download app

FOLLOW US ON >

Monday, August 8, 2022
Breaking News
ನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!
English English Kannada Kannada

ಕೋಕಂನಲ್ಲಿದೆ ಅದ್ಭುತ ಆರೋಗ್ಯ

ಪುನರ್ಪುಳಿ ಕರಾವಳಿ,  ಮಲೆನಾಡು, ಕೇರಳ, ಮಹಾರಾಷ್ಟ್ರ  ಮುಂತಾದ ದೇಶದ ಹಲವಾರು ಕಡೆ ಬೆಳೆಯುತ್ತಾರೆ. ಪುನರ್ಪುಳಿಗೆ ಕೋಕಂ ಎಂದೂ ಕರೆಯುತ್ತಾರೆ. ಕೋಕಂನಲ್ಲಿ ವಿಶೇಷವಾದ ಆರೋಗ್ಯಯುತ ಗುಣಗಳಿವೆ ಇದು ಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ವಿಟಮಿನ್-ಬಿ, ಸಿ  ಮತ್ತು ಪೊಟಾಶಿಯಂ, ಮೆಗ್ನೇಶಿಯಂ ಮೊದಲಾದ ಖನಿಜಾಂಶಗಳು ಇವೆ. ಪುನರ್ಪುಳಿಯನ್ನು ಹಣ್ಣಾದ ಬಳಿಕ ಕೊಯ್ದು ಅದರ ಒಳಗಿರುವ ಬೀಜ ಸಮೇತ ಹಣ್ಣನ್ನು ಸೇವಿಸಿ, ಸಿಪ್ಪೆಯನ್ನು ಒಣಗಿಸಿ ವರ್ಷಾನುಗಟ್ಟಲೆ ಇಟ್ಟುಕೊಂಡು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ಕರಾವಳಿ ಭಾಗದಲ್ಲಿ ಇದರಲ್ಲಿ ಜ್ಯೂಸ್ ಮಾತ್ರವಲ್ಲದೆ, ಚಟ್ನಿ, ಸಾರು ಹೀಗೆ ವಿವಿಧ ಬಗೆಯ ಪದಾರ್ಥಗಳನ್ನು ಮಾಡಲು ಉಪಯೋಗಿಸುತ್ತಾರೆ. ಇದು ರುಚಿಯಲ್ಲಿ ಹುಳಿಯಾದುದರಿಂದ ಸಾಂಬಾರುಗಳಿಗೆ ಹುಳಿಯ ಬದಲಿಗೆ ಉಪಯೋಗಿಸಲು ಯೋಗ್ಯವಾಗಿದೆ.

ಪುನರ್ಪುಳಿಯ ವಿಶೇಷವಾಗಿ ಬೇಸಿಗೆಯಲ್ಲಿ ಜ್ಯೂಸ್ ಮಾಡಿ ಕುಡಿಯುವುದರಿಂದ ಅನೇಕ ಆರೋಗ್ಯ ಲಾಭಗಳು ಸಿಗುತ್ತವೆ. ಒಣಗಿಸಿಟ್ಟ  ಕೋಕಂ ಸಿಪ್ಪೆಯನ್ನು ನೀರಲ್ಲಿ ನೆನೆಸಿಟ್ಟು, ಕೆಂಪು ಬಣ್ಣವನ್ನು ಬಿಟ್ಟ ನಂತರ ಜ್ಯೂಸ್ ಮಾಡಬೇಕು. ನೆನೆಸಿಟ್ಟ ಪುನರ್ಪುಳಿಯ ನೀರನ್ನು ಬಸಿದು ಆ ನೀರಿಗೆ ಚಿಟಿಕೆ ಕಾಳುಮೆಣಸಿನ ಪುಡಿ, ಏಲಕ್ಕಿ ಪುಡಿ, ಸಕ್ಕರೆ ಹಾಕಿ ಜ್ಯೂಸ್ ಮಾಡಿ ಪ್ರಿಜ್‌ನಲ್ಲಿಟ್ಟು ಬಳಿಕ ಕುಡಿದರೆ ದೇಹ ತಂಪಾಗುವುದು. ಹುಳಿ ಜಾಸ್ತಿಯಾದರೆ, ಸ್ವಲ್ಪ ನೀರನ್ನು ಸೇರಿಸಿಕೊಂಡು ಕುಡಿಯಲು ಹದವಾಗಿ ಇರುವಂತೆ ಜ್ಯೂಸ್ ತಯಾರಿಸಬೇಕು.

 ದೇಹದಲ್ಲಿ ಪಿತ್ತ ಹೆಚ್ಚಾದರೆ ತಲೆ ತಿರುಗುವುದು, ಮೈ ತುರಿಕೆಯಾಗುವುದು,  ವಾಕರಿಕೆ ಬರುವುದು, ಮೈ ಮೇಲೆಲ್ಲಾ ದದ್ದು ಬರುವುದು, ನಿದ್ದೆ ಕಡಿಮೆಯಾಗುವುದು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಈ ಎಲ್ಲಾ ತೊಂದರೆಗಳಿಗೆ ಬಹಳ ಉತ್ತಮ ಮನೆ ಮದ್ದೆಂದರೆ ಅದು ಪುನರ್ಪುಳಿ ಜ್ಯೂಸ್. ವೈದ್ಯರ ಚಿಕಿತ್ಸೆಯಿಂದ ಗುಣವಾಗದೇ ಇರುವ ಪಿತ್ತದೋಷಗಳಿಗೆ ಈ ಜ್ಯೂಸ್ ಉತ್ತಮ ಮನೆಮದ್ದಾಗಿದೆ ಎಂದರೆ ತಪ್ಪಾಗಲಾರದು. ಪಿತ್ತ ಜಾಸ್ತಿಯಾದಾಗ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.  ಅತಿಯಾದ ಆಮ್ಲೀಯತೆಯಿಂದಾಗಿ ಹುಳಿತೇಗು ಬರುತ್ತಿದ್ದರೆ, ಇದರ ಜ್ಯೂಸ್ ಮಾಡಿ ಕುಡಿಯಬೇಕು ಆಮ್ಲೀಯತೆಯನ್ನು ತಗ್ಗಿಸಿ ಜೀರ್ಣಶಕ್ತಿಯನ್ನು ಸರಾಗಗೊಳಿಸುತ್ತದೆ. ಅಲ್ಲದೇ ದೇಹದ ಬೊಜ್ಜನ್ನು ಕರಗಿಸಲು ಇದು ಉತ್ತಮ ಮನೆಮದ್ದಾಗಿದೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article