• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಲಂಚ ; ಸಿಎಂ ಸಚಿವಾಲಯದ ವಾಹನದಲ್ಲಿ ಪತ್ರಕರ್ತರ ನಿವಾಸಕ್ಕೂ ನಗದು ಉಡುಗೊರೆ ಸಾಗಿಸಲಾಗಿತ್ತೇ? : ‘ದಿ ಫೈಲ್’

Mohan Shetty by Mohan Shetty
in ಪ್ರಮುಖ ಸುದ್ದಿ, ರಾಜ್ಯ
ಲಂಚ ; ಸಿಎಂ ಸಚಿವಾಲಯದ ವಾಹನದಲ್ಲಿ ಪತ್ರಕರ್ತರ ನಿವಾಸಕ್ಕೂ ನಗದು ಉಡುಗೊರೆ ಸಾಗಿಸಲಾಗಿತ್ತೇ? : ‘ದಿ ಫೈಲ್’
0
SHARES
0
VIEWS
Share on FacebookShare on Twitter

Bengaluru : ‘ದಿ ಫೈಲ್’ ನೀಡಿರುವ ವರದಿ ಅನುಸಾರ, ದೀಪಾವಳಿ ಹಬ್ಬದ ಸೋಗಿನಲ್ಲಿ ಪತ್ರಿಕಾ ಕಚೇರಿಗಳಿಗಷ್ಟೇ ಅಲ್ಲದೆ ಲಕ್ಷಾಂತರ ರೂ. ನಗದನ್ನು ಇರಿಸಿದ್ದ ಕವರ್ ನೊಂದಿಗೆ ಉಡುಗೊರೆಯನ್ನು ಕೆಲವು ಪತ್ರಕರ್ತರ(CM Bribe To Journalists) ,ಮನೆಗಳಿಗೂ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಹಂಚಿಕೆಯಾದ ಇನ್ನೋವಾ ವಾಹನದಲ್ಲಿ ನೇರವಾಗಿ ತಲುಪಿಸಿದ್ದರು ಎಂಬ ಮತ್ತೊಂದು ಮಾಹಿತಿ ಹೊರಬಿದ್ದಿದೆ!

Karnataka

ಸರ್ಕಾರಿ ವಾಹನಗಳ ದುರ್ಬಳಕೆ ವಿರುದ್ಧ ಅಭಿಯಾನ ನಡೆಸುತ್ತಿರುವ ಕರ್ನಾಟಕದ ರಾಷ್ಟ್ರೀಯ ಸಮಿತಿ ಪಕ್ಷದ ಕಾರ್ಯಕರ್ತರೊಬ್ಬರು ಬೆಂಗಳೂರಿನ(Bengaluru) ಕುಮಾರಸ್ವಾಮಿ ಲೇಔಟ್ ನ(Kumarswamy Layout) ,

ಪೊಲೀಸ್ ಠಾಣೆ ಬಳಿ ಇರುವ ಪೈಪ್ ಲೈನ್ ರಸ್ತೆಯಲ್ಲಿ ನಿಲ್ಲಿಸಿದ್ದ ಸರ್ಕಾರಿ ವಾಹನ ಚಾಲಕನನ್ನು ಪ್ರಶ್ನಿಸಿದ್ದರು.ಆ ಸಂದರ್ಭದಲ್ಲಿ ಇದು ಸಿಎಂ ಕಚೇರಿ ಕಾರು, ದೀಪಾವಳಿ ಗಿಫ್ಟ್ ವಿತರಿಸಲು ಹೋಗುತ್ತಿದ್ದೇನೆಂದು ವಾಹನ ಚಾಲಕ ನೀಡಿದ ಉತ್ತರವು ಈ ಪ್ರಕರಣಕ್ಕೆ ಮತ್ತೊಂದು ಆಯಾಮವನ್ನು ತೆರೆದಿಟ್ಟಂತಾಗಿದೆ.

ಇದನ್ನೂ ಓದಿ : https://vijayatimes.com/police-to-conduct-an-investigation/

ಪತ್ರಕರ್ತರಿಗೆ ಲಂಚ ನೀಡಿರುವ ಪ್ರಕರಣ ರಾಜ್ಯ ಬಿಜೆಪಿ ಸರ್ಕಾರವು(BJP Govt) ಇಕ್ಕಟ್ಟಿಗೆ ಸಿಲುಕಿರುವುದು ಮತ್ತು ಈ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪ್ರತ್ಯಾರೋಪಗಳು ಕೇಳಿ ಬಂದಿರುವ ನಡುವೆಯೇ,

ಪತ್ರಕರ್ತರಿಗೆ ಉಡುಗೊರೆ ನೀಡಲು ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಹಂಚಿಕೆಯಾಗಿರುವ ಸರ್ಕಾರಿ ಕಾರನ್ನು ಅಧಿಕೃತವಾಗಿ ಬಳಕೆ ಮಾಡಲಾಗಿತ್ತು ಎಂಬ ಮಾಹಿತಿಯೂ ಮುನ್ನೆಲೆಗೆ ಬಂದಿದೆ.

CM

ಈ ಸಂಬಂಧ ವೀಡಿಯೋ ತುಣುಕೊಂದು ದಿ ಫೈಲ್ಗೆ ಲಭ್ಯವಾಗಿದೆ. ಮುಖ್ಯಮಂತ್ರಿಗಳ ಸಚಿವಾಲಯವು ಪತ್ರಿಕಾ ಕಚೇರಿಗಳಿಗೆ ನೇರವಾಗಿ ದೀಪಾವಳಿ ಉಡುಗೊರೆ(Deepavali Gift),

ಸೋಗಿನಲ್ಲಿ ನಗದು ಹಣ ತಲುಪಿಸಿತ್ತು ಎಂದು ಈಗಾಗಲೇ ಹಲವು ಪತ್ರಿಕೆಗಳ ಸಂಪಾದಕರು ವಾಟ್ಸಪ್ ಗ್ರೂಪ್ ಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಹೊತ್ತಿನಲ್ಲೇ,

ಕೆಲವು ಪತ್ರಕರ್ತರ ಮನೆಗಳಿಗೆ ನೇರವಾಗಿ ಉಡುಗೊರೆ ತಲುಪಿಸಲಾಗಿತ್ತೇ? ಎಂಬುದಕ್ಕೆ ದೀಪಾವಳಿ ಗಿಫ್ಟ್ ವಿತರಣೆ ಮಾಡಲು ಹೋಗುತ್ತಿದ್ದೇನೆ ಎಂದು ಚಾಲಕ ನೀಡಿರುವ ಉತ್ತರವು ಸಾಕ್ಷ್ಯೀಕರಿಸಿದಂತಾಗಿದೆ. ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಹಂಚಿಕೆಯಾಗಿರುವ ಸಂಖ್ಯೆ ಇನ್ನೋವಾ ವಾಹನದಲ್ಲಿ,

Politics

ಉಡುಗೊರೆಯನ್ನು ಸರ್ಕಾರಿ ರಜೆ ದಿನವಾದ ಅಕ್ಟೋಬರ್ 24 ರಂದು ಸಂಜೆ 5 ಗಂಟೆ ಸುಮಾರಿಗೆ ತಲುಪಿಸುವ ಸಂದರ್ಭದಲ್ಲಿ,ಕರ್ನಾಟಕ ರಾಷ್ಟ್ರ ಸಮಿತಿಯ ಕಾರ್ಯಕರ್ತರು ಬೆಂಗಳೂರು ನಗರದ ಕುಮಾರಸ್ವಾಮಿ ಲೇಔಟ್ ನಲ್ಲಿ ವಾಹನ ಚಾಲಕನನ್ನು ಪ್ರಶ್ನಿಸಿದ್ದರು.

ಆ ವೇಳೆಯಲ್ಲಿ ವಾಹನದ ಚಾಲಕ ತನ್ನ ಮುಖ್ಯಮಂತ್ರಿಗಳ ಕಚೇರಿಯವನು, ದೀಪಾವಳಿ ಉಡುಗೊರೆ ತಲುಪಿಸಲು ಹೊರಟಿದ್ದೇನೆಂದು ಉತ್ತರ ನೀಡಿದ್ದ ಎಂಬುದು ವೀಡಿಯೋ ತುಣುಕಿನಿಂದ ಗೊತ್ತಾಗಿದೆ.

ಕುಮಾರಸ್ವಾಮಿ ಲೇಔಟ್ ಸಂಚರಿಸಿದ್ದ ಇನ್ನೋವಾ ವಾಹನವನ್ನು ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಹೊಳಿಮಠ ಎಂಬುವರಿಗೆ ಹಂಚಿಕೆಯಾಗಿತ್ತು.

ನಾವು ಸುಮಾರು ಐದಾರು ವಾರಗಳಿಂದ ಸರ್ಕಾರಿ ವಾಹನಗಳ ದುರ್ಬಳಕೆ ಕುರಿತು ಅಭಿಯಾನವನ್ನು ಮಾಡುತ್ತಿದ್ದೇವೆ.

ಇದನ್ನೂ ಓದಿ : https://vijayatimes.com/chethan-ahimsa-over-head-bush/

ಇದರ ಮುಂದುವರಿದ ಭಾಗವಾಗಿ ಅಕ್ಟೋಬರ್ 24 ರಂದು ಸಾಯಂಕಾಲ ನಮ್ಮ ಪಕ್ಷದ ಒಬ್ಬ ಕಾರ್ಯಕರ್ತರೊಬ್ಬರು ನಮ್ಮ ಮನೆಗೆ ಬರುತ್ತಿರಬೇಕಾದರೆ,

ಕುಮಾರಸ್ವಾಮಿ ಬಡಾವಣೆ ಪೈಪ್ ಲೈನ್ ರಸ್ತೆಯಲ್ಲಿ ಈ ಸರ್ಕಾರಿ ವಾಹನವೂ ಕಂಡುಬಂದಿತ್ತು. ಅದರಲ್ಲಿ ಚಾಲಕರೊಬ್ಬರೇ ಇದ್ದ ಕಾರಣ ಅವರನ್ನು ಪ್ರಶ್ನಿಸಿದಾಗ,

ಅವರು ಈ ವಾಹನವು ದೀಪಾವಳಿಯ ಸಿಹಿ ತಿಂಡಿಯನ್ನು ಹಂಚಲು ಬಂದಿದ್ದು, ಇದು ಮುಖ್ಯಮಂತ್ರಿಯ ಕಾರ್ಯಾಲಯದಿಂದ ಕಳಿಸಲಾಗಿದೆ,

ಎಂದು ತಿಳಿಸಿದ್ದರು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ. ಆರ್ ಮರಾಠೆ ಅವರು ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿದ್ದಾರೆ.

allegation

‘ಮುಖ್ಯಮಂತ್ರಿ ಕಛೇರಿಯೇ ದೀಪಾವಳಿ ಉಡುಗೊರೆಯಾಗಿ ಪತ್ರಕರ್ತರಿಗೆ ಲಕ್ಷಾಂತರ ರೂ.ಗಳನ್ನು ತಲುಪಿಸಿರುವುದು ಚರ್ಚೆಯಾಗುತ್ತಿದೆ.

ಇಂತಹ ಕುಕೃತ್ಯಕ್ಕೆ ಸರ್ಕಾರಿ ವಾಹನವನ್ನು ಬಳಸಿಕೊಂಡಿರುವುದು ಆಡಳಿತ ವ್ಯವಸ್ಥೆಯ ದುರ್ನಡತೆಗೆ ಹಿಡಿದ ಕೈಗನ್ನಡಿ ಎನ್ನುತ್ತಾರೆ ಲಂಚಮುಕ್ತ ನಿರ್ಮಾಣ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್ ಮಲ್ಲಿಕಾರ್ಜುನ್.

ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಕಛೇರಿಯಿಂದ ಪತ್ರಕರ್ತರಿಗೆ ಲಂಚ ನೀಡಲಾಗಿದೆ ಎಂದು ಕೇಳಿಬಂದಿರುವ,

ಗಂಭೀರ ಆರೋಪದ ಕುರಿತು ತೀವ್ರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಭ್ರಷ್ಟಾಚಾರದ(Corruption) ವಿರುದ್ಧ ಕಾನೂನಾತ್ಮಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಜನಾಧಿಕಾರ ಸಂಘರ್ಷ ಪರಿಷತ್,

https://www.facebook.com/Vijayatimeskannada/videos/5734324066588978/?mibextid=wDgIVwZBy2PExSHI

ಸಿಎಂ ಬೊಮ್ಮಾಯಿ ಮತ್ತು ಸಿಎಂ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ಎಂಬುವರ ವಿರುದ್ಧ ಲೋಕಾಯುಕ್ತ ಮತ್ತು ಲೋಕಾಯುಕ್ತ ಪೊಲೀಸ್ ವಿಭಾಗದ ಎಡಿಜಿಪಿ ಅವರಿಗೆ ಈಗಾಗಲೇ ದೂರು ನೀಡಿದೆ.

ರಾಜ್ಯದ ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರಿಗೆ ಸಿಎಂ ಕಛೇರಿಯು ಸಿಎಂ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ಅವರ ಮೂಲಕ ನಗದು ಹಣವನ್ನು ನೀಡಲಾಗಿದೆ.

ವಿಶ್ವಸನೀಯ ಮೂಲಗಳ ಪ್ರಕಾರ ಡೆಕ್ಕನ್ ಹೆರಾಲ್ಡ್(Deccan Herald) ಮುಖ್ಯ ವರದಿಗಾರ ಭರತ್ ಜೋಷಿ ಅವರಿಗೆ ತಲುಪಿಸಿದ್ದ ಸ್ವೀಟ್ ಬಾಕ್ಸ್ ನಲ್ಲಿಯೇ 1 ಲಕ್ಷ ರೂ. ನಗದನ್ನು ತಲುಪಿಸಲಾಗಿತ್ತು.

ಇದು ಅವರ ಗಮನಕ್ಕೆ ಬಂದ ನಂತರ ಡೆಕ್ಕನ್ ಹೆರಾಲ್ಡ್’ನ ಸಂಪಾದಕರು ಮತ್ತು ಸಿಇಒ ಅವರ ಗಮನಕ್ಕೆ ತಂದು ಅವರ ಸೂಚನೆಯಂತೆ ಹಣವನ್ನು ಹಿಂದಿರುಗಿಸಿದ್ದಾರೆ ಎಂದು ಜನಾಧಿಕಾರ ಸಂಘರ್ಷ ಪರಿಷತ್ ದೂರಿನಲ್ಲಿ ಪ್ರಸ್ತಾಪಿಸಿದೆ.

CM Bribe To Journalists

ಅಲ್ಲದೇ ‘ಪ್ರಜಾವಣಿಯ(Prajavani) ಮುಖ್ಯ ವರದಿಗಾರ ವೈ.ಜಿ ಜಗದೀಶ್ ಎಂಬುವರಿಗೂ ಹಣ ತಲುಪಿಸಲಾಗಿತ್ತು.

ಈ ಬಗ್ಗೆ ಖುದ್ದು ವೈ.ಜಿ ಜಗದೀಶ್ ಅವರೇ ಹಣ ಪಡೆದಿದ್ದನ್ನು ಖಚಿಪ ಪಡಿಸಿ ವ್ಯಾಟ್ಸಾಪ್ ಗ್ರೂಪ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇವರೂ ಸಂಸ್ಥೆಯ ಸಿಇಒ ಮತ್ತು ಸಂಪಾದಕರ ಗಮನಕ್ಕೆ ತಂದು ಹಣವನ್ನು ಹಿಂದಿರುಗಿಸಿದ್ದರು.

https://youtu.be/6yRaS_bkFKE ದಲಿತರಿಗೆಂದು ಮೀಸಲಿಟ್ಟ ಅಂಗಡಿಗಳು ದುರುಪಯೋಗ!

ಅಲ್ಲದೇ ವೈ.ಜಿ ಜಗದೀಶ್ ಅವರೇ ಹೇಳಿಕೊಂಡಂತೆ ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಸಂಸ್ಥೆಯಿಂದ ಖಂಡನಾ ಪತ್ರವನ್ನು ಬರೆಯಲಾಗಿದೆ ಮತ್ತು ಇದಕ್ಕೆ ಸಿಎಂ ಅವರು ಕ್ಷಮೆಯನ್ನೂ ಯಾಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ಇಲ್ಲಿ ನೆನಪಿಸಿಕೊಳ್ಳಬಹುದು.

  • The File
Tags: bjpKarnatakapoliticalpolitics

Related News

ಜಾಮೀನು ಅರ್ಜಿ ವಜಾ ; ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕ್ಷಣಗಣನೆ
ರಾಜಕೀಯ

ಜಾಮೀನು ಅರ್ಜಿ ವಜಾ ; ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕ್ಷಣಗಣನೆ

March 27, 2023
ಕರ್ನಾಟಕದಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ್ದು ಎಷ್ಟು ಸರಿ? : ಅಸಾದುದ್ದೀನ್ ಓವೈಸಿ
ರಾಜಕೀಯ

ಕರ್ನಾಟಕದಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ್ದು ಎಷ್ಟು ಸರಿ? : ಅಸಾದುದ್ದೀನ್ ಓವೈಸಿ

March 27, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 27, 2023
ಬಿಎಸ್‌ವೈ ಮನೆ ಮೇಲೆ ಚಪ್ಪಲಿ ! ಒಳಮೀಸಲಾತಿ ವಿರೋಧಿಸಿ ಬಂಜಾರರ ಆಕ್ರೋಶ
ರಾಜಕೀಯ

ಬಿಎಸ್‌ವೈ ಮನೆ ಮೇಲೆ ಚಪ್ಪಲಿ ! ಒಳಮೀಸಲಾತಿ ವಿರೋಧಿಸಿ ಬಂಜಾರರ ಆಕ್ರೋಶ

March 27, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.