ಯುವಕರ ಅಸಮಾಧಾನವನ್ನು ವ್ಯಂಗ್ಯ (Cockroach Janata Party viral ) ರೂಪದಲ್ಲಿ ಹೇಳುತ್ತಿರುವ ಹೊಸ ಡಿಜಿಟಲ್ ಟ್ರೆಂಡ್
ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಫಾಲೋವರ್‌ಗಳು
ಸೋಶಿಯಲ್ ಮೀಡಿಯಾದಲ್ಲಿ ಯುವಕರ ಗಮನ ಸೆಳೆದ ಹಾಸ್ಯಭರಿತ ರಾಜಕೀಯ ಅಭಿಯಾನ
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅತಿ ವೇಗವಾಗಿ ವೈರಲ್ (Cockroach Janata Party viral) ಆಗುತ್ತಿರುವ ಹೆಸರುಗಳಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಕೂಡ ಒಂದು.
ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ಗಮನ ಸೆಳೆದ ಈ ಟ್ರೆಂಡ್ ಈಗ ಯುವಕರ ನಡುವೆ ದೊಡ್ಡ ಚರ್ಚೆಯ ವಿಷಯವಾಗಿದೆ.
ರಾಜಕೀಯ ವ್ಯಂಗ್ಯ, ಮೀಮ್ಸ್ (Memes) ಹಾಗೂ ಯುವಜನರ ಬೇಸರಗಳನ್ನು ಹಾಸ್ಯಾತ್ಮಕವಾಗಿ ವ್ಯಕ್ತಪಡಿಸುವ ಮೂಲಕ ಈ ಪೇಜ್ ಜನಪ್ರಿಯತೆ ಗಳಿಸಿದೆ.
ವಿಶೇಷವಾಗಿ ನಿರುದ್ಯೋಗ, ರಾಜಕೀಯ ವ್ಯವಸ್ಥೆ ಹಾಗೂ ಸಾಮಾಜಿಕ ಅಸಮಾಧಾನವನ್ನು ಹಗುರವಾದ ಶೈಲಿಯಲ್ಲಿ ಹೇಳುವ ಮೂಲಕ ಯುವಕರನ್ನು ಸೆಳೆಯುತ್ತಿದೆ.
ಇನ್‌ಸ್ಟಾಗ್ರಾಮ್ (Instagram) , ಎಕ್ಸ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಇದರ ಫಾಲೋವರ್ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ.
ಈ ಟ್ರೆಂಡ್ ಹೆಚ್ಚು ಚರ್ಚೆಗೆ ಕಾರಣವಾದದ್ದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (Suryakant) ಅವರ ಹೇಳಿಕೆಯ ಬಳಿಕ. ಕೆಲವು ಯುವಕರ ಕುರಿತು ನೀಡಿದ
ಹೇಳಿಕೆಯನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದರು. ಬಳಿಕ ಮೀಮ್ಸ್, ಟ್ರೋಲ್‌ಗಳು ಹಾಗೂ ವ್ಯಂಗ್ಯ ಪೋಸ್ಟ್‌ಗಳು ಹರಿದಾಡಲಾರಂಭಿಸಿತು.
ಇದೇ ವೇಳೆ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janata Party) ಎಂಬ ಹೆಸರಿನ ಖಾತೆ ವೈರಲ್ ಆಯಿತು. ಯುವಕರ ಬೇಸರ, ನಿರುದ್ಯೋಗ ಹಾಗೂ ರಾಜಕೀಯ ಅಸಮಾಧಾನವನ್ನು ವ್ಯಂಗ್ಯಭರಿತವಾಗಿ ವ್ಯಕ್ತಪಡಿಸುವ ಮೂಲಕ ಈ ಪೇಜ್ ಜನರ ಗಮನ ಸೆಳೆಯಿತು. ಅದರ ಹಾಸ್ಯಭರಿತ ಪೋಸ್ಟ್‌ಗಳು ಕೆಲವೇ ಸಮಯದಲ್ಲಿ ಲಕ್ಷಾಂತರ ಜನರಿಗೆ ತಲುಪಿದವು.
ಕಾಕ್ರೋಚ್ ಜನತಾ ಪಾರ್ಟಿ ತನ್ನನ್ನು ರಾಜಕೀಯ ಪಕ್ಷವೆಂದು ಪ್ರಚಾರ ಮಾಡುತ್ತಿದ್ದರೂ, ಇದರ ಪ್ರಮುಖ ಉದ್ದೇಶ ರಾಜಕೀಯ ವ್ಯಂಗ್ಯ ಮತ್ತು ಸಾಮಾಜಿಕ ವಿಚಾರಗಳ ಬಗ್ಗೆ ಚರ್ಚೆ ಹುಟ್ಟುಹಾಕುವುದಾಗಿದೆ. ಸದಸ್ಯತ್ವಕ್ಕಾಗಿ ಇವರು ನೀಡಿರುವ ಷರತ್ತುಗಳೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗಿವೆ.
“ಸದಸ್ಯರಾಗಲು ನಿರುದ್ಯೋಗಿಯಾಗಿರಬೇಕು”, “ದಿನಕ್ಕೆ ಕನಿಷ್ಠ 11 ಗಂಟೆ ಆನ್‌ಲೈನ್‌ನಲ್ಲಿ ಇರಬೇಕು” ಎಂಬ ಹಾಸ್ಯಮಯ ನಿಯಮಗಳನ್ನು ಹಾಕಲಾಗಿದೆ. ಈ ರೀತಿಯ ವ್ಯಂಗ್ಯಭರಿತ ವಿಷಯಗಳು ಯುವಜನರಲ್ಲಿ ತಕ್ಷಣವೇ ಸಂಪರ್ಕ ಸಾಧಿಸಿವೆ.
ರಾಜಕೀಯದ ಗಂಭೀರ ವಿಚಾರಗಳನ್ನು ಸರಳ ಹಾಗೂ ಮನರಂಜನಾತ್ಮಕವಾಗಿ ಹೇಳುವ ಶೈಲಿ ಇದರ ಜನಪ್ರಿಯತೆಯನ್ನು ಹೆಚ್ಚಿಸಿದೆ.
ಈ ಟ್ರೆಂಡ್‌ನ ಹಿಂದಿರುವ ವ್ಯಕ್ತಿ ಅಭಿಜೀತ್ ದೀಪ್ಕೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಮೂಲದ ಅಭಿಜೀತ್ (Abhijeet) ರಾಜಕೀಯ ಸಂವಹನ ತಂತ್ರಜ್ಞರಾಗಿ ಪರಿಚಿತರಾಗಿದ್ದಾರೆ.
ಪತ್ರಿಕೋದ್ಯಮದಲ್ಲಿ ಅಧ್ಯಯನ ಮಾಡಿದ ಬಳಿಕ ಅವರು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ಕ್ಯಾಂಪೈನ್‌ಗಳನ್ನು ನಿರ್ವಹಿಸುವ ಅನುಭವವೂ ಅವರಿಗೆ ಇದೆ. ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಹಾಗೂ ಕ್ರಿಯೇಟಿವ್ ಕ್ಯಾಂಪೈನ್‌ಗಳ (Creative Campaign) ಮೂಲಕ ಗಮನ ಸೆಳೆದಿದ್ದರು. ಇದೀಗ ಯುವಕರ ಮನಸ್ಥಿತಿಯನ್ನು ಹಾಸ್ಯಮಯವಾಗಿ ತೋರಿಸುವ ಪ್ರಯತ್ನದಿಂದ ಮತ್ತೆ ಸುದ್ದಿಯಾಗಿದ್ದಾರೆ.
ಇದರ ಜೊತೆಗೆ ಕಾಕ್ರೋಚ್ ಜನತಾ ಪಾರ್ಟಿ ತನ್ನದೇ ಆದ ‘ಪ್ರಣಾಳಿಕೆ’ಯನ್ನೂ ಪ್ರಕಟಿಸಿದೆ. ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಪ್ರತಿನಿಧಿತ್ವ, ಪಕ್ಷಾಂತರ ರಾಜಕೀಯಕ್ಕೆ
ಕಟ್ಟುನಿಟ್ಟಿನ ನಿಯಮ, ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಸೇರಿದಂತೆ ಹಲವು ವಿಚಾರಗಳನ್ನು ವ್ಯಂಗ್ಯಮಯ ಶೈಲಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ. ಕೆಲವರು ಇದನ್ನು ಕೇವಲ ಮನರಂಜನೆಯ ಟ್ರೆಂಡ್ (Trend) ಎಂದು ನೋಡುವಾಗ, ಇನ್ನೂ ಕೆಲವರು ಯುವಕರ ಅಸಮಾಧಾನದ ಪ್ರತಿಬಿಂಬ ಎಂದು ವಿಶ್ಲೇಷಿಸುತ್ತಿದ್ದಾರೆ.
ಒಟ್ಟಾರೆ, ‘ಕಾಕ್ರೋಚ್ ಜನತಾ ಪಾರ್ಟಿ’ ಈಗ ಸಾಮಾನ್ಯ ಮೀಮ್ ಪೇಜ್‌ಗಿಂತ ಹೆಚ್ಚಾಗಿ ಯುವಜನರ ಡಿಜಿಟಲ್ ಅಭಿವ್ಯಕ್ತಿಯ ವೇದಿಕೆಯಾಗುತ್ತಿದೆ.
ಇದನ್ನು ಓದಿ : https://vijayatimes.com/new-opportunity-for-investors/
