿನ ವಿಶೇಷತೆ ಏನು ಎನ್ನುವುದು ಚೆನ್ನಾಗಿ ತಿಳಿದಿದೆ.
ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದಾವಣಗೆರೆಯು ಒಂದು ದೊಡ್ಡ ವಾಣಿಜ್ಯ ಕೇಂದ್ರವಾಗಿ(Commercial Centre) ಬೆಳೆಯುತ್ತಿದೆ.
ತನ್ನ ಭೌಗೋಳಿಕ ಹಿನ್ನೆಲೆಯಿಂದಾಗಿಯೂ ದಾವಣಗೆರೆ ಪ್ರವಾಸಿಗರ ನಡುವೆ ಬಹಳ ಪ್ರಸಿದ್ಧವಾಗಿದೆ.ಇನ್ನು ಇತ್ತೀಚಿಗೆ,

ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆ ಮತ್ತು ದಾಖಲೆಗಳ ನಿರ್ವಹಣೆಯ ಪರಿಣಾಮಕಾರಿ ಅನುಷ್ಠಾನಕ್ಕೆ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್‌ಗೆ(Smart City Limited)
“ನಗರ ಸಾರಿಗೆಯಲ್ಲಿ ಶ್ರೇಷ್ಠತೆಯ ಪ್ರಶಸ್ತಿ” ಲಭಿಸಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ವಿಭಾಗದಲ್ಲಿ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ನಗರ ದಾವಣಗೆರೆಯಾಗಿದೆ.
ಯುಎಂಐ(UMI) ಸಮ್ಮೇಳನದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್(Arif Mohammad Khan) ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ(State Minister) ಕೌಶಲ್ ಕಿಶೋರ್ ಅವರು ಪ್ರಶಸ್ತಿಯನ್ನು ನೀಡಲಿದ್ದಾರೆ.
https://fb.watch/gBSs0Pahrm/ ವಿಜಯನಗರ ಬಿ ಡಿ ಎ ಅಂಡರ್ ಪಾಸ್ ಆಗಿದೆ ಸ್ಲಂ.
ಎಂದು ವಿಶೇಷ ಕರ್ತವ್ಯ ಅಧಿಕಾರಿ (UT) ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ ಜೈದೀಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನವೆಂಬರ್ 6 ರಂದು ಕೊಚ್ಚಿಯ ಬೋಲ್ಗಟ್ಟಿ ದ್ವೀಪದಲ್ಲಿ ನಡೆಯಲಿದೆ.
ನಗರದಾದ್ಯಂತ 248 ಎಚ್‌ಡಿ ಸಿಸಿಟಿವಿ ಅಳವಡಿಕೆ, 23 ಜಂಕ್ಷನ್‌ಗಳಲ್ಲಿ ಸಿಗ್ನಲ್ ಲೈಟಿಂಗ್ ಮತ್ತು ಇಂಟೆಲಿಜೆಂಟ್ ಟ್ರಾನ್ಸಿಟ್ ಮ್ಯಾನೇಜ್‌ಮೆಂಟ್ ಸಿಸ್ಟಂ ಅಳವಡಿಕೆ,
ತಾಂತ್ರಿಕ ಉನ್ನತೀಕರಣ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಡಿಎಸ್‌ಸಿಎಲ್‌ನ ಎಂಡಿ(dscl MD) ರವೀಂದ್ರ ಬಿ ಮಲ್ಲಾಪುರ ಹೇಳಿದರು. ಅದೇ ರೀತಿ, ಇಡೀ ದೇಶದಲ್ಲಿಯೇ ಸುರಕ್ಷಿತ ನಗರ ಎನ್ನುವ ಹೆಗ್ಗಳಿಕೆಗೂ ದಾವಣಗೆರೆ ಪಾತ್ರವಾಗಿದೆ.
- ಪವಿತ್ರ