• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ರಾಜ್ಯ ಉಗ್ರಾಣ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡ ಉದ್ಘಾಟಿಸಿದ ಸಿಎಂ

Sharadhi by Sharadhi
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ
ರಾಜ್ಯ ಉಗ್ರಾಣ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡ ಉದ್ಘಾಟಿಸಿದ ಸಿಎಂ
0
SHARES
0
VIEWS
Share on FacebookShare on Twitter

ಬೆಂಗಳೂರು,ಫೆ 18: ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.

ಈ ಹಿಂದೆ ಇದ್ದ 50 ವರ್ಷಗಳ ಹಳೆಯ ಕಟ್ಟಡವನ್ನು ಕೆಡವಿ 3.76 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಕಚೇರಿಯ ಆಡಳಿತದ ಕಾರ್ಯ ಚಟುವಟಿಕೆ ಇಲ್ಲಿ ನಡೆಯುತ್ತದೆ.

ಈ ವೇಳೆ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ರಾಜ್ಯ ಉಗ್ರಾಣ ಸಹಕಾರ ಇಲಾಖೆಯ ಅಧೀನ ಸಂಸ್ಥೆಯಾಗಿದೆ. ಇದರಲ್ಲಿ ರಾಜ್ಯದಷ್ಟೇ ಪಾಲನ್ನು ಕೇಂದ್ರ ಸಹ ಹೊಂದಿದೆ. ಇದನ್ನು ರೈತರ ಉಪಯೋಗಕ್ಕಾಗಿ ನಾವು ಸ್ಥಾಪನೆ ಮಾಡಿದ್ದು, ಇದರಿಂದ ಕೋಟ್ಯಂತರ ರೈತರಿಗೆ ಇದುವರೆಗೆ ಉಪಯೋಗವಾಗಿದೆ. ಕಡಿಮೆ ಬೆಲೆ ಇದ್ದಾಗ ರೈತರು ತಮ್ಮ ದಾಸ್ತಾನನ್ನು ನಮ್ಮ ರಾಜ್ಯದಲ್ಲಿರುವ ಸರ್ಕಾರದ ಅಧೀನದ ಗೋದಾಮುಗಳಲ್ಲಿ ಸಂಗ್ರಹ ಮಾಡಬಹುದಾಗಿದೆ ಎಂದು ತಿಳಿಸಿದರು.

ಹೀಗೆ ದಾಸ್ತಾನು ಮಾಡಲಾದ ಸರಕಿಗೆ ಉಗ್ರಾಣಗಳಿಂದ ರಶೀದಿಗಳು ಲಭಿಸಲಿದ್ದು, ಇದರಿಂದ ಬ್ಯಾಂಕ್ ಗಳು ಸೇರಿದಂತೆ ಇತರ ಹಣಕಾಸಿನ ಸಂಸ್ಥೆಗಳಿಂದ ಸಾಲ ಸೌಲಭ್ಯಗಳು ಸಿಗಲಿವೆ. ಅಲ್ಲದೇ
ಕೃಷಿಕರಿಂದ ಶೇಖರಣ ಮಾಡಿದ ದಾಸ್ತಾನಿಗೆ ಸಂಗ್ರಹಣಾ ಶುಲ್ಕದಲ್ಲಿ ಶೇಕಡಾ 20 ರಷ್ಟು ಹಾಗೂ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇಕಡಾ 25ರಷ್ಟು ರಿಯಾಯಿತಿ ಸಹ ದೊರೆಯಲಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಾ ಬಂದಿದೆ. ಇದಲ್ಲದೆ ನಿಗಮದ ರಾಜ್ಯಾದ್ಯಂತ ಇರುವ ಉಗ್ರಾಣ ಕೇಂದ್ರಗಳಲ್ಲಿ ಗಣಕೀಕರಣ ವ್ಯವಸ್ಥೆ ಆಗಿದ್ದು, ಆನ್ ಲೈನ್ ವ್ಯವಸ್ಥೆ ಸಹ ಇರಲಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ರೈತರಿಂದ ಭತ್ತ, ರಾಗಿ, ಬಿಳಿಜೋಳ, ತೊಗರಿ, ಕಡಲೆ, ಹೆಸರು, ಉದ್ದು ಸೇರಿದಂತೆ ಮೊದಲಾದ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುತ್ತಿದ್ದು ಇವುಗಳನ್ನು ರಾಜ ಉಗ್ರಾಣಗಳ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ 1962ರ ಕಾಯಿದೆಯಂತೆ ಎಲ್ಲಾ ರಾಜ್ಯಗಳಲ್ಲೂ ರಾಜ್ಯ ಉಗ್ರಾಣ ನಿಗಮಗಳಿರುತ್ತವೆ. ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ಅಧೀನ ಸಂಸ್ಥೆಯಾಗಿದೆ. ಕೇಂದ್ರ ಸರ್ಕಾರದ ಕೇಂದ್ರ ಉಗ್ರಾಣ ನಿಗಮ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಶೇ 50:50ರಷ್ಟು ಷೇರು ಬಂಡವಾಳವನ್ನಾಗಿ ಹೂಡಿರುತ್ತವೆ. ಕರ್ನಾಟಕದಲ್ಲಿ ಪ್ರಪ್ರಥಮಬಾರಿಗೆ 1958ರಲ್ಲಿ ರಾಯಚೂರು, ಹುಬ್ಬಳ್ಳಿ ಮತ್ತು ಮೈಸೂರುಗಳಲ್ಲಿ ನಿಗಮವು ತನ್ನ ರಾಜ್ಯ ಉಗ್ರಾಣಗಳ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿತು. ರಾಜ್ಯಾದ್ಯಂತ ಇಂದು ನಿಗಮವು 17.50 ಲಕ್ಷ ಮೆ.ಟನ್‌ಗಳಷ್ಟು ಸಾಮರ್ಥ್ಯದ ಗೋದಾಮುಗಳೊಂದಿಗೆ 153 ರಾಜ್ಯ ಉಗ್ರಾಣ ಶಾಖೆಗಳನ್ನು ಮತ್ತು 1 ಪ್ರಾದೇಶಿಕ ಕಛೇರಿಗಳನ್ನು ಹೊಂದಿರುತ್ತದೆ. ನಿಗಮದಲ್ಲಿ ಒಟ್ಟು 280 ಖಾಯಂ ಅಧಿಕಾರಿ/ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ನೂತನವಾಗಿ ನಿರ್ಮಾಣ ಮಾಡಿರುವ ಈ ‘ಉಗ್ರಾಣ ಭವನ’ವು ನಿಗಮದ ಪ್ರಧಾನ ಆಡಳಿತ ಕಛೇರಿಯಾಗಿರುತ್ತದೆ.

ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸೇರಿದಂತೆ ಇತರ ಪ್ರಮುಖರು ಇದ್ದರು.

Related News

ಮೋದಿ ಎಂಬ ಹೆಸರಿನ ಅರ್ಥ ಭ್ರಷ್ಟಾಚಾರ ತನ್ನ ಹೇಳಿಕೆ ಸಮರ್ಥಿಸಿಕೊಂಡ ನಟಿ ಖುಷ್ಬು
Vijaya Time

ಮೋದಿ ಎಂಬ ಹೆಸರಿನ ಅರ್ಥ ಭ್ರಷ್ಟಾಚಾರ ತನ್ನ ಹೇಳಿಕೆ ಸಮರ್ಥಿಸಿಕೊಂಡ ನಟಿ ಖುಷ್ಬು

March 27, 2023
ತಮ್ಮ ಬೆಂಬಲಿಗನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ ; ವೀಡಿಯೊ ವೈರಲ್!
ರಾಜಕೀಯ

ತಮ್ಮ ಬೆಂಬಲಿಗನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ ; ವೀಡಿಯೊ ವೈರಲ್!

March 27, 2023
ಕಾಂಗ್ರೆಸ್‌ ಪಟ್ಟಿ ರಿಲೀಸ್‌: ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌ ನೀಡಿದೆ ಗೊತ್ತಾ..?
ರಾಜಕೀಯ

ಕಾಂಗ್ರೆಸ್‌ ಪಟ್ಟಿ ರಿಲೀಸ್‌: ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌ ನೀಡಿದೆ ಗೊತ್ತಾ..?

March 27, 2023
ರಾಹುಲ್‌ಗಾಂಧಿ ಅನರ್ಹತೆ ಕುರಿತು ಕಾನೂನು ಏನು ಹೇಳುತ್ತದೆ..?
ರಾಜಕೀಯ

ರಾಹುಲ್‌ಗಾಂಧಿ ಅನರ್ಹತೆ ಕುರಿತು ಕಾನೂನು ಏನು ಹೇಳುತ್ತದೆ..?

March 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.