777 ‘ಚಾರ್ಲಿ’ಯನ್ನು ನೋಡಿ ಕಣ್ಣೀರಿಟ್ಟ ಸಿಎಂ ಬಸವರಾಜ ಬೊಮ್ಮಾಯಿ!

ಕನ್ನಡ ಚಿತ್ರರಂಗದ(Kannada Industry) ಸಿಂಪಲ್ ಸ್ಟಾರ್(Simple Star) ರಕ್ಷಿತ್ ಶೆಟ್ಟಿ(Rakshit Shetty) ಅವರ 777 ಚಾರ್ಲಿ(777 Charlie) ಇದೇ ಜೂನ್ 10 ರಂದು 5 ಭಾಷೆಗಳಲ್ಲಿ ಏಕಕಾಲಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಗೊಂಡಿತು ಮತ್ತು ಸಿನಿ ವೀಕ್ಷಕರು ಈ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳನ್ನು ವ್ಯಾಪಾಕವಾಗಿ ನೀಡುತ್ತಿದ್ದಾರೆ.

ಉತ್ತಮ ಪ್ರತಿಕ್ರಿಯೆಗಳ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿಗಳಾದ(ChiefMinsiter) ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಚಾರ್ಲಿ(777 Charlie) ಸಿನಿಮಾವನ್ನು ವೀಕ್ಷಿಸಿದ್ದಾರೆ. 2022 ರ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಚಾರ್ಲಿ ಕೂಡ ಒಂದಾಗಿದೆ. ಚಲನಚಿತ್ರವು ನಾಯಿ ಮತ್ತು ಅದರ ಮಾಲೀಕನ ನಡುವಿನ ಬಾಂಧವ್ಯದ ಬಗ್ಗೆ ತಿಳಿ ಹೇಳುತ್ತದೆ ಮತ್ತು ಎಲ್ಲಾ ಪ್ರಾಣಿ ಪ್ರೇಮಿಗಳಿಗೆ ಹೊಂದಿಕೊಂಡಿರುವಂತ ಒಂದೊಳ್ಳೆ ಸಿನಿಮಾವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಈ ಚಿತ್ರವನ್ನು ವೀಕ್ಷಿಸಿದರು ಮತ್ತು ಅದನ್ನು ನೋಡಿದ ಬಳಿಕ ತಮ್ಮ ಮನೆಯಲ್ಲಿ ಸಾಕಿದ ನಾಯಿಯನ್ನು ನೆನಪಿಸಿಕೊಂಡು ದುಃಖ ತಡೆಯಲಾಗದೆ ಕಣ್ಣೀರಿಟ್ಟಿದ್ದಾರೆ.

ಸಿನಿಮಾ ನೋಡಿ ಭಾವುಕರಾದ ಸಿಎಂ ಅವರ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸಿಎಂ ಬೊಮ್ಮಾಯಿ ಅವರು ಚಿತ್ರವನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದು, ನಿರ್ಮಾಪಕ ರಕ್ಷಿತ್ ಶೆಟ್ಟಿ(Rakshit Shetty) ಹಾಗೂ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಎಲ್ಲರೂ ಚಾರ್ಲಿ ಸಿನಿಮಾವನ್ನು ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ನಾಯಿಗಳ ಬಗ್ಗೆ ಚಲನಚಿತ್ರಗಳಿವೆ ಆದರೆ ಈ ಚಲನಚಿತ್ರವು ಭಾವನೆಗಳು ಮತ್ತು ಪ್ರಾಣಿಗಳೊಂದಿಗಿರುವ ಉತ್ತಮ ಒಡನಾಟವನ್ನು ಹೊಂದಿದೆ. ಈ ಶ್ವಾನವು ತನ್ನ ಭಾವನೆಗಳನ್ನು ಕಣ್ಣುಗಳ ಮೂಲಕ ವ್ಯಕ್ತಪಡಿಸುತ್ತದೆ.

ಸಿನಿಮಾ ಚೆನ್ನಾಗಿದ್ದು ಎಲ್ಲರೂ ನೋಡಲೇಬೇಕು. ಶ್ವಾನದ ಪ್ರೀತಿ ನಿರ್ಮಲವಾದ ಪ್ರೇಮವಾಗಿದೆ ಎಂದು ಸ್ಥಳೀಯ ಮಾಧ್ಯಮಕ್ಕೆ ಹೇಳಿದ್ದಾರೆ. ಸ್ವತಃ ನಾನು ಶ್ವಾನ ಪ್ರೇಮಿ, ಕಳೆದ ವರ್ಷ ನನ್ನ ಸಾಕುನಾಯಿ ತೀರಿಕೊಂಡಿತು. ಈ ಸಿನಿಮಾ ಅದನ್ನು ನೆನಪಿಸಿತು, ಹೀಗಾಗಿ ನನ್ನ ಶ್ವಾನವನ್ನು ನೆನೆದು ದುಃಖಿಸಿದೆ ಎಂದು ಹೇಳಿದರು.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.