Bellary : ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಪ್ರಧಾನಿ ನರೇಂದ್ರ ಮೋದಿಯವರ(Narendra modi) ಮುಂದೆ ನೀವು(ಬಿಜೆಪಿ ನಾಯಕರು) ನಾಯಿ ಮರಿಗಳಂತೆ ಹಿಂದೆ ಹಿಂದೆ ಓಡಾಡುತ್ತೀರಿ ಎಂಬ ಹೇಳಿಕೆಗೆ ಬಿಜೆಪಿ ನಾಯಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM’s punch for Siddu’s statement) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ(CM’s punch for Siddu’s statement) ಮತ್ತು ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಿದ್ದಂತೆ ಬಿಜೆಪಿ ನಾಯಕರೆಲ್ಲಾ ಅವರ ಮುಂದೆ ನಾಯಿ ಮರಿಗಳಂತೆ ಹಿಂದೆ ಹಿಂದೆ ಹೋಗುತ್ತೀರ,
ಸದ್ದಿಲ್ಲದೆ ಇರುತ್ತೀರಾ ಎಂಬ ವಿವಾದಾತ್ಮಕ ಹೇಳಿಕೆ ನೀಡಿದರು. ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಕೆರಳಿದ ಬಿಜೆಪಿ ನಾಯಕರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ನೆನಪಿಸಿ ಬಳ್ಳಾರಿಯಲ್ಲಿ(Bellari) ಜನರನ್ನು ಉದ್ದೇಶಿಸಿ ಮಾತನಾಡಿದ ಅವರು,
ಇದನ್ನೂ ಓದಿ: https://vijayatimes.com/nalinkumar-tweeted-against-congress/
ನಾಯಿ ನಿಷ್ಠಾವಂತ ಪ್ರಾಣಿ! ಅವು ನಿಷ್ಠೆಯಿಂದ ತಮ್ಮ ಕೆಲಸವನ್ನು ಮಾಡುತ್ತವೆ. ನಾನು ಕರ್ನಾಟಕದ ಜನರಿಗೆ ನಿಷ್ಠನಾಗಿದ್ದೇನೆ ಮತ್ತು ಅದಕ್ಕಾಗಿಯೇ ಅವರು ನಮ್ಮ ಸರ್ಕಾರದ ಜೊತೆ ನಿಲ್ಲುತ್ತಾರೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಸಿದ್ದರಾಮಯ್ಯ ತಮ್ಮ ಸರ್ಕಾರದ ಅವಧಿಯಲ್ಲಿ ಸಮಾಜವನ್ನು ಒಡೆಯುತ್ತಿದ್ದಾರೆ.
ಸಿದ್ದರಾಮಯ್ಯ ಮತ್ತು ಅವರ ಪಕ್ಷದ ಸದಸ್ಯರ ವ್ಯಕ್ತಿತ್ವವನ್ನು ಈ ಹೇಳಿಕೆಗಳು ಬಿಂಬಿಸುತ್ತವೆ.

ನಾಯಿ ನಿಷ್ಠಾವಂತ ಪ್ರಾಣಿ ಮತ್ತು ಅದು ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಸಮಾಜವನ್ನು ಒಡೆದ ಹಾಗೆ ನಾನು ಒಡೆದಿಲ್ಲ.
ನಾವು ಜನರನ್ನು ಸಂತೋಷ ಪಡಿಸಿದ್ದೇವೆ ಎಂದು ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇನ್ನು ಈ ಹಿಂದೆ ಸಿದ್ದರಾಮಯ್ಯ ಅವರು ನೀಡಿದ್ದ ಬಹಿರಂಗ ಚರ್ಚೆ ಸವಾಲಿಗೂ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು,
ಸಿದ್ದರಾಮಯ್ಯ ಅವರ ಸವಾಲನ್ನು ಸ್ವೀಕರಿಸಲು ವಿಧಾನಸೌಧಕ್ಕಿಂತ(Vidhansoudha) (ರಾಜ್ಯ ಶಾಸಕಾಂಗ ಸಭೆ) ಉತ್ತಮ ಸ್ಥಳವಿಲ್ಲ ಮತ್ತು ಅವರ ಪ್ರಶ್ನೆಗಳನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: https://vijayatimes.com/allegation-against-shivamurthy-swamiji/
ಸದ್ಯ ಸಿದ್ದರಾಮಯ್ಯ ಅವರ “ನಾಯಿ” ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದು, ಬಿಜೆಪಿ-ಕಾಂಗ್ರೆಸ್ ನಡುವೆ ಮಾತಿನ ಸಮರ ನಡೆಯುತ್ತಿದೆ.
ಬಳ್ಳಾರಿಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು,
ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದಲ್ಲಿ ‘ಆಪರೇಷನ್ ಕಮಲ’ದ(Operation kamala) ಮೂಲಕ ಅಧಿಕಾರಕ್ಕೆ ಬಂದರು.
ಬಸವರಾಜ ಬೊಮ್ಮಾಯಿ ಅವರು ನರೇಂದ್ರ ಮೋದಿಯವರ ಮುಂದೆ ನಾಯಿಮರಿಯಂತೆ ಹಿಂದೆ ಹೋಗುತ್ತಾರೆ,
ನಡುಗುತ್ತಾರೆ ಎಂದು ಹೇಳಿದರು. ಈ ಹೇಳಿಕೆ ಸ್ಪೋಟಗೊಳ್ಳುತ್ತಿದ್ದಂತೆ ಬಿಜೆಪಿ ನಾಯಕರು ಸಿಡಿದೆದ್ದು, ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.