Visit Channel

ಸಿಎಂ ಯೋಗಿಯನ್ನು ಭೇಟಿ ಮಾಡಿದ ನಟ ಅಕ್ಷಯ್ ಕುಮಾರ್

akshay-kumar-meets-yogi-adityanath-in-mumbai-2020-12-02

ಲಖನೌ, ಡಿ. 2: ಬಾಲಿವುಡ್‌ನ ಖ್ಯಾತ ನಟ ಅಕ್ಷಯ್‌ಕುಮಾರ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ​ ನಿನ್ನೆ ಭೇಟಿಯಾಗಿದ್ದಾರೆ. ಅಧಿಕೃತ ಕಾರ್ಯದ ನಿಮಿತ್ತ ಮುಂಬೈಗೆ ಬಂದಿರುವ ಯೋಗಿ ಅದಿತ್ಯನಾಥ್, ಮುಂಬೈನ ಖಾಸಗಿ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿಗೆ ಅಕ್ಷಯ್​ಕುಮಾರ್​ ತೆರಳಿ ಮಾತುಕತೆ ನಡೆಸಿದ್ದಾರೆ.

ಯೋಗಿ ಆದಿತ್ಯನಾಥ ಅವರು ಬಾಲಿವುಡ್ಡನ್ನು ಮುಂಬೈಯಿಂದ ಉತ್ತರಪ್ರದೇಶಕ್ಕೆ ಶಿಫ್ಟ್​ ಮಾಡುವ  ಯೋಜನೆ ನಡೆಸಿರುವುದಾಗಿ ಕಾಂಗ್ರೆಸ್​ ಆರೋಪಿಸುತ್ತಿರುವ ಬೆನ್ನಲ್ಲೇ ಇದೀಗ ಈ ಭೇಟಿ ಭಾರಿ ಚರ್ಚೆಗೆ ಗುರಿಯಾಗಿದೆ.

 ಮುಂಬೈಯಲ್ಲಿ ಯೋಗಿ ಮತ್ತು ಅಕ್ಷಯ್​ ಅವರು ಒಟ್ಟಿಗೆ ಕುಳಿತು ಚರ್ಚೆ ಮಾಡುತ್ತಿರುವ ಫೋಟೋಗಳನ್ನು ಟ್ವಿಟರ್‌ನಲ್ಲಿ ಖುದ್ದು ಯೋಗಿಯವರೇ ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಭಾರತದ ಜನಪ್ರಿಯ ನಟ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾದೆ. ಅವರೊಂದಿಗೆ ಚಿತ್ರರಂಗದ ವಿವಿಧ ಆಯಾಮಾಗಳ ಕುರಿತಾಗಿ ಒಂದು ಅತ್ಯುತ್ತಮ ಚರ್ಚೆಯನ್ನು ನಡೆಸಿದೆ. ಕೆಲಸದ ಬಗೆಗಿನ ಅವರ ತಿಳಿವಳಿಕೆ, ಸಮರ್ಪಣಭಾವ ಮತ್ತು ರಚನಾತ್ಮಕತೆ ಇಂದಿನ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಹಲವಾರು ರೀತಿಯಲ್ಲಿ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು.ಈ ಭೇಟಿಯ ಕುರಿತು ವಿಭಿನ್ನ ಚರ್ಚೆಗಳ ಆರಂಭವಾಗಿವೆ. ಚಿತ್ರರಂಗದ ಅನೇಕ ವಿಚಾರಗಳ ಕುರಿತು ಯೋಗಿ ಆದಿತ್ಯನಾಥ್‌ ಜೊತೆ ಅಕ್ಷಯ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇಂದು ಕೂಡ ಆದಿತ್ಯನಾಥ ಅವರು ಮುಂಬೈನಲ್ಲೇ ಇದ್ದು, ಮತ್ತೊಂದಿಷ್ಟು ಬಾಲಿವುಡ್‌ ಸೆಲೆಬ್ರಿಟಿಗಳನ್ನು ಭೇಟಿಯಾಗುವ ಸಾಧ್ಯತೆಗಳಿವೆ.

ನೋಯ್ಡಾ-ಗ್ರೇಟರ್ ನೋಯ್ಡಾ ಹಾಗೂ ಗೌತಮ್ ಬುದ್ಧ ನಗರ ಜಿಲ್ಲೆಗೆ ಹೊಂದಿಕೊಂಡಂತೆ ದೇಶದ ಅತ್ಯಂತ ದೊಡ್ಡದಾದ, ಸುಂದರವಾದ ಫಿಲ್ಮ್ ಸಿಟಿಯನ್ನು ಉತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡುವ ಚರ್ಚೆ ಎಲ್ಲೆಡೆ ಹರಿದಾಡಿತ್ತು.

‘ಉತ್ತರ ಪ್ರದೇಶವು ಏಳು ರಾಜ್ಯಗಳಿಗೆ ಹೊಂದಿಕೊಂಡ ದೇಶದ ಏಕೈಕ ರಾಜ್ಯವಾಗಿದೆ. ಇಡೀ ದೇಶಕ್ಕೆ ಇದೊಂದು ಸಾಂಸ್ಕೃತಿಕ ಕೇಂದ್ರವಾಗಿದೆ. ಜಗತ್ತಿನ ಪುರಾತನ ನಗರ ವಾರಣಾಸಿ, ಶ್ರೀರಾಮ ಜನಿಸಿದ ಅಯೋಧ್ಯ ಇರುವುದು ಕೂಡ ಇದೇ ರಾಜ್ಯದಲ್ಲಿ. ಈ ಹೊಸ ಫಿಲ್ಮ್‌ ಸಿಟಿಯ ನಿರ್ಮಾಣಕ್ಕಾಗಿ ಐತಿಹಾಸಿಕ ನಗರ ಹಸ್ತಿನಾಪುರದಲ್ಲಿ ಜಾಗ ಗುರುತಿಸಲಾಗಿದೆ. ಈ ರಾಷ್ಟ್ರಕ್ಕೆ ಹಸ್ತಿನಾಪುರದ ಕೊಡುಗೆ ಅಮೋಘವಾದದ್ದು. ಗಂಗಾ-ಯುಮುನಾ ನದಿಗಳ ಸಮೀಪ ಫಿಲ್ಮ್‌ ಸಿಟಿ ಸುಂದರವಾದ ಫಿಲ್ಮ್ ಸಿಟಿ ನಿರ್ಮಾಣವಾಗಲಿದೆ’ ಎಂದಿದ್ದರು. ಇದೀಗ ಅದರ ಪ್ರಕ್ರಿಯೆ ಶುರುವಾಗಿದೆ. ಈ ವಿಚಾರವಾಗಿ ಅಕ್ಷಯ್ ಕುಮಾರ್ ಜೊತೆ ಚರ್ಚೆ ನಡೆಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಫಿಲ್ಮ್ ಸಿಟಿ ಯೋಜನೆಗೆ ಯನ್ನು ಸಾಕಾರಗೊಳಿಸಲು ಬಾಲಿವುಡ್ ಖ್ಯಾತ ನಾಮರು ಮತ್ತು ಉದ್ಯಮಿಗಳನ್ನು ಭೇಟಿಯಾಗುತ್ತಿದ್ದಾರೆ. ಈಗಾಗಲೇ ಫಿಲ್ಮ್ ಸಿಟಿ ಯೋಜನೆ ಪ್ರಾರಂಭ ಮಾಡಿರುವ ಸಿಎಂ, ಈ ವಿಚಾರವಾಗಿ ಅನೇಕರ ಜತೆ ಚರ್ಚೆಗೆ ಸಬೆ ಕರೆದಿದ್ದಾರೆಂದೂ ಮಾಹಿತಿ ಕೇಳಿ ಬರುತ್ತಿದೆ.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.