Ramnagar : ಲೋಕಸಭಾ ಚುನಾವಣೆಯಲ್ಲಿ (Lok Sabha elections) ಮಂಡ್ಯದಲ್ಲಿ ಸೋತಿದ್ದ, ನಂತರ ರಾಮನಗರದಲ್ಲಿ (Ramanagara) ಸೋತಿದ್ದ ನಿಖಿಲ್ (Nikhli) ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಅಳು ನಮ್ಮ ಪರಂಪರೆ, ನೀನು ಅಳೋಕೆ ಶುರು ಮಾಡು, ಜನ ಮರುಳಾಗಿ ಓಟ್ ಹಾಕ್ತಾರೆ ಎಂದು ನಿಖಿಲ್ಗೆ ಹೇಳಿಕೊಟ್ಟಿದ್ದಾರೆ. ಸೋಲಿನ ಭಯದಲ್ಲಿ ಇಡೀ ಕುಟುಂಬವೇ ಬಂದು ಕಣ್ಣೀರು ಹಾಕುತ್ತಿದ್ದಾರೆ. ಆದರೆ ಇಲ್ಲಿ ಯೋಗೇಶ್ವರ್ ಗೆಲ್ಲುವುದು ಶತಸಿದ್ಧ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ (Channapatna Assembly Constituency) ಕುಡ್ಲೂರು ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಈ ಕ್ಷೇತ್ರಕ್ಕೆ ರೂ.220 ಕೋಟಿ ಅನುದಾನ ಕೊಟ್ಟವನು ನಾನು. ಬಿಜೆಪಿ (BJP) ಅವರು ನೀರಾವರಿ ಯೋಜನೆಗಳಿಗೆ (Irrigation projects) ಅನುಮೋದನೆ ಕೊಟ್ಟು, ಅನುದಾನ ಕೊಡದೆ ಸುಮ್ಮನಾಗಿದ್ರು. ನಾನು ಅನುದಾನ ಬಿಡುಗಡೆ ಮಾಡಿದ್ದೆ. ಯೋಗೇಶ್ವರ್ (Yogeshwar) ಗೆ ಜನರ ಕಷ್ಟಸುಖ ಗೊತ್ತು. ದೇವೇಗೌಡರ ಕುಟುಂಬಕ್ಕೆ (Devegowda) ಇದು ಗೊತ್ತಿಲ್ಲ. ಅವರಿಗೆ ಭಾವನಾತ್ಮಕವಾಗಿ ಮಾತಾಡೋದು, ಅಳೋದು ಮಾತ್ರ ಗೊತ್ತು. ಚನ್ನಪಟ್ಟಣದ (Channapatna) ಅಭಿವೃದ್ಧಿಗೆ ಯೋಗೇಶ್ವರ್ ಗೆಲ್ಲಬೇಕು, ಗಳಗಳನೆ ಕಣ್ಣೀರು ಹಾಕುವವರಲ್ಲಅಳೊ ಗಂಡಸನ್ನು ನಂಬಬಾರ್ದು ಅಂತ ನಮ್ಮ ಕಡೆ ಒಂದು ಗಾಧೆ ಇದೆ. ಈ ಕುಮಾರಸ್ವಾಮಿ (KumarSwamy) ಅಳುವ ಗಂಡಸು, ಯಾವತ್ತೂ ನಂಬಬೇಡಿ. ಅತ್ತರೆ ಜನರ ಸಮಸ್ಯೆ ಬಗೆಹರಿಯುತ್ತದಾ? ಕೆರೆಗೆ ನೀರು ತುಂಬುತ್ತಾ? ರೈತರ (Farmers) ಜಮೀನಿಗೆ ನೀರು ಹರಿಯುತ್ತಾ? ಕ್ಷೇತ್ರದ ಅಭಿವೃದ್ಧಿ ಆಗುತ್ತಾ? ಯಾರೂ ನಮ್ಮನ್ನು ಆಹ್ವಾನ ಕೊಟ್ಟು ರಾಜಕೀಯಕ್ಕೆ (Politics) ಬನ್ನಿ ಅಂತ ಕರೆದಿಲ್ಲ. ಜನರ ಸೇವೆ ಮಾಡಬೇಕು ಎಂದು ನಾವಾಗಿಯೇ ಬಂದಿದೀವಿ. ಬಂದ ಮೇಲೆ ಕೆಲಸ ಮಾಡಬೇಕು, ಕಣ್ಣೀರು ಹಾಕೋದಲ್ಲ. ನಾವು ಗ್ಯಾರಂಟಿ ಯೋಜನೆ ಮೂಲಕ 1.69 ಕೋಟಿ ಕುಟುಂಬಗಳಿಗೆ ನೆರವಾಗುತ್ತಿದ್ದೇವೆ. ಇದೇ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ನಮ್ಮ ಸರ್ಕಾರದ ಶಕ್ತಿ ಯೋಜನೆಯನ್ನು (sakti yojaneyannu) ಕೊಂಡಾಡಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ನನಗೆ ಪತ್ರ ಬರೆದು ಶ್ಲಾಘಿಸಿದ್ದರು. ಈ ಬಾರಿ ಹಾಸನಾಂಬೆ ಜಾತ್ರೆಗೆ 21 ಲಕ್ಷ ಮಹಿಳೆಯರು ಹೋಗಿದ್ದಾರೆ. ಇದೊಂದು ದಾಖಲೆ. ಇದಕ್ಕೆ ಶಕ್ತಿ ಯೋಜನೆ ಕಾರಣ ಎಂದರು.
ದೇವೇಗೌಡ್ರು (Devegaudru) ಹೇಳಿದ್ರು ಕಟುಕರಿಗೆ ಕಣ್ಣೀರು ಬರಲ್ಲ ಅಂತ. ಹಾಸನದಲ್ಲಿ ನಿಮ್ಮ ಮೊಮ್ಮಗನಿಂದ ಲೈಂಗಿಕ ದೌರ್ಜನ್ಯಕ್ಕೆ (sexual assault) ಒಳಗಾದ ನೂರಾರು ಹೆಣ್ಣುಮಕ್ಕಳು ಕಣ್ಣೀರು ಹಾಕ್ತಿದ್ದಾರೆ. ಅಲ್ಲಿ ಹೋಗಿ ನಿಮ್ಮ ಕುಟುಂಬದವರು ಯಾರಾದ್ರೂ ಕಣ್ಣೀರು ಹಾಕಿದ್ರಾ? ಅನ್ಯಾಯ ಮಾಡಿದ್ದು ನಿಮ್ಮ ಮೊಮ್ಮಗ ಅಲ್ವಾ? ಆ ಹೆಣ್ಣುಮಕ್ಕಳ ಕಷ್ಟ ಕೇಳಬೇಕಾಗಿದ್ದು ನಿಮ್ಮ ಕರ್ತವ್ಯ ಅಲ್ಲವಾ? ನಾನು ಈಗಾಗಲೇ ಚನ್ನಪಟ್ಟಣ ಕ್ಷೇತ್ರಕ್ಕೆ (Channapatnam Constituency) ರೂ.500 ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದೀನಿ. ಯೋಗೇಶ್ವರ್ ಗೆದ್ದ ಮೇಲೆ ಮತ್ತಷ್ಟು ಅನುದಾನ ಕೊಡ್ತೀನಿ. ಇನ್ನೂ ಮೂರುವರೆ ವರ್ಷ ನಮ್ಮ ಸರ್ಕಾರವೇ ಇರುತ್ತೆ, ಕುಮಾರಸ್ವಾಮಿ ಸರ್ಕಾರ ಬರಲ್ಲ. ಅನುದಾನ ಕೊಡೋದು ನಾನು, ಡಿ.ಕೆ. ಶಿವಕುಮಾರ್.(D K SHIVALUMAR) ಕ್ಷೇತ್ರದ ಅನುಕೂಲಕ್ಕಾಗಿ ಯೋಗೇಶ್ವರ್ ಗೆಲ್ಲಬೇಕು. ಕೂಲಿ ಮಾಡಿದ್ದೀವಿ, ಅದಕ್ಕಾಗಿ ತಲೆಯೆತ್ತಿ ನಿಮ್ಮ ಮತ ಕೊಡಿ ಎಂದು ಕೇಳುತ್ತಿದ್ದೇನೆ. 5 ಗ್ಯಾರಂಟಿ ಯೋಜನೆ ಕೊಟ್ಟಿದ್ದು ನಾವು. ಪ್ರತಿ ತಿಂಗಳು ಎರಡು ಸಾವಿರ ದುಡ್ಡು ಕೊಡ್ತಿರೋದು ನಾವೆ. ಹೆಣ್ಣುಮಕ್ಕಳು ಉಚಿತವಾಗಿ ಬಸ್ ನಲ್ಲಿ ಓಡಾಡೊ ಹಾಗೆ ಮಾಡಿದ್ದು ನಮ್ಮ ಸರ್ಕಾರ. ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ರಾ? ಎಂದು ಪ್ರಶ್ನಿಸಿದರು.