- ಶಾಲಿನಿ ರಜನೀಶ್ ವಿರುದ್ಧ ಬಿಜೆಪಿ ನಾಯಕ ರವಿಕುಮಾರ್ ಅವಹೇಳನಕಾರಿ ಹೇಳಿಕೆ
- ರವಿಕುಮಾರ್ ವಿರುದ್ಧ ಸಭಾಪತಿಗೆ ದೂರು (Complaint against Ravikumar)
- ನಿಮ್ಮ ಮನೆಯ ಹೆಣ್ಣುಮಕ್ಕಳಿಗಾದರೆ ಈ ರೀತಿ ಭಾಷೆ ಬಳಸುತ್ತೀರಾ ಎಂದು ಕೇಳಿದ ರಾಮಲಿಂಗಾ ರೆಡ್ಡಿ
Bengaluru: ಬಿಜೆಪಿ ನಾಯಕರು ಗಳು ಮಹಿಳೆಯರ ಕುರಿತಾಗಿ ನಾಲಿಗೆ ಹರಿಬಿಟ್ಟ ಪ್ರಕರಣ ಹೆಚ್ಚಾಗುತ್ತಿದ್ದು
ಸದ್ಯ ರಾಜ್ಯ ರಾಜಕಾರಣದಲ್ಲಿ ಎಮ್‌ಎಲ್‌ಸಿ ರವಿಕುಮಾರ್ (MLC Ravikumar) ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಅವರ ವಿರುದ್ಧ ಆಕ್ಷೇಪಾರ್ಹ(objectionable) ಹೇಳಿಕೆ ನೀಡಿದ್ದಾರೆಂಬ ಆರೋಪ(Accusation) ಭಾರೀ ಚರ್ಚೆಗೆ ಕಾರಣವಾಗಿದೆ.
ಆದರೆ ರವಿಕುಮಾರ್ (Ravikumar) ವಿರುದ್ಧದ ಆರೋಪದ ಕುರಿತು ಸ್ವಪಕ್ಷೀಯರು ಕೂಡ ತುಟಿ ಬಿಚ್ಚುತ್ತಿಲ್ಲ. ಆದ್ರೆ, ಅವರ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ (Congress) ಬಿಜೆಪಿ(BJP) ಹಾಗೂ ರವಿಕುಮಾರ್ ವಿರುದ್ಧ ಮುಗಿಬಿದ್ದಿವೆ.
ಸದ್ಯ, ರವಿಕುಮಾರ್ ಹೇಳಿಕೆ ಕುರಿತು ಕಾಂಗ್ರೆಸ್ ಎಂಎಲ್‌ಸಿಗಳ (MLC) ನಿಯೋಗ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ(Basavaraja Horatti) ದೂರು ನೀಡಿದ್ದಾರೆ.

ಮಾತ್ರವಲ್ಲ, ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ರವಿಕುಮಾರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಇದೀಗ ಸಚಿವರುಗಳಾದ ರಾಮಲಿಂಗಾರೆಡ್ಡಿ(Ramalingareddy) ಹಾಗೂ ಸಂತೋಷ್ ಲಾಡ್ (Santhosh Lad) ಕೂಡ ರವಿಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಪೋಸ್ಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ರಾಮಲಿಂಗಾರೆಡ್ಡಿಯವರು, ಬಿಜೆಪಿಯವರ ಅಸಂಸ್ಕೃತಿ ಮತ್ತು
ಅನಾಚಾರದ ಹೇಳಿಕೆಗಳಿಗೆ ಮತ್ತೊಂದು ಸೇರ್ಪಡೆ,(Another statements) ನಾಚಿಕೆಗೇಡಿನ ವರ್ತನೆ, ಕೊಳಕು ಭಾಷಾ ಬಳಕೆಯ ಪುನರಾವರ್ತನೆ (Repetition) ಎಂದಿದ್ದಾರೆ .
ವಿಧಾನಪರಿಷತ್ ಸದಸ್ಯರಾದ ರವಿಕುಮಾರ್ ಕಲಬುರಗಿ ಜಿಲ್ಲಾಧಿಕಾರಿಗಳ ಕುರಿತು (Collectors) ಕೆಲವು ತಿಂಗಳುಗಳ ಹಿಂದೆಯಷ್ಟೇ ಅವಹೇಳನಕಾರಿಯಾಗಿ (Derogatory) ಮಾತನಾಡಿ, ಮಾನ್ಯ ನ್ಯಾಯಾಲಯವು ಛೀಮಾರಿ ಹಾಕಿದ ನಂತರ ಬೇಷರತ್ ಕ್ಷಮೆ ಕೇಳಿದ್ದರು.
ಮತ್ತೊಂದು ಪ್ರಕರಣದಲ್ಲಿ ಸಿ.ಟಿ.ರವಿ (C T Ravi) ಅವರು ಸದನದಲ್ಲಿ ಮಹಿಳಾ ಮಂತ್ರಿಯವರನ್ನು ಕುರಿತು ಆಡಿದ ಮಾತು ಅಸಹನೀಯ, ಸಂವೇದನಾರಹಿತ, ಸಮಾಜಕ್ಕೆ (society) ಆಘಾತಕಾರಿಯಾದ ನಡವಳಿಕೆಯಾಗಿತ್ತು.
ಈಗ ಮತ್ತೊಮ್ಮೆ ರವಿಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಕುರಿತ ಹೇಳಿಕೆ? ಸರ್ಕಾರವನ್ನು ನಡೆಸಲು ಶ್ರಮಿಸುವ ಮಹಿಳಾ ಅಧಿಕಾರಿ (female officer) ಅದರಲ್ಲೂ ಅತ್ಯುನ್ನತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವವರ ಬಗ್ಗೆ ಮಾತನಾಡುವಾಗ ಕನಿಷ್ಠ ಸೌಜನ್ಯವೂ ತೋರದೆ,
ತಮ್ಮ ಮನೆಯ ಹೆಣ್ಣುಮಕ್ಕಳಿಗಾದರೆ ಈ ರೀತಿ ಭಾಷೆ ಬಳಸುತ್ತೇವೆಯೇ ಎಂದು ಯೋಚಿಸುವ ಔದಾರ್ಯವೂ (Generosity) ಇಲ್ಲದ ಕೊಳಕು ಮನಸ್ಸಿನ ಮನುಷ್ಯ ಇವರು ಎಂದು ಕಿಡಿ ಕಾರಿದ್ದಾರೆ.
ಮಾತು ಮಾತಿಗೆ ಭಾರತ ಮಾತೆಗೆ ಜೈಕಾರ ಹಾಕುವ ಇವರು ಬೂಟಾಟಿಕೆಯವರು, ನಮ್ಮೊಡನೆ ಇರುವ ಹೆಣ್ಣುಮಕ್ಕಳನ್ನು ಗೌರವಿಸುವುದೇ (Respecting girls) ಭಾರತ ಮಾತೆಗೆ ನಾವು ಸಲ್ಲಿಸುವ ನಿಜವಾದ ಗೌರವ.
ಆದರೆ ಇದನ್ನು ಬಿ.ಜೆ.ಪಿ (BJP) ಅವರಿಂದ ನಿರೀಕ್ಷಿಸಬೇಡಿ, ನಾವು ಭಾಷಣಕ್ಕೆ ಮಾತ್ರ ಸೀಮಿತ ಎಂಬುದನ್ನು ಜಗತ್ತಿಗೆ ಸಾರಲು ಹೊರಟಿರುವ ಇಂತಹ ಮನಸ್ಥಿತಿಯ
ಇದನ್ನು ಓದಿ : ಶಾಲಿನಿ ರಜನೀಶ್ ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ: ರವಿಕುಮಾರ್ ವಿರುದ್ದ ದೂರು
ನಾಯಕರುಗಳಿಗೆ ನನ್ನ ಧಿಕ್ಕಾರ (Contempt) ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .(Complaint against Ravikumar)