Bengaluru: ಮಹಿಳಾ ಮೀಸಲಾತಿ ಜಾರಿಯಾಗಿದೆ ಎಂದು ನಂಬಿ ಚಪ್ಪಾಳೆ ತಟ್ಟಬೇಡಿ. ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಾವು ಇನ್ನೂ ಹೋರಾಟವನ್ನು ಮುಂದುವರೆಸಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ (C.M Siddaramaiah) ಡಾ. ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ (Bengaluru Gandhi Bhavan) ನಡೆದ “ಮಹಿಳಾ ಮೀಸಲಾತಿ” ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ತಿಳಿಸಿದರು.

ಮಹಿಳಾ ಮೀಸಲಾತಿ ಮಸೂದೆ ತನ್ನ ಜೀವಿತಾವಧಿಯನ್ನು ನಿಗದಿಪಡಿಸಲು ಡಿಲಿಮಿಟೇಶನ್ (Delimitation) ಮತ್ತು ಜನಗಣತಿಯ ತಡೆಗೋಡೆ ಹಾಕುವ ಮೂಲಕ ಬಿಜೆಪಿ (BJP) ತನ್ನ ಬೂಟಾಟಿಕೆಯನ್ನು ತೋರಿಸಿದೆ. ಈ ಕಾರಣದಿಂದ ಮಹಿಳಾ ಮೀಸಲಾತಿ ಜಾರಿ ಸದ್ಯಕ್ಕೆ ಆಗದಿರಬಹುದು. ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಪ್ರಾಮಾಣಿಕ ಕಾಳಜಿ ಬಿಜೆಪಿಗಿದ್ದರೆ ಇಷ್ಟೆಲ್ಲಾ ಅಡೆತಡೆಗಳನ್ನು ಒಡ್ಡುತ್ತಿರಲಿಲ್ಲ. ನರೇಂದ್ರ ಮೋದಿ (Narendra Modi) ಜಾರಿಗೆ ತಂದ ಮಹಿಳಾ ಮೀಸಲಾತಿಗೆ ಕೇಂದ್ರ ಸರ್ಕಾರ 15 ವರ್ಷ ವಯೋಮಿತಿ ನಿಗದಿ ಮಾಡಿದೆ.
ಕಾಯಿದೆಯ ಸಿಂಧುತ್ವವು ಅದು ಜಾರಿಗೆ ಬಂದ ದಿನಾಂಕದಿಂದ 15 ವರ್ಷಗಳು. ಅಂದರೆ ಈಗ ಕಾಯ್ದೆ ಜಾರಿಯಾಗಿದೆ. ಅದಕ್ಕೆ ಇನ್ನು 15 ವರ್ಷ ಮಾತ್ರ ಬದುಕಬೇಕಿದೆ. ಆದರೆ, ಅವರು ಜನಗಣತಿ ಮತ್ತು ಡಿಲಿಮಿಟೇಶನ್ ಎಂಬ ಎರಡು ಅಡೆತಡೆಗಳನ್ನು ಹಾಕಿದ್ದಾರೆ. ಈ ಅಡೆತಡೆಗಳನ್ನು ನಿವಾರಿಸಲು 15 ವರ್ಷಗಳು ಬೇಕಾಗುತ್ತದೆ. ಹೀಗಾಗಿ ಈ ಮಸೂದೆಯ ಜೀವಿತಾವಧಿಯು ಅದರ ಅನುಷ್ಠಾನಕ್ಕೆ ಮುಂಚೆಯೇ ಮುಕ್ತಾಯಗೊಳ್ಳುತ್ತದೆ.

ಇದು ಮಹಿಳೆಯರಿಗೆ ಮಾಡಿದ ದೊಡ್ಡ ವಂಚನೆ. ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ (Congress) ರಚಿಸಿದೆ, ಕಾಂಗ್ರೆಸ್ ಯಾವಾಗಲೂ ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿದೆ. ಮಹಿಳಾ ಮೀಸಲಾತಿಯಲ್ಲೂ ಹಿಂದುಳಿದ ವರ್ಗದ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬುದನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಶೇ.33 ಮಾತ್ರವಲ್ಲ ಶೇ.50ರಷ್ಟು ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲವಿದೆ.
ಮೋದಿ ಜಾರಿಗೆ ತಂದಿದ್ದಾರೆ ಎನ್ನಲಾದ ಈ ಮಹಿಳಾ ಮೀಸಲಾತಿ 2024ರಲ್ಲೂ ಜಾರಿಯಾಗುವುದಿಲ್ಲ. 2029ರಲ್ಲೂ ಜಾರಿಯಾಗುವುದಿಲ್ಲ. 2034ರಲ್ಲಿಯೂ ಇದು ಜಾರಿಗೆ ಬರುವುದಿಲ್ಲ.ಅಷ್ಟರಲ್ಲಿ ಕಾಯ್ದೆಯ ಉದ್ದೇಶ ಮುಗಿದಿರುತ್ತದೆ ಎಂದು ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದ್ದಾರೆ.