ಮಕ್ಕಳು ಡ್ರಗ್ಸ್ ಅಡಿಕ್ಷನ್ಗೆ ಪೊಲೀಸರಿಗೆ ಪೋಷಕರಿಂದ ದೂರು
ಮಂಗಳೂರಿನ ಸೆನ್ ಕ್ರೈಮ್ ಠಾಣೆಗೆ ದಾಖಲಾಗಿದ್ದ ಪ್ರಕರಣ (Complaints against children)
ನೂರಾರು ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲ
ಮಂಗಳೂರು: ಮಕ್ಕಳು ಡ್ರಗ್ಸ್ ಅಡಿಕ್ಷನ್ಗೆ ಒಳಗಾಗಿದ್ದಾರೆ ಎಂದು ಮಂಗಳೂರಿನ(Mangalore) ಸೈಬರ್ ಕ್ರೈಮ್ ಠಾಣೆಗೆ(Cyber Crime Station) ಪೋಷಕರೇ ದೂರು ಕೋಟ್ಟಿದ್ದಾರೆ.
ಇದರ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆಯನ್ನೂ ನಡೆಸಿ ಮಕ್ಕಳಿಗೆ ಡ್ರಗ್ಸ್(drugs) ಪೂರೈಕೆ ಮಾಡುತ್ತಿದ್ದ ಜಾಲವನ್ನೇ ಬೇಧಿಸಿದ್ದಾರೆ.
ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ ಡ್ರಗ್ಸ್ ಜಾಲದ(Drug network) ವಿಷಯ ಕೇಳಿ ಬರುತ್ತಲೇ ಇತ್ತು,
ಇದೀಗ ಪೋಷಕರ(parents) ದೂರನ್ನುಆಧರಿಸಿ ಕಾರ್ಯಾಚರಣೆ ನಡೆಸಿದ ಮಂಗಳೂರು ಸೈಬರ್ ಕ್ರೈಮ್ ಠಾಣೆ ಪೊಲೀಸರು ಡ್ರಗ್ಸ್ ಜಾಲವೊಂದನ್ನು ಬಯಲಿಗಳೆದಿದ್ದಾರೆ.
ಮಂಗಳೂರಿನ ಪಡುಶೆಡ್ಡೆ(Padushedde) ಗ್ರಾಮದ ಹಾಲಾಡಿಯಲ್ಲಿ ಎರಡು ದಿನಗಳ ಹಿಂದೆ ಇಬ್ಬರು ಮಕ್ಕಳ ಪೋಷಕರು ಬಂದು ತಮ್ಮ ಮಕ್ಕಳು ಡ್ರಗ್ಸ್ ಅಡಿಕ್ಟ್(Drug addict) ಆಗಿರುವ ಬಗ್ಗೆ ದೂರು(complaint) ನೀಡಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ತನಿಖೆ(investigation) ನಡೆಸಿದ ಪೊಲೀಸರು ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಐವರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್(Commissioner of Police) ಸುಧೀರ್ ಕುಮಾರ್ ರೆಡ್ಡಿ(Sudhir Kumar Reddy) ಮಾಹಿತಿ ನೀಡಿದ್ದಾರೆ.
ಹಾಗು ಮಕ್ಕಳು ಡ್ರಗ್ಸ್ ಅಡಿಕ್ಷನ್ ಜಾಲಕ್ಕೆ ಸಿಲುಕಿದ್ದರೆ ಮಾಹಿತಿ ನೀಡಿ ಎಂದು ಪೋಷಕರಿಗೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
ಬಿರುಸು ಕಾರ್ಯಾಚರಣೆ ನಡೆಸಿದ ಪೊಲೀಸರು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು(Students), ಉದ್ಯೋಗಿಗಳಿಗೆ(employees) ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಐವರು ಆರೋಪಿಗಳನ್ನು(accused) ಬಂಧಿಸಿದ್ದಾರೆ.
ಮಂಗಳೂರಿನ ತುಷಾರ್ (21), ಧನ್ವಿ ಶೆಟ್ಟಿ (20), ಸಾಗರ್ ಕರ್ಕೇರಾ (19), ವಿಕಾಸ್ ಥಾಪ (23), ವಿಘ್ನೇಶ್ ಕಾಮತ್ (24) ಬಂಧಿತರು.
ಆರೋಪಿಗಳು ಮಾದಕ ವಸ್ತುಗಳನ್ನು(Narcotics) ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಒಟ್ಟು 5.20 ಲಕ್ಷ ರೂ. ಮೌಲ್ಯದ ಗಾಂಜಾ(Ganja) ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೆಟ್(small packet) ಮಾಡಿ ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದರು.
ಪ್ಯಾಕೆಟ್ಗೆ 1000 ರೂ.ನಂತೆ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ(Preliminary investigation) ತಿಳಿದುಬಂದಿದೆ.
ಆರೋಪಿಗಳಿಗೆ ಗಾಂಜಾ ಪೂರೈಕೆಯಾಗಿದ್ದು ಎಲ್ಲಿಂದ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾರ್ವಜನಿಕರು(public) ಖಚಿತ ಮಾಹಿತಿ ಕೊಟ್ಟರೆ ಮಂಗಳೂರಿನಲ್ಲಿ ಎಲ್ಲಿಯೂ ಸಹ ಡ್ರಗ್ಸ್ ಸಿಗದಂತೆ ಮಾಡಬಹುದು. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು.
ಯಾರೇ ಡ್ರಗ್ಸ್ ಅಡಿಕ್ಟ್ ಆಗಿದ್ದರು ಅವರನ್ನು ಸಂತ್ರಸ್ತರು(victims) ಎಂದು ಪರಿಗಣಿಸುತ್ತೇವೆ. ಅವರಿಗೆ ಪೂರೈಕೆ ಮಾಡುತ್ತಿದ್ದವರನ್ನು ಬಂಧಿಸಿ(arrest) ಜೈಲಿಗೆ ಕಳುಹಿಸುತ್ತೇವೆ ಎಂದು ಪೊಲೀಸ್ ಆಯುಕ್ತರು ಭರವಸೆ ನೀಡಿದ್ದಾರೆ.
ಸದ್ಯ ಆರೋಪಿಗಳನ್ನು(Accused) ಬಂಧಿಸಿ ಜೈಲಿಗಟ್ಟಲಾಗಿದೆ. ಇನ್ನು ಮುಂದೆ ಅವರು ಡ್ರಗ್ಸ್ ಪೂರೈಕೆ ಮಾಡಲು ಸಾಧ್ಯವಿಲ್ಲ.
ಒಬ್ಬರು ಪೋಷಕರು ಬಂದು ದೂರು ಕೊಟ್ಟಿದದರಿಂದ 200 ಜನರಿಗೆ ಡ್ರಗ್ಸ್ ಪೂರೈಕೆಯಾಗುತ್ತಿದ್ದುದನ್ನು ತಡೆಯವುದು ಸಾಧ್ಯವಾಗಿದೆ.
ಇದನ್ನು ಓದಿ : ಚಿನ್ನಸ್ವಾಮಿ ಕ್ರೀಡಾಂಗಣ ಪ್ರಕರಣ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಆರ್ಸಿಬಿಗೆ ನೋಟಿಸ್
ಅದೇ ರೀತಿ ಹತ್ತು ಜನ ಬಂದು ದೂರು ಕೊಟ್ರೆ 2 ಸಾವಿರ ಜನರಿಗೆ ಗಾಂಜಾ (Complaints against children) ಪೂರೈಕೆ ಮಾಡದಂತೆ ಪೊಲೀಸರು ಕ್ರಮ ಕೈಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.