2024-2025ನೇ ವಾರ್ಷಿಕ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ
ಇಂದೋರ್ ಸಿಟಿ ದೇಶದ No.1 ಸ್ವಚ್ಛ ನಗರ (Clean city Mysore)
ಅರೆಮನೆ ನಗರಿ ಮೈಸೂರು 3ನೇ ಸ್ಥಾನ
Delhi: ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಸರ್ಕಾರ ಆಯೊಜಿಸಿದ್ದ 2024-2025ನೇ ವಾರ್ಷಿಕ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ(Annual Cleanliness Survey) ಇಂದೋರ್ ಸಿಟಿ ದೇಶದ No.1 ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸತತ 8ನೇ ವರ್ಷವೂ ನಂಬರ್ ಒನ್ ಕ್ಲೀನ್ ಸಿಟಿ ಎಂದು ಗುರುತಿಸಿಕೊಂಡಿದ್ದು, ನಮ್ಮ ಅರೆಮನೆ ನಗರಿ ಮೈಸೂರು 3ನೇ ಸ್ಥಾನ ಪಡೆದುಕೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಸಚಿವಾಲಯದಿಂದ ನೀಡುವ ಭರವಸೆಯ ಸ್ವಚ್ಛ ನಗರಗಳ ಪ್ರಶಸ್ತಿ ಪಟ್ಟಿಯಲ್ಲಿ ಕರ್ನಾಟಕದ ದಾವಣಗೆರೆ 15ನೇ ಸ್ಥಾನಪಡೆದಿದೆ. ಒಂದು ವರ್ಷ ಮಾತ್ರ ಮೈಸೂರು ನಗರಕ್ಕೆ ಸ್ವಚ್ಛತೆಯಲ್ಲಿ
ದೇಶದಲ್ಲೇ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದು ಬಿಟ್ಟರೆ ಮೈಸೂರು ನಗರಕ್ಕೆ ನಂಬರ್ ಒನ್ ಕ್ಲೀನ್ ಸಿಟಿ ಪಟ್ಟ ಪಡೆಯಲು ಸಾಧ್ಯವಾಗಿಲ್ಲ, ಬೃಹತ್ ಬೆಂಗಳೂರು ಸೇರಿದಂತೆ ಬೇರೆ ಸ್ಮಾರ್ಟ್ ಸಿಟಿಗಳಿಗೂ ಕೂಡ ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿವೆ.
ಹೊಸ ರ್‍ಯಾಂಕಿಂಗ್ ವ್ಯವಸ್ತೆಯಲ್ಲಿ ಸೂಪರ್ ಸ್ವಚ್ ಲೀಗ್ ಎಂಬ ನೂತನ ಕೆಟಗರಿ ಸೃಷ್ಟಿಸಿದ್ದು ಈ ಪಟ್ಟಿಯಲ್ಲಿನ 10 ಲಕ್ಷಕ್ಕಿಂತ ಅಧಿಕ ಜನಸಂಖೆಯ ನಗರಗಳಲ್ಲಿ
ಇಂದೋರ್ ಮೊದಲ ಸ್ಥಾನದಲ್ಲಿದ್ದು, ಗುಜರಾತ್‌ನ ಸೂರತ್, ಮಹಾರಾಷ್ಟ್ರದ ನವಿ ಮುಂಬೈ ಹಾಗು ಆಂಧ್ರಪ್ರದೇಶದ ವಿಜಯವಾಡಕ್ಕೆ ನಂತರದ ಸ್ಥಾನಗಳು ದೊರೆತಿವೆ.
ವಿವಿದ ರ್‍ಯಾಂಕಿಂಗ್ ಗಳಲ್ಲಿ ಅಂದರೇ 3 ಲಕ್ಷದಿಂದ 10 ಲಕ್ಷದವರೆಗಿನ ಜನಸಂಖ್ಯೆಯ ಸೂಪರ್ ಸ್ವಚ್ಛ್ ಲೀಗ್ ನಗರಗಳ ಪಟ್ಟಿಯಲ್ಲಿ
ಉತ್ತರಪ್ರದೇಶದ ನೋಯ್ಡಾಗೆ ಮೊದಲ ಸ್ಥಾನ ಸಿಕ್ಕಿದ್ದರೆ, ಚಂಡೀಗಢ, ಮೈಸೂರು, ಉಜ್ಜಯಿನಿ, ಗಾಂಧಿನಗರ ನಂತರದ ಸ್ಥಾನಪಡೆದಿವೆ.
ದೊಡ್ಡ ನಗರಗಳ ವಿಭಾಗದಲ್ಲಿ ಅಂದರೇ 10 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೊಡ್ಡ ನಗರಗಳಿಗೆ (Clean city Mysore) ನೀಡುವ
ಇದನ್ನು ಓದಿ : ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ : 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ರಾಷ್ಟ್ರಪತಿಗಳ ಸ್ವಚ್ಛ ಶೆಹರ್ ಪ್ರಶಸ್ತಿ ಪಟ್ಟಿಯಲ್ಲಿ ಅಹಮದಾಬಾದ್‌ಗೆ ಮೊದಲ ಸ್ಥಾನ ಸಿಕ್ಕಿದ್ದರೆ, ಭೋಪಾಲ್ ಮತ್ತು ಲಖನೌ ನಂತರದ ಸ್ಥಾನದಲ್ಲಿವೆ. (Clean city Mysore)