Visit Channel

ವಾಣಿಜ್ಯ ಎಲ್‍ಪಿಜಿ ಬೆಲೆಯಲ್ಲಿ ದಿಢೀರ್ 102.50 ರೂ. ಏರಿಕೆ ; ಹೋಟೆಲ್ ಆಹಾರ ದರಪಟ್ಟಿ ಮತ್ತೆ ಬದಲಾಗಲಿದೆ!

lpg

ಕೇಂದ್ರ ಸರ್ಕಾರ(Central Government) ಕಳೆದ ಬಾರಿಯೂ ಕೂಡ ಇದೇ ರೀತಿ ದಿಢೀರ್ ವಾಣಿಜ್ಯ(Commercial) ಗ್ಯಾಸ್ ಸಿಲಿಂಡರ್(Gas Cylinder) ಬೆಲೆಯಲ್ಲಿ 250 ರೂ. ಹೆಚ್ಚಳ ಮಾಡಿತ್ತು.

commercial

ಅದರಂತೆಯೇ ಈಗ ಮತ್ತೊಮ್ಮೆ ಹೋಟೆಲ್ ಮಾಲೀಕರು ಸೇರಿದಂತೆ ವಾಣಿಜ್ಯ ಗ್ಯಾಸ್ ಬಳಕೆದಾರರಿಗೆ 102.50 ರೂ. ಹೆಚ್ಚಳ ಮಾಡುವ ಮುಖೇನ ಗ್ರಾಹಕರು ತಲೆಮೇಲೆ ಕೈಹೊತ್ತು ಕೂರುವಂತೆ ಮಾಡಿದೆ! ಮೇ 1ರ ಭಾನುವಾರದಂದು 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 102.50 ರೂ.ಗಳಷ್ಟು ದಿಢೀರ್ ಹೆಚ್ಚಳ ಮಾಡಲಾಗಿದೆ. ಈ ಹಿಂದೆ 2253 ರೂ.ಗಳಷ್ಟಿದ್ದ ವಾಣಿಜ್ಯ ಸಿಲಿಂಡರ್ ಈಗ 2355.50 ರೂ. ಇದಕ್ಕೂ ಮುನ್ನ ಏಪ್ರಿಲ್ 1 ರಂದು 19 ಕೆ.ಜಿ ವಾಣಿಜ್ಯ ಎಲ್‌ಪಿಜಿಯ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 250 ರೂ ಹೆಚ್ಚಿಸಿ 2,253 ರೂ. ಮಾರ್ಚ್ 1 ರಂದು, ವಾಣಿಜ್ಯ ಎಲ್ಪಿಜಿ 105 ರೂ. ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 949.50 ರೂ. ಆದ್ರೆ, ಕೆಲವೆಡೆ ಸಿಲಿಂಡರ್ 1,000 ರೂ. ಬೆಲೆ ನಿಗದಿಯಾಗಿ ಮುಂದುವರೆಯುತ್ತಿದೆ. ಈ ಮಧ್ಯೆ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಉಜ್ವಲ ದಿವಸ್ ಆಚರಿಸಲು ದೇಶಾದ್ಯಂತ 5,000 ಎಲ್ಪಿಜಿ ಪಂಚಾಯತ್ಗಳನ್ನು ಆಯೋಜಿಸುತ್ತಿವೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

gas price

ದೇಶದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ ಮಾಡಿ ಅರಗಿಸಿಕೊಳ್ಳಲಾಗದಂತೆ ಮಾಡಿದೆ! ಈ ನಡುವೆಯೇ ಮತ್ತೊಮ್ಮೆ ವಾಣಿಜ್ಯ ಎಲ್ಪಿಜಿ ಗ್ಯಾಸ್ ಬೆಲೆಯಲ್ಲಿ ದಿಢೀರ್ ಏರಿಕೆ ಮಾಡಿರುವುದು ಜನರಿಗೆ ಆರದ ಗಾಯದ ಮೇಲೆ ಚಾವಟಿ ಬೀಸಿದಂತಾಗಿದೆ ಎಂದೇ ಹೇಳಬಹುದು. ಇದು ಹೀಗೆ ಮುಂದುವರಿದರೆ ಮುಂದಿನ ಪರಿಸ್ಥಿತಿ ಊಹಿಸಿಕೊಳ್ಳುವುದು ಅಸಾಧ್ಯ!

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.