Mumbai : ಬಾಳಾಸಾಹೆಬಂಚಿ ಶಿವಸೇನಾ ನಾಯಕಿ ವಂದನಾ ಡೋಂಗ್ರೆ(Complaint Registered Against Rahul) ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಸಾವರ್ಕರ್(Savarkar) ಅವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ರಾಹುಲ್ ಗಾಂಧಿ(Rahul Gandhi) ಹೇಳಿಕೆಯಿಂದ ಸ್ಥಳೀಯ ನಾಗರಿಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಮುಂಬೈನ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.
ಐಪಿಸಿಯ ಸೆಕ್ಷನ್ 500, 501ರ ಅಡಿಯಲ್ಲಿ ನಾನ್-ಕಾಗ್ನಿಜಬಲ್ (ಎನ್‌ಸಿಆರ್) ಅಪರಾಧದ ಪ್ರಕರಣವನ್ನು ದಾಖಲಿಸಲಾಗಿದೆ.
ಮಹಾರಾಷ್ಟ್ರದ ಅಕೋಲಾದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಗೆ ಕ್ಷಮೆಯಾಚಿಸುವ ಪತ್ರಕ್ಕೆ ಸಹಿ ಹಾಕುವ ಮೂಲಕ ಸಾವರ್ಕರ್ ಅವರು ಮಹಾತ್ಮ ಗಾಂಧಿ,
ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಅವರಂತಹ ನಾಯಕರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
ವೀರ ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಪತ್ರದಲ್ಲಿ “ಸರ್, ನಿಮ್ಮ ಅತ್ಯಂತ ವಿಧೇಯ ಸೇವಕರಾಗಿ ಉಳಿಯಲು ನಾನು ಬೇಡಿಕೊಳ್ಳುತ್ತೇನೆ” ಎಂದು ಸಹಿ ಹಾಕಿದ್ದರು.
ಅಂದು ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದರು. ಸಾವರ್ಕರ್ ಜೀ ಭಯದಿಂದ ಪತ್ರ ಬರೆದು ನೀಡಿದರು ಎಂದು ತಮ್ಮ ಕೈಯಲ್ಲಿದ್ದ ಪತ್ರದ ದಾಖಲೆಯನ್ನು ಪುರಾವೆಯಾಗಿ ತೋರಿಸಿ ಹೇಳಿದರು.
ಇದನ್ನೂ ಓದಿ : https://vijayatimes.com/rahul-allegation-over-savarkar/
ರಾಹುಲ್ ಗಾಂಧಿಯವರ ಈ ಹೇಳಿಕೆಯ ಬೆನ್ನಲ್ಲೇ, ಮಹಿಳಾ ಅಘಾಡಿ ಮುಖ್ಯಸ್ಥೆಯೂ ಆಗಿರುವ ಬಾಳಾಸಾಹೆಬಂಚಿ ಶಿವಸೇನೆ.
ನಾಯಕಿ ವಂದನಾ ರಾಹುಲ್ ವಿರುದ್ಧ ದೂರು ನೀಡುವ ಮುನ್ನ, ನಮ್ಮ ಮಹಾಪುರುಷರಿಗೆ ಮಾಡಿರುವ ಮಾನಹಾನಿಯನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯ(Bharat Jodo Yatra) ವೇಳೆ ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್.
ಅವರ ಮಾನಹಾನಿ ಮಾಡುವ ಹೇಳಿಕೆ ನೀಡಿದ್ದರು ಮತ್ತು ಇದರಿಂದಾಗಿ ಸ್ಥಳೀಯ ನಾಗರಿಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದ ವಂದನಾ ಡೋಂಗ್ರೆ,
ಮಹಾರಾಷ್ಟ್ರದ ನೆಲದಲ್ಲಿ ನಮ್ಮ ಮಹಾಪುರುಷರ ಮಾನಹಾನಿಯನ್ನು ನಾವು ಸಹಿಸುವುದಿಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಯನ್ನು ವಿರೋಧಿಸಿ ಬಾಳಾಸಾಹೇಬ್ ಅವರ ಶಿವಸೇನೆ ಪಕ್ಷವು ಗುರುವಾರ ಥಾಣೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಕೂಡ ನಡೆಸಿತು.
ಇದನ್ನೂ ಓದಿ : https://vijayatimes.com/ghee-benefits-for-winter/
ಬಾಳಾಸಾಹೇಬ್ ಅವರ ಶಿವಸೇನೆ ಪಕ್ಷದ ವಕ್ತಾರ ಮತ್ತು ಮಹಾರಾಷ್ಟ್ರ ರಾಜ್ಯ ಸಂಯೋಜಕ ನರೇಶ್ ಮ್ಹಾಸ್ಕೆ ಅವರು ನಿನ್ನೆ ನಡೆದ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ ಅವರ ಹೇಳಿಕೆಗಾಗಿ ಪೊಲೀಸರು ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.