• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ: ನೆನಪಿನಂಗಳಕ್ಕೆ ಸರಿದ ವಿಶ್ವದ ಕ್ರೀಡಾಹಬ್ಬ

Sharadhi by Sharadhi
in Sports, ದೇಶ-ವಿದೇಶ, ಪ್ರಮುಖ ಸುದ್ದಿ
ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ: ನೆನಪಿನಂಗಳಕ್ಕೆ ಸರಿದ ವಿಶ್ವದ ಕ್ರೀಡಾಹಬ್ಬ
0
SHARES
0
VIEWS
Share on FacebookShare on Twitter

ಟೋಕಿಯೋ, ಆ. 09: ವಿಶ್ವದ ಗಮನ ಸೆಳೆದಿದ್ದ ಸೋಲು-ಗೆಲುವು, ನೋವು-ನಲಿವು‌ಗಳ ವೇದಿಕೆ ಆಗಿದ್ದ ಕ್ರೀಡಾ ಜಗತ್ತಿನ ದೊಡ್ಡ ಕ್ರೀಡಾಹಬ್ಬ ಟೋಕಿಯೋ ಒಲಿಂಪಿಕ್ಸ್‌ಗೆ ವರ್ಣರಂಜಿತ ತೆರೆ ಬಿದ್ದಿದೆ.

ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು ಸಮಾಗಮದಲ್ಲಿ ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಜುಲೈ 23ರಿಂದ ಆಗಸ್ಟ್ 8ರವರೆಗೆ 16 ದಿನಗಳ ಕಾಲ ನಡೆದ ಒಲಂಪಿಕ್ಸ್ ಕ್ರೀಡಾಕೂಟ ಸಮಾಪ್ತಿಗೊಂಡಿತು. ಪ್ರತಿ ಒಲಂಪಿಕ್ಸ್ ನಂತೆ ಈ ಬಾರಿ ಸಹ ಅನೇಕ ವಿಶ್ವದಾಖಲೆಗಳು ಮತ್ತು ಚಾರಿತ್ರಿಕ ಸಾಧನೆಗಳಿಗೆ ಸಾಕ್ಷಿಯಾಯಿತು.

ಆಸ್ಟ್ರೇಲಿಯಾದ ಮತ್ಸ್ಯ ಕನ್ಯೆ ಎಮ್ಮಾ ಮ್ಯಾಕ್ಸೋಂನ್ ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಒಟ್ಟು 7 ಪದಕಗಳನ್ನು ಗಳಿಸಿ ಹೊಸ ವಿಶ್ವದಾಖಲೆ ಸೃಷ್ಟಿಸಿದರೆ. ಭಾರತದ ಚಿನ್ನದಂಥ ಮಗ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಬಂಗಾರದ ಉಡುಗೊರೆ ನೀಡಿ ಐತಿಹಾಸಿಕ ದಾಖಲೆ ಬರೆದರು. ಹಿಂದಿನ ಒಲಿಂಪಿಕ್ಸ್ ಕ್ರೀಡಾಕೂಟಗಳಿಗೆ ಹೋಲಿಸಿದಲ್ಲಿ ಭಾರತದ ಸಾಧನೆ ಗಮನಾರ್ಹವಾಗಿತ್ತು. ಇದೇ ಮೊದಲ ಬಾರಿಗೆ ಭಾರತ 7 ಪದಕಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದೆ.

ವೇಟ್ ಲಿಫ್ಟರ್ ಮೀರಾಬಾಯಿ ಚಾನು ಹಾಗೂ ಕುಸ್ತಿ ಪಟು ರವಿಕುಮಾರ್ ದಹಿಯಾ ಬೆಳ್ಳಿ ಪದಕ ಪಡೆದು ಮಿಂಚಿದರೆ. ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ಬಾಕ್ಸರ್ ಲವ್ಲೀನಾ ಬೋರ್ಗೆಹೈನ್, ಪುರುಷರ ಹಾಕಿ ತಂಡ ಮತ್ತು ಕುಸ್ತಿಪಟು ಭಜರಂಗ್ ಪುನಿಯಾ ದೇಶಕ್ಕೆ ಕಂಚಿನ ಪದಕ ದಕ್ಕಿಸಿಕೊಟ್ಟು ಗಮನಸೆಳೆದರು.

ನಾಲ್ಕು ದಶಕಗಳ ಬಳಿಕ ಪುರುಷರ ಹಾಕಿ ತಂಡದ ಸಾಧನೆ ಪುನರಾವರ್ತನೆ ಮಾಡುವಲ್ಲಿ ವಿಫಲರಾದ ಭಾರತ ವನಿತೆಯರ ವಿರೋಚಿತ ಸೋಲು ಕಂಡರೂ ಉತ್ತಮ ಪ್ರದರ್ಶನದೊಂದಿಗೆ ದೇಶದ ಮೆಚ್ಚುಗೆಗೆ ಪಾತ್ರವಾದರು. ಮಹಿಳೆಯರ ಗಾಲ್ಛ್ ಪಂದ್ಯದಲ್ಲಿ ಬೆಂಗಳೂರಿನ ಹುಡುಗಿ ಅದಿತಿ ಅಶೋಕ್, ಕಂಚಿನ ಪದಕದಿಂದ ವಂಚಿತರಾಗಿ 4ನೇ ಸ್ಥಾನ ಗಳಿಸಿದ್ದು ಕೂಡ ಅಮೋಘ ಸಾಧನೆಯೇ. ಈ ಸ್ಥಾನಕ್ಕೇರಿದ ಭಾರತದ ಪ್ರಥಮ ಮಹಿಳಾ ಗಾಲ್ಛರ್ ಎಂಬ ಹೆಗ್ಗಳಿಕೆಗೆ ಅದಿತಿ ಪಾತ್ರರಾದರು.

ಈ ಬಾರಿ ಪದಕ ಪಟ್ಟಿಯಲ್ಲಿ ಅತಿ ಹೆಚ್ಚು ಬಂಗಾರದ ಪದಕಗಳನ್ನು ಗೆಲ್ಲುವುದರೊಂದಿಗೆ ಅಮೆರಿಕ ಅಗ್ರಸ್ಥಾನದಲ್ಲಿದೆ. ಚೀನಾ, ಜಪಾನ್, ಬ್ರಿಟನ್ ಮತ್ತು ರಷ್ಯಾ ನಂತರದ ಸ್ಥಾನಗಳಲ್ಲಿದೆ. ಜುಲೈ 23ರಂದು ಜಪಾನ್ ಚಕ್ರವರ್ತಿ ನರುಹೀಟೋ ಚಾಲನೆ ನೀಡಿದರು. ಒಟ್ಟು 208 ದೇಶಗಳು ಪ್ರತಿನಿಧಿನಿಧಿಸಿದ್ದ ಟೋಕಿಯೋ ಒಲಿಂಪಿಕ್‌ನಲ್ಲಿ 33 ಕ್ರೀಡೆಗಳು ನಡೆದು ಒಟ್ಟು 15,400 ಸ್ಪರ್ಧಿಗಳು ಪದಕಗಳಿಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಭಾರತದ 127 ಕ್ರೀಡಾಪಟುಗಳು ತಮ್ಮ ಶಕ್ತಿ-ಸಾಮರ್ಥ್ಯವನ್ನು ಪಣಕ್ಕೊಡ್ಡಿದ್ದರು.

ಈ ಸಮಾರಂಭದಲ್ಲಿ ಕ್ರೀಡಾ ಧ್ವಜವನ್ನು 2024ರ ಒಲಿಂಪಿಕ್ಸ್ ಕ್ರೀಡಾಕೂಟದ ಅತಿಥ್ಯ ವಹಿಸುವ ಫ್ರಾನ್ಸ್‌ಗೆ ನೀಡಲಾಯಿತು. ಇದೇ ತಿಂಗಳು 28ರಿಂದ ಆರಂಭವಾಗಲಿರುವ ಪ್ಯಾರಾಂಪಿಕ್ಸ್‌ಗೂ ಟೋಕಿಯೋ ಅತಿಥ್ಯ ವಹಿಸಲಿದ್ದು, ಭಾರತದ ಸ್ಪರ್ಧಿಗಳೂ ಸಹ ಪದಕಗಳಿಗೆ ಸೆಣಸಲಿದ್ದಾರೆ.

Related News

2,000 ರೂಪಾಯಿ ನೋಟುಗಳನ್ನು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಸ್ವೀಕರಿಸುತ್ತೇವೆ : ಕೆಎಸ್‌ಆರ್‌ಟಿಸಿ ಸ್ಪಷ್ಟನೆ
Vijaya Time

2,000 ರೂಪಾಯಿ ನೋಟುಗಳನ್ನು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಸ್ವೀಕರಿಸುತ್ತೇವೆ : ಕೆಎಸ್‌ಆರ್‌ಟಿಸಿ ಸ್ಪಷ್ಟನೆ

May 29, 2023
ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ
Vijaya Time

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

May 29, 2023
ಮನುವಾದಿಗಳ ಹಿಜಾಬು ಬ್ಯಾನ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿಸಿತ್ತು : ನಟ ಕಿಶೋರ್
Vijaya Time

ಮನುವಾದಿಗಳ ಹಿಜಾಬು ಬ್ಯಾನ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿಸಿತ್ತು : ನಟ ಕಿಶೋರ್

May 29, 2023
ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌
Vijaya Time

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌

May 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.