- ದ್ವೇಷ ಭಾಷಣ ಮಾಡುವವರ ವಿರುದ್ಧ ಕೇಸ್ ಹಾಕಿ, ಇಲ್ಲಂದ್ರೆ ಕ್ರಮ ಎದುರಿಸಿ
- ಠಾಣೆಗಳಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಮತ್ತು ಪೊಲೀಸರ ತನಿಖೆಯ ಗುಣಮಟ್ಟ ಹೆಚ್ಚಬೇಕು (CM Siddaramaiah warns of suo motu case)
- ದಕ್ಷಿಣ ಕನ್ನಡ ಜಿಲ್ಲೆಯ ನೆಮ್ಮದಿ ಕೆಡಿಸುವವರನ್ನು ಮೂಲದಿಂದಲೇ ಪತ್ತೆ ಹಚ್ಚಿ ಎಂದು ಖಡಕ್ ಸೂಚನೆ
Bengaluru: ರಾಜ್ಯದಲ್ಲಿ ಅಪರಾಧಗಳ(crime) ಪ್ರಮಾಣ ಕಡಿಮೆ ಆಗಿರುವುದು ಸಮಾಧಾನದ ಸಂಗತಿಯಾದರೂ ಪೊಲೀಸರ ತನಿಖೆಯ ಗುಣಮಟ್ಟ ಕಡಿಮೆಯಾಗಿದ್ದು ಇದನ್ನು ಹೆಚ್ಚಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು(C M Siddaramaiah) ಸೂಚಿಸಿದರು.
ಸಮಾಜದಲ್ಲಿ ಶಾಂತಿ ಭಂಗ ಉಂಟುವ ಶಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ (Indiscriminate action) ಜರುಗಿಸಲಾಗುತ್ತದೆ.
ದ್ವೇಷ ಪಸರಿಸಲು ಹಾಗೂ ಕೋಮು ಸಾಮರಸ್ಯ (communal harmony)ಕದಡಲು ಪ್ರಚೋದನೆಯ ಭಾಷಣ ಮಾಡುವವರ ವಿರುದ್ಧ ದೂರುಗಳು (complaints)ಸಲ್ಲಿಕೆಯಾದರೆ ಕೂಡಲೇ ಕ್ರಮ ಜರುಗಿಸಬೇಕು.
ಈ ಬಗ್ಗೆ ದೂರುಗಳು ಬಾರದೆ ಹೋದರೆ ಸುಮೋಟೋ (Sumoto) ಕೇಸ್ ದಾಖಲಿಸುವಂತೆ ಸೂಚಿಸಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮತ್ತು ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ (Review meeting) ನಡೆಸಿ ಅಪರಾಧವಾಗುತ್ತಿದ್ದಂತೆ ಕೂಡಲೇ ಎಫ್ಐಆರ್ (FIR) ದಾಖಲಿಸಿ ಆರೋಪಿಗಳ ಬಂಧನಕ್ಕೆ ಮುಂದಾಗಬೇಕು.
ಸಾಕ್ಷಿ ನಾಶವಾಗದಂತೆ ತಡೆದು ನಿಗದಿತ ಅವಧಿಯೊಳಗೆ ನ್ಯಾಯಾಲಯಕ್ಕೆ ಚಾರ್ಜ್ಶೀಟ್ (Chargesheet) ಸಲ್ಲಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ರೀತಿ ಗುಣಮಟ್ಟದ ತನಿಖೆ ಪೊಲೀಸರಿಂದ ಆಗಬೇಕಿದೆ.
ಅಲ್ಲದೆ, ಕಾಲಾನುಕ್ರಮವಾಗಿ ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ ಕೂರದೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದಾಖಲಾಗಿರುವ ಪ್ರಕರಣಗಳ ಮೇಲ್ವಿಚಾರಣೆ (supervision) ನಡೆಸಬೇಕು.
ಈ ನಿಟ್ಟಿನಲ್ಲಿ ಅನಗತ್ಯ ವಿಳಂಬ ಧೋರಣೆ (Procrastination) ಮಾಡಬಾರದು ಎಂದು ಸೂಚನೆಗಳನ್ನು ಸಿಎಂ ನೀಡಿದರು.
ದ್ವೇಷ ಭಾಷಣ ಮಾಡುವವರ ವಿರುದ್ಧ, ಜನರ-ರಾಜ್ಯದ ನೆಮ್ಮದಿ ಕೆಡಿಸುವವರ ವಿರುದ್ಧ ಸ್ವಯಂಪ್ರೇರಿತ ಕ್ರಮ (Voluntary) ಏಕೆ ತೆಗೆದುಕೊಳ್ಳುತ್ತಿಲ್ಲ, ಅಧಿಕಾರಿಗಳಿಗೆ ಖಾರವಾಗಿ ಮುಖ್ಯಮಂತ್ರಿಗಳು ಪ್ರಶ್ನಿಸಿದ್ದಾರೆ.
ಎರಡು ವರ್ಷಗಳಲ್ಲಿ ಪ್ರಮುಖ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವುದು ಸಮಾಧಾನಕಾರ. ಆದರೆ, ತನಿಖೆಯಲ್ಲಿ ಗುಣಮಟ್ಟ (Quality investigation) ಕಾಯ್ದುಕೊಳ್ಳುವ ಅಗತ್ಯವಿದೆ.
2024ರಲ್ಲಿ ದಾಖಲಾಗಿದ್ದ ಸೈಬರ್ ಅಪರಾಧ (Cyber crime) ಪ್ರಕರಣಗಳಲ್ಲಿ ಶೇ.24ರಷ್ಟು ಪತ್ತೆಕಾರ್ಯ ಮಾಡಿದರೆ, ಈ ವರ್ಷ ಶೇ .9ರಷ್ಟು ಮಾತ್ರ ಪತ್ತೆ ಕಾರ್ಯ ಮಾಡದಿರುವುದು ಕಂಡುಬಂದಿದೆ.
ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಫೀಲ್ಡ್ಗೆ ಹೋಗಿ ಕಾರ್ಯನಿರ್ವಹಣೆ ಮಾಡಬೇಕು .
ಕೋಮು ಘರ್ಷಣೆ (Communal conflict) ಮತ್ತು ಕೊಲೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಚ್ಚಾಗಿ ಆಗುತ್ತಿದೆ.
ಇದನ್ನು ಓದಿ : ಗುಡುವು ಪೂರ್ಣಗೊಂಡರೂ ಮುಗಿಯದ ಚಿಕ್ಕಪೇಟೆ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ: BBMPಗೆ ಹಿಡಿಶಾಪ ಹಾಕುತ್ತಿರುವ ವ್ಯಾಪಾರಸ್ಥರು
ಇತರೆ ಜಿಲ್ಲೆಗಳಲ್ಲಿ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಯ ನೆಮ್ಮದಿ ಕೆಡಿಸುವವರನ್ನು(CM Siddaramaiah warns of suo motu case) ಮೂಲದಿಂದಲೇ ಪತ್ತೆ ಹಚ್ಚಿ ಅವನು ಯಾರೇ ಇದ್ದರೂ ಕಠಿಣ ಕಾನೂನು ಕ್ರಮ(Legal action) ಕೈಗೊಳ್ಳಿ ಎಂದು ಸಿಎಂ ಸ್ಪಷ್ಟ ಸೂಚನೆ ನೀಡಿದ್ದಾರೆ.