ಬೆಂಗಳೂರು, ಜು. 21: ಭಾರೀ ಚರ್ಚೆಗೆ ಕಾರಣವಾಗಿರುವ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಮಠಾಧೀಶರು ದನಿ ಎತ್ತಿದ್ದು, ರಾಷ್ಟ್ರೀಯ ನಾಯಕರು ಸಹ ರಾಜ್ಯದ ರಾಜಕೀಯ ಬೆಳವಣಿಗೆ ಮೇಲೆ ಕಣ್ಣಿಟ್ಟಿದ್ದಾರೆ. ಈ ನಡುವೆ ಬಿಜೆಪಿ ಹಿರಿಯ ನಾಯಕ ಸುಬ್ರಮಣ್ಯನ್ ಸ್ವಾಮಿ ಕೂಡ ಸಿಎಂ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಸಭಾ ಸದಸ್ಯ, ಈ ಸಮಯದಲ್ಲಿ ಯಡಿಯೂರಪ್ಪ ರಾಜೀನಾಮೆ ಸರಿಯಲ್ಲ. ಬಿಎಸ್ ವೈ ರಾಜಿನಾಮೆ ಕೇಳುವುದು ಒಳ್ಳೆಯ ತೀರ್ಮಾನವಲ್ಲ ಎಂದು ಸಿಎಂ ಬಿಎಸ್ ವೈ ಬೆನ್ನಿಗೆ ನಿಂತಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ದೊಡ್ಡಮಟ್ಟದಲ್ಲಿ ಮಾಡುತ್ತಿದ್ದು, ನಾಯಕತ್ವ ಬದಲಾವಣೆ ಮಾಡದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರ ರಾಜ್ಯದ ಹಲವು ಮಠಾಧೀಶರು ನಿಂತಿದ್ದಾರೆ.
It was Yeddiruppa who first brought BJP to power in Karnataka. Some conspired to remove him since he would not be a chamcha. Without Him BJP could not return power in the State. Only upon his return to BJP could the party win again. Why repeat the same mistake?
— Subramanian Swamy (@Swamy39) July 21, 2021