Bengaluru, ಆಗಸ್ಟ್ 11: ಕಾಂಗ್ರೆಸ್ (Congress)ಸರ್ಕಾರ ಈಗಾಗಲೇ ಕೊಟ್ಟ ಮಾತಿನಂತೆ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ (commission scam judicial probe) ನೇತೃತ್ವದಲ್ಲಿ ಬಿಜೆಪಿ
ಸರ್ಕಾರದ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ,ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಶುಕ್ರವಾರ ಹೇಳಿದರು.
ಈ ಕುರಿತು ಸಿದ್ದರಾಮಯ್ಯನವರು ಸರಣಿ ಟ್ವೀಟ್(Tweet) ಮಾಡಿ ಮಾಹಿತಿ ನೀಡಿದ್ದಾರೆ. ಇಂದು ನಗರದಲ್ಲಿ 40% ಕಮಿಷನ್ ಆರೋಪ ಬಿಜೆಪಿ(BJP) ವಿರುದ್ಧ ಮಾಡಿದ್ದ ಗುತ್ತಿಗೆದಾರರ ಸಂಘದಿಂದ
ಸುದ್ದಿಗೋಷ್ಠಿ ಇದೆ. ಇದಕ್ಕು ಮೊದಲೇ ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಅವರು ಬಿಜೆಪಿಯ 40% ಕಮಿಷನ್ ಹಗರಣದ ಪ್ರಕರಣವನ್ನು ವಹಿಸಿದ್ದಾರೆ.
ವಿಧಾನಸಭಾ ಚುನಾವಣೆಯ(Election) ಸಂದರ್ಭದಲ್ಲಿ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಕಾಂಗ್ರೆಸ್ ಪಕ್ಷ ಬಂದರೆ ಈ ಮೊದಲು ಇದ್ದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಗರಣಗಳನ್ನು ತನಿಖೆ ಮಾಡುವ
ಭರವಸೆಯನ್ನು ಜನರಿಗೆ ನೀಡಿದ್ದೇನೆ. ಅದರಂತೆ ಬಿಜೆಪಿಯ ಭ್ರಷ್ಟಾಚಾರ, ಕಮಿಷನ್ ಹಾವಳಿ, ತೆರಿಗೆ ಲೂಟಿಯ ವಿರುದ್ಧ ಮತ ಚಲಾಯಿಸಿ ನಾಡಿನ ಮತದಾರರು ನಮ್ಮ ಮಾತಿನ ಮೇಲೆ ನಂಬಿಕೆಯಿಟ್ಟು
ನಮ್ಮ ಅಭ್ಯರ್ಥಿಗಳನ್ನು 135 ಸ್ಥಾನಗಳಲ್ಲಿ ಗೆಲ್ಲಿಸಿ ಸುಭದ್ರ, ಸುಸ್ಥಿರ ಸರ್ಕಾರ ರಚನೆಗೆ (commission scam judicial probe) ಅವಕಾಶ ನೀಡಲಾಗಿದೆ.

ಮೊದಲೇ ಬಿಜೆಪಿ ಹಗರಣ ತನಿಖೆಗೆ ಬಗ್ಗೆ ಹೇಳಿದ್ದ ಕಾಂಗ್ರೆಸ್ಇದೀಗ ಜನರಿಗೆ ನೀಡಿದ್ದ ವಚನ ಪಾಲನೆಯನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಹಾಗಾಗಿ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ
ನೇತೃತ್ವದಲ್ಲಿ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ ಎಂದು ತಿಳಿಸಿದರು. ಈ ಹಿಂದೆ ಸರ್ಕಾರವು ಬಿಟ್ ಕಾಯಿನ್(Bit Coin) ಹಗರಣ, ಪಿಎಸ್ಐ
(PSI) ಹಗರಣ, ಚಾಮರಾನಗರ(Chamarajanagara) ಆಕ್ಸಿಜನ್ (Oxygen)ದುರಂತ ಸೇರಿದಂತೆ ಕೋವಿಡ್ (Covid) ಹಗರಣಗಳ ತನಿಖೆಗೆ ನೀಡುವುದಾಗಿ ಸರ್ಕಾರ ತಿಳಿಸಿತ್ತು.
ಇದನ್ನೂ ಓದಿ : 2025-26ನೇ ಸಾಲಿನಿಂದ 1ನೇ ತರಗತಿ ಪ್ರವೇಶ ಪಡೆಯಲು ಮಗುವಿಗೆ 6 ವರ್ಷ ಕಡ್ಡಾಯ; ಹೈಕೋರ್ಟ್
ಬಿಜೆಪಿ ಸರ್ಕಾರದಲ್ಲಿ ಕಾಮಗಾರಿಯನ್ನೇ ನಡೆಸದೇ,ಇನ್ನು ಕೆಲವು ಕಡೆ ಅರ್ಧಂಬರ್ದ ಕೆಲಸ ಮಾಡಿ ಹಾಗೂ ಇನ್ನೂ ಕೆಲವೆಡೆ ಹಳೆಯ ಕಾಮಗಾರಿಗಳಿಗೆ ದಾಖಲೆ ಮಾಡಿ ಬಿಲ್ ಹಣ ಪಡೆಯಲಾಗಿದೆ.
ಎಲ್ಲಾ ನ್ಯಾಯಾಂಗ ಸಮಿತಿಯು ಈ ಹಗರಣಗಳ ಕುರಿತು ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದಲ್ಲಿ ತನಿಖೆ ನಡೆಸುತ್ತಿದೆ. ಈ ತನಿಖೆ ಪೂರ್ಣಗೊಂಡು ಅಸಲಿ ವಿಚಾರ ಬಯಲಾಗುವ ಮೊದಲೇ
ಬಾಕಿಯಿರುವ ಬಿಲ್ ಹಣವನ್ನು ಬಿಡುಗಡೆ ಮಾಡುವುದು ಸಮಂಜಸವಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

ಗುತ್ತಿಗೆದಾರರಿಗೆ ಅಭಯ ನೀಡಿದ ಸಿಎಂ
ನಮ್ಮ ಸರ್ಕಾರ ನ್ಯಾಯಯುತವಾಗಿ ಕಾಮಗಾರಿ ಮಾಡಿದ ಯಾವುದೇ ಗುತ್ತಿಗೆದಾರನಿಗೂ(Contractor) ಅನ್ಯಾಯವಾಗಲು ಬಿಡುವುದಿಲ್ಲ. ಗುತ್ತಿಗೆದಾರರಿಗೆ ಈ ಬಗ್ಗೆ ಭಯ ಬೇಡ..
ಆದರೆ ಉಪ್ಪು ತಿಂದವರು ನೀರು ಕುಡಿಯಬೇಕಲ್ಲವೇ?.
ಮಾಜಿ ಸಚಿವ ಆರ್. ಅಶೋಕ್(R Ashok) ಅವರು ನಮ್ಮ ಸರ್ಕಾರದ ವಿರುದ್ಧ 15% ಕಮಿಷನ್ ಆರೋಪ ಮಾಡಿದ್ದಾರೆ ಆದರೆ ಆ ಆರೋಪ ಸತ್ಯಕ್ಕೆ ದೂರವಾದದ್ದೇ. ಆದರೂ ಕೂಡ
40% ರಿಂದ 15% ಗೆ ಅವರ ಕಮಿಷನ್ ದರವನ್ನು ಇಳಿಸಿರುವುದು ಸಂತೋಷದ ವಿಷಯ.

ಪ್ರಧಾನಿ ಮೋದಿ ಕಾರ್ಯದಕ್ಷತೆ ಬಗ್ಗೆ ಬೊಮ್ಮಾಯಿ ಅವರಿಗೆ ನಂಬಿಕೆ ಇಲ್ಲ: ಸಿದ್ದರಾಮಯ್ಯ ಲೇವಡಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಈ ಬಗ್ಗೆ ಮಾತನಾಡಿ ಗುತ್ತಿಗೆದಾರರಿಗೆ ಬಾಕಿ ಬಿಲ್ ಅನ್ನು ರಾಜ್ಯ ಸರ್ಕಾರವು ಪಾವತಿ ಮಾಡುತ್ತಿಲ್ಲ,
ಹೀಗಾಗಿ ಬಿಲ್ ಹಣವನ್ನು ರಾಹುಲ್ ಗಾಂಧಿ(Rahul Gandhi) ಮಧ್ಯಪ್ರವೇಶಿಸಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ
ರಾಜ್ಯ ಸರ್ಕಾರಗಳಿಗೆ ಸೂಚನೆ, ನಿರ್ದೇಶನ ನೀಡುವ ಅಧಿಕಾರವಿರುವುದು. ಆದರೆ ಬಸವರಾಜ್ ಬೊಮ್ಮಾಯಿ ಅವರು ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿ ಅವರು ಮಾಡಬೇಕಾಗಿರುವ
ಕೆಲಸವನ್ನು ರಾಹುಲ್ ಗಾಂಧಿಯವರಿಗೆ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಇವೆಲ್ಲವನ್ನೂ ನೋಡಿದರೆ ಪ್ರಧಾನಿ ಮೋದಿ ಅವರ ಕಾರ್ಯದಕ್ಷತೆಯ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ
ನಂಬಿಕೆ ಇಲ್ಲ ಎಂದು ಅವರು ಲೇವಡಿ ಮಾಡಿದರು.
ಇದನ್ನೂ ಓದಿ : ಬ್ಯಾಂಕ್ ಸಾಲ ಪಡೆದವರಿಗೆ ಗುಡ್ನ್ಯೂಸ್ : ಆರ್ಬಿಐ ಸಿಹಿ ಸುದ್ದಿ ! ರೆಪೋ ದರದಲ್ಲಿ ಬದಲಾವಣೆ ಇಲ್ಲ, 6.5% ಮುಂದುವರಿಕೆ!
ಬಾಕಿ ಬಿಲ್ ಹಣ ಬಿಡುಗಡೆಗಾಗಿ ಮಧ್ಯಮ ಗುತ್ತಿಗೆದಾರರು ಹಾಗೂ ಕರ್ನಾಟಕ ಸಣ್ಣ ರಾಜ್ಯ ಮತ್ತು ಬಿಬಿಎಂಪಿ(BBMP) ಗುತ್ತಿಗೆದಾರರ ಸಂಘದವರು ನನ್ನೊಂದಿಗೆ ಚರ್ಚಿಸಿದ್ದಾರೆ, ಈಗಾಗಲೇ POW
ಕಾಮಗಾರಿಗಳ ಬಿಲ್ ಬಿಡುಗಡೆ ಮಾಡುವಂತೆ ಸೂಚನೆಯನ್ನು ಸಹ ನೀಡಲಾಗಿದೆ.

ಕೆಲವು ಸಾಮಾನ್ಯ ಪ್ರಕ್ರಿಯೆಗಳು ಕಾಮಗಾರಿಗಳ ಬಿಲ್ ಬಿಡುಗಡೆಗೆ ಬಾಕಿ ಇವೆ ಈ ಎಲ್ಲಾ ಕೆಲವು ಸಾಮಾನ್ಯ ಪ್ರಕ್ರಿಯೆಗಳು ಮುಗಿದ ಕೂಡಲೇ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
ಈ ನಡುವೆ ತಮ್ಮ ಸ್ವಾರ್ಥ ಹಾಗೂ ದುರುದ್ದೇಶದ ಯೋಜನೆಗಾಗಿ ಕೆಲವು ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಕಮಿಷನ್ (Commission) ಹಿಂದೆ ನಾವು ನಮ್ಮ ಸರ್ಕಾರ ಬೆನ್ನು ಬಿದ್ದವರಲ್ಲ, ಈ ಎಲ್ಲಾ ಕಮಿಷನ್ ಹಗರಣಗಳ ಹಿಂದೆ ಇರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ ಎಂದು ನಿರೂಪಿಸಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು?
ಎಂದು ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದರು.
ರಶ್ಮಿತಾ ಅನೀಶ್