ಬುಡಾಪೆಸ್ಟ್ (ಹಂಗೇರಿ), ಜೂ. 16: ಚಿತ್ರನಟರು ಮತ್ತು ಕ್ರೀಡಾ ತಾರೆಗಳನ್ನು ಅಭಿಮಾನಿಗಳು ಎಷ್ಟು ಫಾಲೋ ಮಾಡುತ್ತಾರೆ ಎನ್ನುವುದಕ್ಕೆ ಈ ಘಟನೆ ಊದಾಹಾರಣೆಯಾಗಿದೆ. ಫುಟ್ಬಾಲ್ ಆಟಗಾರ ರೊನಾಲ್ಡೊ ನೀರು ಕುಡಿದ ಕಾರಣಕ್ಕೆ ಕೊಕಾಕೊಲಾ ಕಂಪನಿಗೆ 2 ಬಿಲಿಯನ್ ನಷ್ಟವಾಗಿದೆ ಎಂದರೆ ನಂಬಲೇಬೇಕು.
ಪೋಚು೯ಗಲ್ ಹಾಗೂ ಹಂಗೇರಿ ನಡುವಿನ ಯುರೊ ಕಪ್ ಫುಟ್ಬಾಲ್ ಪಂದ್ಯವು ಹಂಗೇರಿಯಲ್ಲಿ ನಡೆಯುತ್ತಿದೆ. ಫುಟ್ಬಾಲ್ ಪಂದ್ಯವು ನಡೆಯುವ ಮುನ್ನ ವಿಶ್ವ ವಿಖ್ಯಾತಿ ಪಡೆದಿರುವ ಫುಟ್ಬಾಲ್ ಆಟಗಾರ ಕ್ರಿಸ್ಟಿಯನೊ ರೊನಾಲ್ಡೊ ಪತ್ರಿಕಾಗೊಷ್ಟಿಯನ್ನು ನಡೆಸುತ್ತಿದ್ದರು.
ಪತ್ರಿಕಾಗೊಷ್ಟಿ ವೇಳೆ ಜಾಹೀರಾತಿಗಾಗಿ ಟೇಬಲ್ ಮೇಲೆ ಜೊಡಿಸಿದ್ದ ಕೊಕಾಕೊಲಾ ಬಾಟಲ್ಗಳನ್ನು ಬದಿಗಿಟ್ಟು ನೀರಿನ ಬಾಟಲ್ ಅನ್ನು ಕೈಯಲ್ಲಿ ಹಿಡಿದು ನೀರು ಕುಡಿಯಿರಿ ಎಂದರು ಅಷ್ಟೆ.. ಕೊಕಾಕೊಲಾ ಕಂಪನಿಯ ಷೇರು ಧೀಡಿರ್ ಇಳಿಕೆಯಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 2 ಬಿಲಿಯನ್ ಡಾಲರ್ (30 ಸಾವಿರ ಕೋಟಿ) ನಷ್ಟ ಕಂಪೆನಿಗೆ ಆಗಿದೆ. ರೊನಾಲ್ಡೊ ವಿರುದ್ಧ ಸಂಘಟಕರು ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.