Discrimination in central tax distribution: CM Siddaramaiah wrote a letter to the Chief Ministers of eight states!
Bengaluru: ಕಳೆದ ಕೆಲ ದಿನಗಳಿಂದ ಕೇಂದ್ರದ ತಾರತಮ್ಯದ ಕುರಿತಾಗಿ ಒಂದಿಷ್ಟು ಹೇಳಿಕೆಗಳು ಕೇಳಿಬಂದಿತ್ತು. ಇದೀಗ ಕೇಂದ್ರದ ತೆರಿಗೆ ಆದಾಯ ಹಂಚಿಕೆಯಲ್ಲಿ (Distribution of tax revenue of the Centre) ಅನ್ಯಾಯವಾಗುತ್ತಿದೆ ಎಂಬ ವಿಚಾರದಲ್ಲಿ ಮತ್ತೆ ಹೋರಾಟ ಸಂಘಟಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಜತೆಗೆ, ಕಡಿಮೆ ತೆರಿಗೆ ಪಾಲು ಪಡೆಯುತ್ತಿರುವ ಬಿಜೆಪಿ (BJP) ಆಡಳಿತದ ರಾಜ್ಯಗಳನ್ನೂ ಈ ಹೋರಾಟಕ್ಕೆ ತರಲು ರಾಜ್ಯ ಕಾಂಗ್ರೆಸ್ (Congress) ಮುಂದಾಗಿದೆ.
ಈ ಕುರಿತಾಗಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಹರಿಯಾಣ ಮತ್ತು ಪಂಜಾಬ್ (Kerala, Tamil Nadu, Andhra Pradesh, Telangana, Maharashtra, Gujarat, Haryana and Punjab) ಮುಖ್ಯಮಂತ್ರಿಗಳಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರದ ಅನ್ಯಾಯದ ತೆರಿಗೆ ಹಂಚಿಕೆ ಕುರಿತು ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನದಡಿ ಪತ್ರ ಬರೆದು ಕೇಂದ್ರದ ತಾರತಮ್ಯ ನೀತಿಯನ್ನು ಹೇಳಿದ್ದಾರೆ.
ನಡೆಯುತ್ತಿರುವ ಅನ್ಯಾಯದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು, ಅತಿಹೆಚ್ಚು ತೆರಿಗೆ ಪಾವತಿಸಿಯೂ ಕಡಿಮೆ ಪಾಲು ಪಡೆಯುತ್ತಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಮಾಹಿತಿಯನ್ನು ಅವರು ಸಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
CM Siddaramaiah tweet viral Post In Kannada
ಕೇಂದ್ರದ ತಾರತಮ್ಯ ನೀತಿಯನ್ನು ಖಂಡಿಸಿ 8 ರಾಜ್ಯಗಳ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದು, ಆರ್ಥಿಕತೆ ಮತ್ತು ಇತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ಕರ್ನಾಟಕದಂತಹ ಹಲವು ರಾಜ್ಯಗಳನ್ನು ಅವುಗಳ ಸಾಧನೆಯ ಕಾರಣಕ್ಕೇ ದಂಡಿಸಲಾಗುತ್ತಿದೆ. ಇದರ ವಿರುದ್ಧ ದನಿ ಎತ್ತಬೇಕಿದೆ ಎಂದಿದ್ದಾರೆ. ಈ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ (Bengaluru) ಸಭೆ ಆಯೋಜಿಸಲಾಗುತ್ತದೆ. ಸಭೆಯ ದಿನಾಂಕ ಮತ್ತು ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುತ್ತದೆ. ತೆರಿಗೆ ಅನ್ಯಾಯವನ್ನು ಸರಿಪಡಿಸಿ ಎಂದು 16ನೇ ಹಣಕಾಸು ಆಯೋಗವನ್ನು ಒತ್ತಾಯಿಸಲು ತಾವೆಲ್ಲರೂ ಆ ಸಭೆಯಲ್ಲಿ ಭಾಗಿಯಾಗಬೇಕು ಎಂದು ಕೋರಿದ್ದಾರೆ.
Bengaluru: For the past few days, there have been some statements about discrimination by the Centre. Now, the state government has decided to organize a struggle again on the issue of injustice in the distribution of tax revenue of the Centre. In addition to states ruled by opposition parties, BJP-ruled states are getting a lower tax share The state Congress has come forward to bring this struggle.
Karnataka CM Siddaramaiah has written a letter to the Chief Ministers of Kerala, Tamil Nadu, Andhra Pradesh, Telangana, Maharashtra, Gujarat, Haryana and Punjab in this regard. He wrote a letter about the unfair tax distribution of the central government under the Nama Nama Nama Hawat Abhiyan and stated the discriminatory policy of the Centre.
To discuss the ongoing injustice, Chief Minister Siddaramaiah has written to the Chief Ministers of all the states who are paying the highest tax but getting the lowest share. He shared this information on social networking site X.
Siddaramaiah wrote a letter to the Chief Ministers of 8 states condemning the discriminatory policy of the Centre, saying that many states like Karnataka, which have done well in economic and other fields, are being penalized because of their achievements. He said that he should raise his voice against this. A meeting will be organized in Bengaluru to discuss this.
The date and details of the meeting will be communicated soon. They all requested to attend the meeting to urge the 16th Finance Commission to correct the tax injustice.