Bangalore : ದೇಶದಲ್ಲಿರುವ ಹಾಲಿ ಮುಖ್ಯಮಂತ್ರಿಗಳ (present Chief Ministers) ಆಸ್ತಿ ವಿವರಗಳ ಮಾಹಿತಿಯ ಆಧಾರದ ಮೇಲೆ ಶ್ರೀಮಂತ ಮುಖ್ಯಮಂತ್ರಿಗಳ (Rich Chief Ministers) ಪಟ್ಟಿಯೊಂದನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ ಬಿಡುಗಡೆ ಮಾಡಿದ್ದು, ಈ ವರದಿಯ ಪ್ರಕಾರ ಕರ್ನಾಟಕದ ಮುಖ್ಯಮಂತ್ರಿ (Chief Minister of Karnataka) ಸಿದ್ದರಾಮಯ್ಯನವರಿ (Siddaramaiah) ಮೂರನೇಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನೊಂದೆಡೆ ಮೊದಲ ಸ್ಥಾನದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Andhra Pradesh Chief Minister Chandrababu Naidu) ಹಾಗೂ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖುಂಡು (Arunachal Pradesh Chief Minister Pema Khandu) ಎರಡನೇಯ ಸ್ಥಾನದಲ್ಲಿದ್ದಾರೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ (Association for Democratic Reforms) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ದೇಶದ 31 ಮುಖ್ಯಮಂತ್ರಿಗಳ (31 chief ministers of the country) ಒಟ್ಟು ಆದಾಯ 1,630 ಕೋಟಿ ರೂಪಾಯಿಗಳಷ್ಟಿದೆ. ದೇಶದ ಹಾಲಿ ಮುಖ್ಯಮಂತ್ರಿಗಳ ಸರಾಸರಿ ಆಸ್ತಿ ಮೌಲ್ಯ (Average property value) 52.59 ಕೋಟಿ ರೂಪಾಯಿಗಳಷ್ಟಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ (Institute for Democratic Reforms) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರ ಒಟ್ಟು ಆಸ್ತಿ 931 ಕೋಟಿ ರೂಪಾಯಿಗಳಷ್ಟಿದ್ದರೆ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಅವರು 332 ಕೋಟಿ ರೂ. ಸಂಪತ್ತಿನ ಒಡೆಯರಾಗಿದ್ದಾರೆ. ಇನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರ ಆಸ್ತಿ ಮೌಲ್ಯ 51 ಕೋಟಿ ರೂ. ಆಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ 49.83 ಕೋಟಿ ರೂಪಾಯಿ ಆಸ್ತಿ (49.83 crores worth of assets) ಇದೆ. 23.08 ಕೋಟಿ ರೂ. ಸಾಲ ಮತ್ತು ವಿವಿಧ ಬ್ಯಾಂಕ್ ಖಾತೆಗಳಲ್ಲಿ 21.86 ಲಕ್ಷ ರೂಪಾಯಿ (21.86 lakhs in various bank accounts) ಠೇವಣಿ ಹೊಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಜಂಟಿ ಮಾಲೀಕತ್ವದಲ್ಲಿ ಮನೆ ಇದ್ದು, 9 ಸಾವಿರ ಚದರ ಅಡಿಯ ಈ ಮನೆಯ ಮೌಲ್ಯ 4.21 ಕೋಟಿ ರೂ. ಆಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಫ್ಲಾಟ್ ಹೊಂದಿದ್ದಾರೆ.
ದೇಶದ ಬಡ ಮುಖ್ಯಮಂತ್ರಿಗಳು : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ಅವರ ಬಳಿ 15 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದು ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ (Jammu and Kashmir Chief Minister Umar Abdullah) ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್ (Kerala Chief Minister Pinarayi Vijay) ಅವರು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.