Invitation to Former US President Barack Obama for Congress session in Belgaum.
Belgaum: ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ (Barack Obama) ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಆಹ್ವಾನಿಸಿದ್ದಾರೆ. ಈಗಾಗಲೇ ಪತ್ರವನ್ನು ಬರೆಯಲಾಗಿದೆ. ಇದೇ ವರ್ಷದ ಡಿಸೆಂಬರ್ (December) ಅಥವಾ 2025ರ ಜನವರಿ ರಿಂದ ಅಕ್ಟೋಬರ್ ರೊಳಗಾಗಿ ದಿನಾಂಕ ನೀಡಲು ಕೋರಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ (H K Patil) ತಿಳಿಸಿದರು.
ಬೆಳಗಾವಿಯಲ್ಲಿ (Belgaum) ಮಾತನಾಡಿದ ಅವರು, ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು. ಅಂತಾರಾಷ್ಟೀಯ ಮಹತ್ವ ಪಡೆಯಲು ವಿಧಾನಮಂಡಳ ಜಂಟಿ ಅಧಿವೇಶನ ನಡೆಸಲು ಹಾಗೂ ಬರಾಕ್ ಒಬಾಮಾ ಅವರನ್ನು ಆಹ್ವಾನಿಸಲು ಉದ್ಧೇಶಿಸಲಾಗಿದ್ದು, ಗಾಂಧೀಜಿಯವರ (Gandhiji) ಬಗ್ಗೆ ಅಪಾರ ಅಭಿಮಾನ ಹೊಂಧಿರುವ ಅವರು ಜಂಟಿ ಅಧಿವೇಶನ ಉದ್ಧೇಶಿಸಿ ಮಾತನಾಡಬೇಕು ಎಂದು ಕೋರಲಾಗಿದೆ. ಬೆಳಗಾವಿ ಅಧಿವೇಶನದ ಶತಮಾನೋತ್ಸವದ ಮೂಲಕ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಪ್ರಚುರಪಡಿಸುವ ಉದ್ದೇಶ ಹೊಂದಲಾಗಿದೆ.
ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲು ಗಾಂಧಿವಾದಿಗಳ ಜತೆ ಚರ್ಚಿಸಿ ಶತಮಾನೋತ್ಸವ ಆಚರಣೆ ಮಾಡಲಾಗುವುದು. ಇನ್ನು ಅಧಿವೇಶನ ಶತಮಾನೋತ್ಸವ ಆಚರಣೆಗೆ 25 ಕೋಟಿ ಮೀಸಲಿಡಲಾಗಿದೆ.
ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ (Veerappa Mohli), ಸಮಿತಿಯ ರಾಜ್ಯ ಸಂಚಾಲಕ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ, ಸದಸ್ಯ ಎನ್.ಆರ್.ವಿಶುಕುಮಾರ್, ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಸೇರಿ ಮತ್ತಿತರರು ಈ ವೇಳೆ ಹಾಜರಿದ್ದರು.
CM Siddaramaiah Invites Barack Obama – Belgaum Cong Session
Belgaum: Former US President Barack Obama has been invited by CM Siddaramaiah as the chief guest for the centenary program of Congress session held in Belgaum in 1924 under the leadership of Mahatma Gandhi. A letter has already been written. Law Minister HK Patil said that it has been requested to give a date between December of this year or January to October of 2025.
Speaking in Belgaum, he said that the outline of the program will be prepared after discussing with the officials. It is intended to hold a joint session of the Legislature to gain international importance and to invite Barack Obama, who has great admiration for Gandhiji. It is requested that they should address the joint session. Through the centenary of the Belagavi Session, the objective is to popularize Gandhiji’s principles.
A centenary celebration will be held in consultation with Gandhians to organize a meaningful program. 25 crores have been earmarked for the session centenary celebrations. Honorary Chairman of Belgaum Session Centenary Committee and former Chief Minister Veerappa Moily Former chairman BL Shankara, member NR Vishukumar, Belgaum North MLA Asif Seth and others were present on the occasion.