ಬೆಂಗಳೂರು : ರಾಜ್ಯದ ಮದರಸಾಗಳಲ್ಲಿ ಬೋಧಿಸಲಾಗುತ್ತಿರುವ ಶಿಕ್ಷಣದ ಮೇಲೆ ನಿಗಾವಹಿಸಲು ರಾಜ್ಯ(State) ಬಿಜೆಪಿ ಸರ್ಕಾರ(BJP Government) ಮುಂದಾಗಿದೆ.
ಮದರಸಾ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತರಪ್ರದೇಶ(UttarPradesh) ಮಾದರಿಯಲ್ಲಿ ವಿಶೇಷ ಮಂಡಳಿ ರಚನೆ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಇನ್ನು ರಾಜ್ಯದಲ್ಲಿರುವ ಎಲ್ಲ ಮದರಸಾಗಳ ಮಾಹಿತಿ ಪಡೆಯಲು ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ರಾಜ್ಯದ ಮದರಸಾ ಶಿಕ್ಷಣದ ಕುರಿತು 15 ದಿನಗಳಲ್ಲಿ ವರದಿ ನೀಡುವಂತೆ ಶಿಕ್ಷಣ ಸಚಿವರು(Education Minister) ಸೂಚನೆ ನೀಡಿದ್ದಾರೆ. ಅಧಿಕಾರಿಗಳ ವರದಿ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
https://vijayatimes.com/tumkuru-road-accident-kills-9/
ಮಂಡಳಿ ರಚನೆಗೆ ಕಾರಣವೇನು? ರಾಜ್ಯದಲ್ಲಿ 900 ಮದರಸಾಗಳು ವಕ್ಫ್ ಬೋರ್ಡ್ ಅಡಿ ನೋಂದಣಿಯಾಗಿದ್ದು, ಪ್ರತಿ ವರ್ಷ ರಾಜ್ಯ ಸರ್ಕಾರದಿಂದ 10 ಲಕ್ಷ ರೂಪಾಯಿ ನೆರವು ನೀಡಲಾಗುತ್ತಿದೆ. ಆದರೆ ಮದರಸಾಗಳಲ್ಲಿ ಆಧುನಿಕ ಶಿಕ್ಷಣದ ಬದಲಾಗಿ ಧರ್ಮ ಬೋಧನೆ ಮಾಡಲಾಗುತ್ತಿದೆ ಎಂಬ ಆರೋಪ ಬಂದಿದೆ.
ಹೀಗಾಗಿಯೇ ಬಿಜೆಪಿ ಮುಖಂಡ ಸಿಟಿ ರವಿ(CT Ravi) ಟ್ವೀಟ್(Tweet) ಮಾಡಿ ಮದರಸಾ ಶಿಕ್ಷಣದ ಬಗ್ಗೆ ಬಹಿರಂಗ ಆಕ್ಷೇಪ ವ್ಯಕ್ತಪಡಿಸಿದರು. ಇದೀಗ ಸರ್ಕಾರ ಉತ್ತರಪ್ರದೇಶ ಮಾದರಿಯಲ್ಲಿ ವಿಶೇಷ ಮಂಡಳಿ ರಚನೆ ಮಾಡಲು ಮುಂದಾಗಿದೆ.
ವಿಶೇಷ ಮಂಡಳಿ ಕಾರ್ಯವೇನು ? :
ಮದರಸಾಗಳಲ್ಲಿ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ ಎಂಬುದನ್ನು ಪರೀಕ್ಷಿಸುವುದು.
ಮದರಸಾಗಳಲ್ಲಿ ಧರ್ಮ ಬೋಧನೆ ಆರೋಪದ ಬಗ್ಗೆ ವರದಿ ಸಂಗ್ರಹಿಸಬೇಕು.
ಪಠ್ಯಕ್ರಮವನ್ನು ನಿರ್ಧರಿಸುವುದು.
ಖಾಸಗಿ ಮದರಸಾಗಳ ಅನುದಾನ ಮೂಲ ಏನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಬೇಕು.
ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮಗಳನ್ನು ನಡೆಸಬೇಕು.
ಮೂಲಭೂತ ಕರ್ತವ್ಯಗಳ ಪಾಲನೆ ಆಗ್ತಿದೆಯಾ ಎಂಬ ವರದಿ ಸಂಗ್ರಹಿಸಬೇಕು.
ಸರ್ಕಾರ ನೀಡುವ ಅನುದಾನ ಸಮರ್ಪಕವಾಗಿ ಬಳಕೆಯಾಗುವಂತೆ ನಿಗಾ ವಹಿಸಬೇಕು.