New delhi: ಇನ್ನೇನೂ ಹೆಚ್ಚಿನದನ್ನು ಕಲಿಯಬೇಕೆಂಬ ಆಸೆಯಿಂದ ಕೋಚಿಂಗ್ ಸೆಂಟರ್ (Coaching Centre) ಸೇರುವ ಆನೇಕ ವಿದ್ಯಾರ್ಥಿಗಳು ಕೆಲವು ಸಲ ದುಬಾರಿ ಬೆಲೆ ತೆತ್ತು ಮೋಸ ಹೋಗಿರುವ ಪ್ರಸಂಗಗಳು (Incidents of cheating) ಹಲವಾರಿದೆ. ಇದೀಗ ಕೋಚಿಂಗ್ ಸೆಂಟರ್ (Coaching Centre) ತೆರೆದು ಅಭ್ಯರ್ಥಿಗಳಿಗೆ ಸರಿಯಾಗಿ ಸ್ಪಂದಿಸದೆ ಇರುವಂಥ ಶಿಕ್ಷಣ ಸಂಸ್ಥೆಗಳಿಗೆ (Educational institutions) ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ (Central Department of Consumer Affairs) ಬಿಸಿ ಮುಟ್ಟಿಸಿದೆ. ವಂಚನೆಗೆ ಒಳಗಾಗಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National Consumer Helpline) ಮೊರೆ ಹೋದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದೆ (Justice is served).
ಕಳೆದ ಕೆಲ ವರ್ಷಗಳಿಂದ ನಾಗರಿಕ ಸೇವೆ (Civil Service), ಇಂಜಿನಿಯರಿಂಗ್ (Engineering) ಸೇರಿದಂತೆ ವಿವಿಧ ಉನ್ನತ ಶಿಕ್ಷಣದ ತರಬೇತಿ ಕೇಂದ್ರ (Training Center for Higher Education) ತೆರೆದು ಶುಲ್ಕ ಪಾವತಿಸಿಕೊಂಡು ಬಳಿಕ ಸೀಟ್ ಇಲ್ಲವೆಂದು ವಂಚಿಸುವುದು ಮತ್ತು ಸೂಕ್ತ, ಸಮರ್ಪಕ ಅಭ್ಯಾಸ ಪರಿಕರ (Adequate Practice Tool), ತರಗತಿ ನೀಡದೇ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಬಗ್ಗೆ ದೂರುಗಳು (Complaints) ಕೇಳಿ ಬರುತ್ತಲೇ ಇದ್ದವು.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ (Union Minister of Consumer Affairs) ಪ್ರಲ್ಹಾದ ಜೋಶಿ (Pralhada Joshi) ಅವರ ಮಾರ್ಗದರ್ಶನ, ಸೂಚನೆಯಂತೆ ಸಚಿವಾಲಯವು, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National consumer helpline) ಮೂಲಕ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು (Aggrieved candidates) ನೇರವಾಗಿ ದೂರು ಸಲ್ಲಿಸಲು ಅವಕಾಶ ಒದಗಿಸಿದ್ದೂ ಅಲ್ಲದೇ, ಅಂತಹ ದೂರುಗಳಿಗೆ ತಕ್ಷಣವೇ ಪರಿಹಾರ (Immediate solution) ಸಹ ಕಲ್ಪಿಸಿಕೊಟ್ಟಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಗೆ (Central Department of Consumer Affairs) ದೂರು ನೀಡುವ ಬಗೆ:
ಟೋಲ್ ಫ್ರೀ ನಂಬರ್ : 1800-11-4000 ಅಥವಾ 1915
ಎಸ್ಎಂಎಸ್ ಮೂಲಕ : 88000 – 01915
ವಾಟ್ಸಾಪ್ ಮೂಲಕ : https://api.whatsapp.com/send/?phone=918800001915&text&type=phone_number&app_absent=0
ಆಪ್ ಮೂಲಕ : https://api.whatsapp.com/send/?phone=918800001915&text&type=phone_number&app_absent=0 (ಡೌನ್ ಲೋಡ್ ಮಾಡಿಕೊಳ್ಳಬೇಕು)
ಆನ್ಲೈನ್ ಮೂಲಕ : https://consumerhelpline.gov.in/user/signup.php
ಕೊಟ್ಟ ದೂರನ್ನು ಟ್ರ್ಯಾಕ್ ಮಾಡಲು : https://consumerhelpline.gov.in/user/track-complaint.php
ದೂರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು : https://consumerhelpline.gov.in/user/upload-docs.php
ಈ ಮೇಲಿನ ಮಾರ್ಗಗಳ ಮೂಲಕ ಅಭ್ಯರ್ಥಿಗಳು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National Consumer Helpline) (NCH) ನ್ಯಾಯಕ್ಕೆ ಮೊರೆ ಹೋಗ ಬಹುದಾಗಿದೆ .ಗ್ರಾಹಕ ಇಲಾಖೆ (Customer Department) ಎಲ್ಲವನ್ನೂ ಕೂಲಂಕುಷ ರೀತಿಯಲ್ಲಿ ಪರಿಶೀಲಿಸಿ ಅಗತ್ಯ ಸೇವೆ ಪೂರೈಸದ (Necessary service not provided), ತರಗತಿ ವಿಳಂಬ ಮತ್ತು ರದ್ದಾದ ಕೋರ್ಸ್‌ಗಳಿಗೆ (Canceled courses) ಸಂಬಂಧಿಸಿದಂತೆ ತ್ವರಿತ ನ್ಯಾಯ (Speedy justice) ಕಲ್ಪಿಸುವ ಮೂಲಕ ನೆರವಾಗಲಿದೆ.